600 ಕೋಟಿ ರೂ.ನ ನೂತನ ಅನುಭವ ಮಂಟಪ ಶೀಘ್ರ ಲೋಕಾರ್ಪಣೆ
ಜಿಲ್ಲೆಯ ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆಯ ದಡದಲ್ಲಿ 7.5 ಎಕರೆ ವಿಸ್ತಾರ, ಸುಮಾರು 600 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ, 6 ಅಂತಸ್ತಿನ ಅನುಭವ ಮಂಟಪದ ಕಾಮಗಾರಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವೀಕ್ಷಿಸಿದರು.ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
-
Ashok Nayak
Jul 7, 2026 9:11 AM
ಡಿಕೆಶಿ ಇಷ್ಟಲಿಂಗ ಧ್ಯಾನ
ಬಸವಕಲ್ಯಾಣದಲ್ಲಿ ಕಾಮಗಾರಿ ವೀಕ್ಷಣೆ
ಬೀದರ: ಜಿಲ್ಲೆಯ ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆಯ ದಡದಲ್ಲಿ 7.5 ಎಕರೆ ವಿಸ್ತಾರ, ಸುಮಾರು 600 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ, 6 ಅಂತಸ್ತಿನ ಅನುಭವ ಮಂಟಪದ ಕಾಮಗಾರಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವೀಕ್ಷಿಸಿದರು.ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಇದೇ ವೇಳೆ ಬಸವಾದಿ ಶರಣರು ಪ್ರತಿಪಾದಿಸಿದ ಇಷ್ಟಲಿಂಗವನ್ನು ತಮ್ಮ ಹಸ್ತದಲ್ಲಿಟ್ಟುಕೊಂಡು ಸುಮಾರು ಎರಡು ನಿಮಿಷಗಳ ಕಾಲ ಧ್ಯಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಸವೇಶ್ವರರ ತತ್ವ, ಆದರ್ಶ ಮತ್ತು ಸಂದೇಶಗಳು ವಿಶ್ವದಾದ್ಯಂತ ಪ್ರಚಾರ ವಾಗುತ್ತಿವೆ. ನಮ್ಮ ಸರಕಾರವು ಬಸವಣ್ಣರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಿದೆ. ಶೀಘ್ರದಲ್ಲೇ ಅನುಭವ ಮಂಟಪ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.