MP Dr K Sudhakar: ಮಾಲೂರು ಎಂ.ಎಲ್.ಎ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧು ಹೈಕೋರ್ಟ್ ತೀರ್ಪು: ಸಂಸದ ಡಾ.ಕೆ.ಸುಧಾಕರ್ ಸ್ವಾಗತ
ಕಾಂಗ್ರೆಸ್ ಪಕ್ಷ ಅನೇಕ ದಶಕಗಳಿಂದ ವಾಮಮಾರ್ಗದಲ್ಲಿ ಗೆಲ್ಲುವುದನ್ನು ರೂಢಿ ಮಾಡಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಇವಿಎಂ ಮೂಲಕ ಪಾರದರ್ಶಕವಾದ ಚುನಾವಣೆಗಳು ನಡೆಯುತ್ತಿವೆ. ಆದರೆ ಇವಿಎಂ ಇದ್ದಾಗಲೂ ನಂಜೇಗೌಡರನ್ನು ಗೆಲ್ಲಿಸಲಾಗಿದೆ. ಮರು ಎಣಿಕೆಯಲ್ಲಿ ಮಂಜುನಾಥ ಗೌಡರು ಮತ್ತೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವಿದೆ.

ಸಂಸದ ಡಾ.ಕೆ.ಸುಧಾಕರ್ -

ಚಿಕ್ಕಬಳ್ಳಾಪುರ : ೨೦೨೩ರಲ್ಲಿ ನಡೆದ ಚುನಾವಣೆಯಲ್ಲಿ ಮಾಲೂರಿನ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಆಯ್ಕೆ ಅಸಿಂಧು ಎಂದು ಹೈಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ.ಇದರಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಗೌರವ ಹೆಚ್ಚಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ (MP Dr K Sudhakar) ಹೇಳಿದ್ದಾರೆ.
ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾ ಸಂಸ್ಥೆಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
೨೦೨೩ರ ಮಾಲೂರು ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಕೆ.ವೈ.ನಂಜೇಗೌಡರು ಅಧಿಕಾರಿ ಗಳನ್ನು ಬಳಸಿಕೊಂಡು ಗೆಲುವು ಸಾಧಿಸಿದ್ದರು.ಇದನ್ನು ಪ್ರಶ್ನೆ ಮಾಡಿ ಎದುರಾಳಿ ಮಂಜುನಾಥ ಗೌಡರು ಕೋರ್ಟ್ ಮೆಟ್ಟಿಲೇರಿದ್ದರು. ಸುಧೀರ್ಘ ಸಮಾಲೋಚನೆ ನಂತರ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮರು ಮತ ಎಣಿಕೆ ಮಾಡಬೇಕೆಂದು ಆದೇಶಿಸಿರುವುದು ಸತ್ಯಕ್ಕೆ ಸದಾ ಗೆಲುವಿದೆ ಎಂಬುದನ್ನು ಒತ್ತಿ ಹೇಳಿದೆ.
ಇದನ್ನೂ ಓದಿ: MP Dr K Sudhakar: ಸಂಸದ ಸುಧಾಕರ್ ದಲಿತ ವಿರೋಧಿ ಎನ್ನುವ ಕಾಂಗ್ರೆಸ್ ಮುಖಂಡರ ಆರೋಪ ನಿರಾಧಾರ: ಗಂಗರೇಕಾಲುವೆ ಮೂರ್ತಿ
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆ ದೊರೆತ ಕೂಡಲೇ ನಂಜೇಗೌಡ ತನ್ನ ಪ್ರಭಾವ ಬೀರಿ ಅಧಿಕಾರಿಗಳು ತಮ್ಮಪರವಾಗಿ ಮತ ಎಣಿಕೆ ಮಾಡಿದ್ದಾರೆ ಎಂಬ ಅನುಮಾನ ಖಚಿತವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಅನೇಕ ದಶಕಗಳಿಂದ ವಾಮಮಾರ್ಗದಲ್ಲಿ ಗೆಲ್ಲುವುದನ್ನು ರೂಢಿ ಮಾಡಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಇವಿಎಂ ಮೂಲಕ ಪಾರದರ್ಶಕವಾದ ಚುನಾವಣೆಗಳು ನಡೆಯುತ್ತಿವೆ. ಆದರೆ ಇವಿಎಂ ಇದ್ದಾಗಲೂ ನಂಜೇಗೌಡರನ್ನು ಗೆಲ್ಲಿಸಲಾಗಿದೆ. ಮರು ಎಣಿಕೆಯಲ್ಲಿ ಮಂಜುನಾಥ ಗೌಡರು ಮತ್ತೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವಿದೆ. ಮಾಲೂರಿನ ಮಹಾ ಜನತೆಗೆ ಅವರ ಸೇವೆ ಸಿಗಲಿದೆ ಎಂದು ಹೇಳಿದ್ದಾರೆ.
ಚುನಾವಣಾ ಅಕ್ರಮಕ್ಕೆ ಯಾರಾದರೂ ಪಿತಾಮಹ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಇದೇ ರೀತಿ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನವಿದ್ದು ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.