K H Muniyappa: ಮಾದಿಗ ಸಮುದಾಯದ ಅಭಿವೃದ್ದಿಗೆ ಶ್ರಮಿಸಲಾಗುವುದು: ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ
ಮಾದಿಗ ಸಮುದಾಯ ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಮಹಾಸ್ವಾಮೀಜಿ ಆರ್ಶೀವಚನ ನೀಡಿ, ಮಾದಿಗ ಸಮುದಾಯದ ಬಗ್ಗೆ ಜಾಂಬವ ಪುರಾಣ ಅತ್ಯಂತ ಶ್ರೇಷ್ಠ ಪುರಾಣಗಳಲ್ಲೊಂದಾಗಿದೆ.ಇದು ದೇವ ನಾಗರೀಕ ಲಿಪಿಯಲ್ಲಿ ಉಲ್ಲೇಖವಾಗಿದೆ ಎಂದ ಅವರು, ಸಮುದಾಯದವರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ನಮ್ಮ ಸಮುದಾಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಖ್ಯವಾಹಿನಿಗೆ ತರಬೇಕು
ಮಾದಿಗ ಸಮುದಾಯದ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಸಚಿವ ಕೆ,ಹೆಚ್,ಮುನಿಯಪ್ಪ ತಿಳಿಸಿದರು. -
ಗೌರಿಬಿದನೂರು : ಮಾದಿಗ ಮಹಾಸಭಾ , ರಾಜ್ಯದಲ್ಲಿ ಮಾದಿಗ ಸಮುದಾಯದ ಆರ್ಥಿಕ, ಸಾಮಾ ಜಿಕ, ರಾಜಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುವ ಒಂದು ಸಂಸ್ಥೆಯಾಗಿದೆ ಎಂದು ಆಹಾರ ಮತ್ತು ನಾಗರೀಕ ಸಚಿವ ಹಾಗೂ ಕರ್ನಾಟಕ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಕರ್ನಾಟಕ ಮಾದಿಗ ಮಹಾಸಭಾ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಪಕ್ಷಾತೀತವಾಗಿ ಮಾದಿಗ ಮಹಾಸಭಾ ಶೈಕ್ಷಣಿಕವಾಗಿ ತನ್ನದೇ ಆದ ಮಹತ್ತರ ವಾದ ಬದ್ಧತೆ ಹೊಂದಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ನಿರಂತರ ಹೋರಾಟ ಮಾಡುವ ಮೂಲಕ ಸಮುದಾಯದ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ ಎಂದರು.
ಮಾದಿಗ ಮಹಾಸಭಾ ವತಿಯಿಂದ ಸಮುದಾಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಉನ್ನತ ಮಟ್ಟದ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಲಾಗುವುದು. ಇದರಿಂದ ಸಮುದಾಯದ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Minister K.H. Muniyappa: ಸದ್ಯಕ್ಕೆ ದಲಿತ ಸಿಎಂ ವಿಚಾರ ಬೇಡ ಎಂದ ಸಚಿವ ಕೆ.ಹೆಚ್.ಮುನಿಯಪ್ಪ
ಹೆಜ್ಜೆ ಗುರುತು: ಸಮಾಜಕ್ಕೆ ಸಮುದಾಯಕ್ಕೆ ನಮ್ಮ ಕೊಡುಗೆ ಏನು ಎಂದು ನಮಗೆ ನಾವು ಪ್ರಶ್ನಿಸಿ ಕೊಳ್ಳಬೇಕು. ಸಮಾಜಕ್ಕೆ ನಮ್ಮ ಹೆಜ್ಜೆಗುರುತುಗಳನ್ನು ಬಿಡುವ ಮೂಲಕ ಮುಂದಿನ ಪೀಳಿಗೆಗೆ ಸಮಾಜದ ಹಾಗೂ ಸಮುದಾಯದ ಅಭ್ಯುದಯಕ್ಕೆ ನಾಂದಿಯಾಗಬೇಕು ಎಂದು ತಿಳಿಸಿದರು.
ಮಾದಿಗ ಸಮುದಾಯ ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಮಹಾಸ್ವಾಮೀಜಿ ಆರ್ಶೀವಚನ ನೀಡಿ, ಮಾದಿಗ ಸಮುದಾಯದ ಬಗ್ಗೆ ಜಾಂಬವ ಪುರಾಣ ಅತ್ಯಂತ ಶ್ರೇಷ್ಠ ಪುರಾಣಗಳಲ್ಲೊಂದಾಗಿದೆ.ಇದು ದೇವ ನಾಗರೀಕ ಲಿಪಿಯಲ್ಲಿ ಉಲ್ಲೇಖವಾಗಿದೆ ಎಂದ ಅವರು, ಸಮುದಾಯದವರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ನಮ್ಮ ಸಮುದಾಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ , ರಾಜಕೀಯವಾಗಿ ಮುಖ್ಯವಾಹಿನಿಗೆ ತರಬೇಕು ಎಂದು ಕರೆ ನೀಡಿದರು.
ಕೆ.ಹೆಚ್.ಮುನಿಯಪ್ಪ ಸಿಎಂ ಆಗಲಿ: ಅತಿ ಹೆಚ್ಚು ಜನ ಸಂಖ್ಯೆಯಿರುವ ಮಾದಿಗ ಸಮುದಾಯವು ಕೆ.ಎಚ್.ಮುನಿಯಪ್ಪರವರನ್ನು ಮುಖ್ಯಮಂತ್ರಿಯನ್ನಾಗಿಸಲು ಧ್ವನಿ ಎತ್ತಬೇಕು, ಈ ಬಗ್ಗೆ ಜಾಗೃತಿ ಯಾಗಬೇಕು ಎಂದು ಕರೆ ನೀಡಿದರು.
ಮಾತಂಗ ಫೌಂಡೇಷನ್ ಅಧ್ಯಕ್ಷ ಆರ್.ಲೋಕೇಶ್ ಮಾತನಾಡಿ, ಮಾದಿಗ ಸಮುದಾಯ ತನ್ನದೇ ಆದರ ಪರಂಪರೆ ಮತ್ತು ಇತಿಹಾಸವನ್ನು ಹೊಂದಿದೆ ಈ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ನಮ್ಮ ಸಮುದಾಯದ ಇತಿಹಾಸವನ್ನು ಪುನರ್ಸ್ಥಾಪಿಸುವುದರ ಜೊತೆಗೆ ನಮ್ಮ ಮಕ್ಕಳ ಶೈಕ್ಷಣಿ ಅಭಿವೃದ್ಧಿಯ ಮೂಲಕ ನಮ್ಮ ಸಮುದಾಯವನ್ನು ಎಲ್ಲ ಕ್ಷೇತ್ರಗಳಲ್ಲೂ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾದಿಗ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಲಿ ನಾಯಕನಹಳ್ಳಿ ಮುನಿಯಪ್ಪ ಮಾತನಾಡಿ, ನಮ್ಮ ಸಮುದಾಯದ ಅಭಿವೃದ್ಧಿಗೆ ಹಾಗೂ ನಮ್ಮ ಹಕ್ಕುಗಳನ್ನು ಪಡೆಯಲು ಪ್ರತಿಯೊಬ್ಬರು ಮಾದಿಗ ಮಹಾಸಭಾ ಸದಸ್ಯತ್ವಕ್ಕೆ ನೋಂದಣೆ ಯಾಗುವ ಮೂಲಕ ಸಮುದಾಯ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುವಂತೆ ಮನವಿ ಮಾಡಿದರು.
ಹಿರಿಯ ವಕೀಲ ಹಾಗೂ ಸಮುದಾಯದ ಮುಖಂಡ ಹೆಚ್.ಎಲ್.ವಿ.ವೆಂಕಟೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಸಮುದಾಯ ವಿದ್ಯಾರ್ಥಿ ಸಂಕೇತ್ರಾಜ್ ಐಐಟಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ರ್ಯಾಂಕ್ ಪಡೆದ ಸಂಕೇತ್ರಾಜ್, ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ನಕ್ಷತ್ರ ಅವರನ್ನು ಸಚಿವ ಕೆ.ಎಚ್.ಮುನಿಯಪ್ಪ ಸನ್ಮಾನಿಸಿ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ದ್ದರು.
ವೇದಿಕೆಯಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರಾಜ್ಯ ಸಂಘಟಕ ಡಿ.ಕೆ.ಶಿವಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಕಾಳೇನಹಳ್ಳಿ ನರಸಿಂಹಪ್ಪ, ರಾಮಕೃಷ್ಣಪ್ಪ, ಜಿಲ್ಲಾಧ್ಯಕ್ಷ ಪಟರನಹಳ್ಳಿ ಕೃಷ್ಣಪ್ಪ, ಶ್ರೀನಿವಾಸ್, ಮಾತಾಂಗ ಪೌಂಡೇಷನ್ ಜಿಲ್ಲಾಧ್ಯಕ್ಷ ವೆಂಕಟೇಶ್, ಜಿ.ಪಂ. ಮಾಜಿ ಸದಸ್ಯರಾದ ರಾಮಾಂಜಿನಮ್ಮ, ಅರುಂಧತಿ,ಡಿ.ನರಸಿAಹಮೂರ್ತಿ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮಲ್ಲಸಂದ್ರ ಗಂಗಾಧರಪ್ಪ,ತಾಲೂಕು ಪಂಚಾಯತಿ ಮಾಜಿ ಸದಸ್ಯ ಹಾಗೂ ವಕೀಲ ಜಿ.ನರಸಿಂಹಮೂರ್ತಿ, ಹುಲಿಕುಂಟೆ ಅಶ್ವತ್ಥಪ್ಪ, ಮೈಲರಾಪ್ಪ, ನಾಗಾರ್ಜುನ್, ಕೆ.ನಂಜುಂಡಪ್ಪ, ಸಿ.ಎಸ್.ಜಯರಾಮ್, ವೈಟಿ.ಪ್ರಸನ್ನ, ಕಾಂತರಾಜು, ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.