ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ
ಕೋಲಾರ ಜಿಲ್ಲೆಯ ನರಸಾಪುರ ಟಾಟಾ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕಳೆದ ಎರಡು ವರ್ಷ ಗಳಿಂದ ಚಿಂತಾಮಣಿ ತಾಲ್ಲೂಕಿನ ಅಂಬಾಜಿ ದುರ್ಗಾ ಹೋಬಳಿ ವ್ಯಾಪ್ತಿಯ ಭೂಮಿ ಶೆಟ್ಟಹಳ್ಳಿ ಗ್ರಾಮದ ಎಸ್ ಸಿ ಬೋವಿ ಜನಾಂಗಕ್ಕೆ ಸೇರಿದ ಮನೋಜ್ ಎನ್(23 ವರ್ಷ) ಆಂಧ್ರ ಪ್ರದೇಶದ ಬಿ ಕೊತ್ತಕೋಟೆ ಸಮೀಪದ ವಲಗುಟ್ಟಲಪಲ್ಲಿ ಗ್ರಾಮದ ಜಿ ಸೀರಿಶಾ(22 ವರ್ಷ)ಕೆಲಸ ಮಾಡು ತ್ತಿದ್ದು ಇವರಿಬ್ಬರ ಮಧ್ಯದಲ್ಲಿ ಪ್ರೀತಿ ಪ್ರೇಮ ಎನ್ನುವುದು ಬೆಳೆದಿದೆ

ರಕ್ಷಣೆಮೊರೆ ಹೋಗಿರುವ ವಿವಾಹಿತರ ಪೋಟೋ

ಚಿಂತಾಮಣಿ: ಅವರಿಬ್ಬರೂ ಪ್ರೀತಿಸಿ ಮದುವೆಯಾದ ನವಜೋಡಿ. ಪ್ರೀತಿಸೋ ಸಮಯ ದಲ್ಲಿ ಹತ್ತಾರು ಕನಸು ಕಂಡಿದ್ದ ಜೋಡಿಹಕ್ಕಿಗಳು.ಒಳ್ಳೆ ಜೀವನ ನಡೆಸಬೇಕು ಎಂದು ಕೊಂಡಿದ್ದ ದಂಪತಿ. ಅಂತರ್ಜಾತಿ ಮದುವೆಯಾದ ಅಥವಾ ಪ್ರೀತಿಸಿ ಮದುವೆ ಯಾದ ಮೇಲೆ ಎಲ್ಲೆಡೆಯೂ ನಡೆಯೋ ಹಾಗೆ ಹುಡುಗಿ ಇವರ ಮನೆಯಲ್ಲೂ ವಿರೋಧ ವ್ಯಕ್ತ ವಾಗಿದೆ. ಹೀಗಾಗಿ ನಮಗೆ ಜೀವಭಯ ಇದೆ ರಕ್ಷಣೆ ಕೊಡಿ ಅಂತ ಈ ಜೋಡಿ ಈಗ ಪೊಲೀಸರ ಮೊರೆಹೋಗಿದ್ದಾರೆ.
ಕೋಲಾರ ಜಿಲ್ಲೆಯ ನರಸಾಪುರ ಟಾಟಾ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಂತಾಮಣಿ ತಾಲ್ಲೂಕಿನ ಅಂಬಾಜಿ ದುರ್ಗಾ ಹೋಬಳಿ ವ್ಯಾಪ್ತಿಯ ಭೂಮಿ ಶೆಟ್ಟಹಳ್ಳಿ ಗ್ರಾಮದ ಎಸ್ ಸಿ ಬೋವಿ ಜನಾಂಗಕ್ಕೆ ಸೇರಿದ ಮನೋಜ್ ಎನ್(23 ವರ್ಷ) ಆಂಧ್ರ ಪ್ರದೇಶದ ಬಿ ಕೊತ್ತಕೋಟೆ ಸಮೀಪದ ವಲಗುಟ್ಟಲಪಲ್ಲಿ ಗ್ರಾಮದ ಜಿ ಸೀರಿಶಾ(22 ವರ್ಷ)ಕೆಲಸ ಮಾಡುತ್ತಿದ್ದು ಇವರಿಬ್ಬರ ಮಧ್ಯದಲ್ಲಿ ಪ್ರೀತಿ ಪ್ರೇಮ ಎನ್ನುವುದು ಬೆಳೆದಿದೆ.
ಇದನ್ನೂ ಓದಿ: Chief Election Commissioner: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ
ಇವರಿಬ್ಬರು ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದ ಮದನಪಲ್ಲಿ ದೇವಸ್ಥಾನದಲ್ಲಿ ವಿವಾಹ ವಾಗಿದ್ದು. ಇದೀಗ ಇಂದು ಚಿಂತಾಮಣಿ ಉಪ ನೊಂದಣಿ ಅಧಿಕಾರಿಗಳ ಕಚೇರಿಗೆ ಕಾನೂ ನು ಬದ್ಧವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಬಂದಾಗ ಹುಡುಗಿ ಕಡೆಯ ಪೋಷ ಕರು ವಿರೋಧ ವ್ಯಕ್ತಪಡಿಸಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಘಟನೆ ತಲುಪಿತು.
ಇದೇ ವೇಳೆ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡು ಕುಟುಂಬಗಳನ್ನು ಚಿಂತಾಮಣಿ ನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನೂ ಹುಡುಗಿ ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮಿಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ.ಆ ಕಾರಣಕ್ಕೆ ಇಬ್ಬರನ್ನು ಬೇರ್ಪಡಿಸುವ ಪ್ರಯತ್ನ ಮಾಡಿದ್ದಾರೆ. ಕಾನೂನು ಪ್ರಕಾರ ನಾವು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಬಂದಾಗ ನನ್ನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ನನ್ನ ಹಾಗೂ ನಾನು ಮದುವೆ ಆಗಿರುವ ಹುಡುಗನಿಗೆ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗೋಕೆ ನಿರ್ಧರಿಸಿದ್ದೇವೆ ಎಂದು ಹೇಳುತ್ತಾರೆ.