ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪರಿಶ್ರಮ ಮತ್ತು ಗುರಿಯಿದ್ದರೆ ಸಾಧನೆ ಸಾಧ್ಯ: ಡಿಡಿಪಿಯು ಆದಿಶೇಷ ರಾವ್

ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮ ಮತ್ತು ಸಾಧಿಸುವ ಛಲವಿದ್ದರೆ ಗುರಿ ಮುಟ್ಟಬಹುದು ಎಂದು ಚಿಕ್ಕಬಳ್ಳಾಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆದಿಶೇಷ ರಾವ್ ಕರೆ ನೀಡಿದರು. ಮಂಚೇನಹಳ್ಳಿ ಪಟ್ಟಣದಲ್ಲಿ ದಿ ನ್ಯಾಷನಲ್ ಅಂಡ್ ರೂರಲ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ. ಶಾಲಾ ಕಾಲೇಜು 2025 26 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಶ್ರಮ ಮತ್ತು ಗುರಿಯಿದ್ದರೆ ಸಾಧನೆ ಸಾಧ್ಯ

-

Ashok Nayak
Ashok Nayak Dec 18, 2025 12:21 PM

ಮಂಚೇನಹಳ್ಳಿ : ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮ ಮತ್ತು ಸಾಧಿಸುವ ಛಲವಿದ್ದರೆ ಗುರಿ ಮುಟ್ಟಬಹುದು ಎಂದು ಚಿಕ್ಕಬಳ್ಳಾಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆದಿಶೇಷ ರಾವ್ ಕರೆ ನೀಡಿದರು.

ಮಂಚೇನಹಳ್ಳಿ ಪಟ್ಟಣದಲ್ಲಿ ದಿ ನ್ಯಾಷನಲ್ ಅಂಡ್ ರೂರಲ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ. ಶಾಲಾ ಕಾಲೇಜು 2025 26 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಯಲ್ಲಿ ಗುರು ಹಿರಿಯರನ್ನು ತಂದೆ-ತಾಯಿಯನ್ನು ಗೌರವಿ ಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು.ತಂದೆ ತಾಯಿಗೆ ಅಗೌರವ ತರುವ ಕೆಲಸಗಳನ್ನು ಎಂದಿಗೂ ಮಾಡಬಾರದು. ವಿದ್ಯೆ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ವಿನಯವೂ ಅಷ್ಟೇ ಮುಖ್ಯ ಎಂದರು. 

ಇದನ್ನೂ ಓದಿ: Chikkaballapur News: ಕುಟುಂಬದ ನೆಮ್ಮದಿ ಮತ್ತು ಜೀವ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ತಪ್ಪದೆ ಹೆಲ್ಮೆಟ್ ಧರಿಸಿ : ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಸಲಹೆ

ಪ್ರತಿ ವಿದ್ಯಾರ್ಥಿಯು ಗುರುಗಳ ಮಾರ್ಗದರ್ಶನದಲ್ಲಿ ಸ್ಪಷ್ಟ ಗುರಿಯೊಂದಿಗೆ ಸಾಧನೆಯನ್ನು ಮಾಡಬೇಕು. ಆಗ ಆಗ ಮಾತ್ರ ಹೆತ್ತವರಿಗೆ ಸಮಾಜಕ್ಕೆ ಒಳ್ಳೆಯ ಹೆಸರು ಬರಲಿದೆ. ಕಷ್ಟಪಟ್ಟು ಓದಿದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಆದ್ದರಿಂದಲೇ ಮಕ್ಕಳು ಈಗಿನಿಂದ ಶಿಸ್ತಿನ ಸಿಪಾಯಿ ಗಳಾಗಿ ಓದಿ ಯಶಸ್ಸು ಕಾಣಬೇಕು ಸಲಹೆ ನೀಡಿದರು...

ಅತಿಥಿಗಳಾಗಿ ಆಗಮಿಸಿದ್ದ ಇದೇ ಶಾಲೆಯಲ್ಲಿ ಓದಿ ಎಂಬಿಬಿಎಸ್ ಪದವಿ ಪಡೆದು. ಈಗ ಬ್ಯಾಪ್ಟಿಸ್ಟ್ ಹಾಸ್ಪಿಟಲ್ ಅಲ್ಲಿ ಐಸ್ ಸಿ ಯು ವಿಭಾಗದಲ್ಲಿ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ .ವಿ .ಭರತ್ ಎಂಬ ವೈದ್ಯರು ಮಾತನಾಡಿ ಇದೇ ಶಾಲೆಯಲ್ಲಿ ಓದಿರುವ ನಾನು ಈ ದಿನ ಈ ಸ್ಥಾನದಲ್ಲಿ ಇದ್ದೀನಿ. ಇದೇ ರೀತಿಯಲ್ಲಿ ನೀವು ಕೂಡ ಮುಂದಿನ ಭವಿಷ್ಯದಲ್ಲಿ ಉತ್ತಮ ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿ ಯಶಸ್ಸುಗಳಿಸಬೇಕೆಂದು ಹೇಳಿದರು.  

ವಿದ್ಯೆಯಿಂದ ಸಾಧನೆ ಮಾಡೋದು ಸುಲಭ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಕಾಲೇಜು ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ನರಸಿಂಹಪ್ಪನವರು ಓದಿದರು. 

ಇದೇ ಸಂದರ್ಭದಲ್ಲಿ 2024.25ನೇ ಸಾಲಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯು. ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು..

ಈ ವರ್ಷದ ಶಾಲಾ ವಾರ್ಷಿಕ ಕ್ರೀಡಾಕೂಟಗಳಲ್ಲಿ ವಿಜೇತರದ ವಿದ್ಯಾರ್ಥಿಗಳಿಗೆ. ಬಹುಮಾನ. ಪ್ರಶಸ್ತಿ ವಿತರಣೆ ಜೊತೆಗೆ ಶಾಲಾ ಆಡಳಿತ ವತಿಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು.

ಇದೇ ವೇಳೆ, ಗಣ್ಯರಿಗೆ ಸನ್ಮಾನ.. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಭರತನಾಟ್ಯ ನೃತ್ಯ ನಾಟಕ. ವಿಶೇಷವಾಗಿ ಕಾಂತರಾ ನೃತ್ಯ ಪ್ರದರ್ಶನ ಆಕರ್ಷಕವಾಗಿ ಮೂಡಿ ಬಂದಿತು.