ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ (MP Dr K Sudhakar) ನಗರ ಹೊರವಲಯ ಕೆ.ವಿ.ಕ್ಯಾಂಪಸ್ ಬಳಿಯಿರುವ ತಾತ್ಕಾಲಿಕ ಹೂವಿನ ಮಾರುಕಟ್ಟೆಗೆ ಭೇಟಿ ನೀಡಿ ರೈತರು ಮತ್ತು ವರ್ತಕರ ಜತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಕೆ.ವಿ.ಕ್ಯಾಂಪಸ್ ಬಳಿಯಿರುವ ತಾತ್ಕಾಲಿಕ ಹೂವಿನ ಮಾರುಕಟ್ಟೆಯ ಸಮೀಪ ೩ ಕಿ.ಮೀಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಂಸದರು ತಮ್ಮ ಅನಾರೋಗ್ಯದ ನಡುವೆಯೂ ಭೇಟಿ ನೀಡಿ ಹೂವಿನ ಬೆಳೆಗಾರರು ಮತ್ತು ವರ್ತಕರಿಂದ ಘಟನೆಗೆ ಸಂಬAಧಿಸಿದ ಮಾಹಿತಿಯನ್ನು ಕಲೆ ಹಾಕಿದರು.
ಮಾರುಕಟ್ಟೆಯ ಉದ್ದಕ್ಕೂ ಇರುವ ಹೂವಿವ ಅಂಗಡಿಗಳ ಬಳಿ ಹೋಗಿ ಇಂದಿನ ಧಾರಣೆ ಮತ್ತು ಆವಕದ ಮಾಹಿತಿಪಡೆದರು. ಈ ವೇಳೆ ವರ್ತಕರು ತಮ್ಮ ಸಮಸ್ಯೆ ಹೇಳಿಕೊಂಡರೆ, ರೈತರು ತಮಗಾಗುತ್ತಿರುವ ಸಮಸ್ಯೆ, ಹೂವಿನ ಬೆಳೆಗಾರರ ಸಂಕಷ್ಟಗಳನ್ನು ಎಳೆಎಲೆಯಾಗಿ ಸಂಸದ ಮುಂದೆ ಬಿಚ್ಚಿಟ್ಟು ಬೇಗನೆ ಮಾರುಕಟ್ಟೆ ನಿರ್ಮಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: MP Dr K Sudhakar: ಮಾಲೂರು ಎಂ.ಎಲ್.ಎ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧು ಹೈಕೋರ್ಟ್ ತೀರ್ಪು: ಸಂಸದ ಡಾ.ಕೆ.ಸುಧಾಕರ್ ಸ್ವಾಗತ
ರೈತರ ಸಂಕಷ್ಟಗಳಿಗೆ ಮರುಗಿದ ಸಂಸದರು ಕೂಡಲೇ ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು, ಅಗಲಗುರ್ಕಿ ಪಂಚಾಯಿತಿ ಪಿಡಿಒ, ಅಧ್ಯಕ್ಷರನ್ನು ಕರೆಸಿಕೊಂಡು ಮಾರುಕಟ್ಟೆಯಲ್ಲಿ ಕೊರತೆ ಯಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು.ಕುಡಿಯುವ ನೀರು, ಶೌಚಾಲಯ, ರಸ್ತೆ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು.
ಸಂಚಾರಿ ದಟ್ಟಣೆ ಸಮಸ್ಯೆ ಸರಿಪಡಿಸಲು ನಂದಿಗಿರಿಧಾಮ ಪೊಲೀಸ್ ಠಾಣೆ ಸಬ್ ಇನ್ಸ್ಪಕ್ಟರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ನಿತ್ಯವೂ ಇಲ್ಲಿಗೆ ಪೊಲೀಸ್ ಪಹರೆ ಹಾಕುವುದು, ಸಂಚಾರಿ ದಟ್ಟಣೆ ಆಗದಂತೆ ಕ್ರಮವಹಿಸಬೇಕು.ಹಬ್ಬಗಳ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿ ತಮಿಳು ನಾಡಿನ ತರಹೆ ಆದರೆ ಯಾರು ಹೊನೆಯಾಗುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಂದಿಸಿದ ಸಬ್ ಇನ್ಸ್ಪೆಕ್ಟರ್ ಹಬ್ಬ ಹರಿದಿನಗಳಲ್ಲಿ ಕೂಡಲೇ ಇಲ್ಲಿಗೆ ಪೊಲೀಸ್ ಬೀಟ್ ಹಾಕುವುದಾಗಿ ಸಂಸದರಿಗೆ ತಿಳಿಸಿದರು.
ಸಂಸದರನ್ನು ಭೇಟಿ ಮಾಡಿದ ಒಂದಿಷ್ಟು ಹೂವಿನ ಬೆಳೆಗಾರರು ನಮಗೆ ನಂದಿಕ್ರಾಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಹೂವಿನ ಮಾರುಕಟ್ಟೆ ಬೇಡ. ನಗರಕ್ಕೆ ಹತ್ತಿರದಲ್ಲಿಯೇ ಮಾಡಿಸಿ ಕೊಡಲು ಕ್ರಮವಹಿಸಿ.ಹೆದ್ದಾರಿಯಲ್ಲಿ ರೈತರು ಸಂಚಾರ ಮಾಡಬೇಕಿರುವುದರಿಂದ ಅಪಾಯ ಎದುರಾಗುವ ಸಂಭವವಿದೆ. ಈಗಾಗಲೇ ಹೂವನ್ನು ಹೊತ್ತು ತರುವ ಸಾಕಷ್ಟು ರೈತರು ಅಪಘಾತಗಳಿಗೆ ಗುರಿಯಾಗಿ ಪ್ರಾಣ ಬಿಟ್ಟಿರುವ ನಿದರ್ಶನಗಳು ಕಣ್ಣ ಮುಂದಿವೆ ಎಂದು ಮನವಿ ಮಾಡಿದರು.
*
ಈ ವೇಳೆ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಮಾತನಾಡಿ, ಚಿಕ್ಕಬಳ್ಳಾಪುರ ಕೆ.ವಿ.ಕ್ಯಾಂಪಸ್ ಬಳಿ ಇರುವ ಹೂವಿನ ಮಾರುಕಟ್ಟೆ ಬಳಿಯಿರುವ ಹೂವಿನ ಮಾರುಕಟ್ಟೆಗೆ ಸಂಸದ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದರು.ರೈತರ ಮತ್ತು ವರ್ತಕರ ಸಮಸ್ಯೆಗಳು,ರೈತರ ಸಮಸ್ಯೆಗಳನ್ನು ಆಲಿಸಿ ಕೂಡಲೇ ಪರಿಹಾರ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿಯೇ ದೊಡ್ಡ ಹೂವಿನ ಮಾರುಕಟ್ಟೆ ಎಂದು ಹೆಸರು ಪಡೆದಿರುವ ಇಲ್ಲಿ ಮೂಲಭೂತ ಸೌಕರ್ಯಗಳಿಗೆ ಬರವಿದೆ.
ಕುಡಿಯುವ ನೀರಿನ ವ್ಯವಸ್ಥೆಯಿಲ್ಲ,ಶೌಚಾಲಯವಿಲ್ಲ. ರೈತರಿಗೆ ವಿಶ್ರಾಂತಿ ಗೃಹವಿಲ್ಲ. ಮಾರುಕಟ್ಟೆ ಗಬ್ಬುನಾರುತ್ತಿದ್ದು ವ್ಯಾಪಾರಿಗಳು ಮತ್ತು ರೈತರ ಸುಗಮ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ. ಇದರಿಂದಾಗಿ ಕಷ್ಟಪಟ್ಟು ದುಡಿಯುವ ರೈತರ ಶ್ರಮಕ್ಕೆ ಬೆಲೆಯಿಲ್ಲದಂತಾಗುತ್ತಿದೆ. ಸೋಮವಾರ ಬೆಳಿಗ್ಗೆ ೩ ಕಿ.ಮೀ.ವರೆಗೂ ಟ್ರಾಫೀಕ್ ಜಾಮ್ ಆಗಿದ್ದರಿಂದ ರೈತರು ಸಕಾಲದಲ್ಲಿ ಮಾರುಕಟ್ಟೆಗೆ ಹೂವನ್ನು ತರಲಾಗದೆ ನವರಾತ್ರಿ, ಆಯುಧಪೂಜೆಯಂತಹ ಬೇಡಿಕೆಯ ದಿನಗಳಲ್ಲಿಯೇ ಕೆ.ಜಿ. ಹೂವಿನ ಬೆಲೆ ೫೦/೬೦ಕ್ಕೆ ಬಿಕರಿಯಾಗುವ ದುಸ್ಥಿತಿ ಎದುರಾಗಿದೆ. ಹೂವಿನ ಆವಕ ಕಡಿಮೆ ಯಿರುವುದರಿಂದ ಕೆ.ಜಿ ಸೇವಂತಿ ೨೦೦ ರೂಪಾಯಿ, ಗುಲಾಬಿ-೩೫೦ ಚೆಮಟು ೯೦ ರೂಪಾಯಿಗೆ ಮಾರಾಟವಾಗಿದೆ. ದಯವಿಟ್ಟು ಸಂಚಾರಿ ಸಮಸ್ಯೆ ಪರಿಹರಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಈ ವೇಳೆ ವರ್ತಕರ ಸಂಘದ ರವೀಂದ್ರ, ಅಶೋಕ್, ಬಾಬು, ನಗರಸಭಾ ಅಧ್ಯಕ್ಷ ಗಜೇಂದ್ರ, ಅಗಲಗುರ್ಕಿ ಗ್ರಾಮಪಮಚಾಯಿತಿ ಅಧ್ಯಕ್ಷ ಗೋವಿಂದ, ಪಿಡಿಒ ಅಶೋಕ್, ಎಪಿಎಂಸಿ ಸಹಾಯಕ ನಿರ್ದೇಶಕಿ, ನಗರಸಭಾ ಸದಸ್ಯ ಸ್ವಾತಿ ಮಂಜುನಾಥ್ ಮತ್ತಿತರರು ಇದ್ದರು.