ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶುಚಿ ರುಚಿಯಾದ ಆಹಾರಕ್ಕಾಗಿ ಜಿಲ್ಲಾಡಳಿತ ಭವನದಲ್ಲಿ ಅಕ್ಕಂದಿರೇ ನಡೆಸುವ ಅಕ್ಕ ಕೆಫೆ

ಅಕ್ಕ ಕೆಫೆ” ಹೆಸರೇ ಹೇಳುವಂತೆ ಸಂಜೀವಿನಿ-ಡೇ-ಎನ್.ಆರ್.ಎಲ್.ಎA. ಯೋಜನೆಯ ಸ್ವ-ಸಹಾಯ ಗುಂಪಿನ ಮಹಿಳೆಯರಿಂದಲೇ ನಡೆಸಲ್ಪಡುವ, ಕಛೇರಿಯ ಅಧಿಕಾರಿ ಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುಚಿ-ರುಚಿಯಾದ ಮನೆಯಡುಗೆಯಂತಹ ಆಹಾರವನ್ನು “ಒಲವಿನ ಊಟ” ವಾಗಿ ಉಣಬಡಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಯಾಗಿದೆ.

ಜಿಲ್ಲಾಡಳಿತ ಭವನದಲ್ಲಿ ಅಕ್ಕಂದಿರೇ ನಡೆಸುವ ಅಕ್ಕ ಕೆಫೆ

-

Ashok Nayak Ashok Nayak Sep 10, 2025 1:23 PM

ಚಿಕ್ಕಬಳ್ಳಾಪುರ : “ಅಕ್ಕ ಕೆಫೆ” ಹೆಸರೇ ಹೇಳುವಂತೆ ಸಂಜೀವಿನಿ-ಡೇ-ಎನ್.ಆರ್.ಎಲ್.ಎA. ಯೋಜನೆಯ ಸ್ವ-ಸಹಾಯ ಗುಂಪಿನ ಮಹಿಳೆಯರಿಂದಲೇ ನಡೆಸಲ್ಪಡುವ, ಕಛೇರಿಯ ಅಧಿಕಾರಿ ಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುಚಿ-ರುಚಿಯಾದ ಮನೆಯಡುಗೆಯಂತಹ ಆಹಾರವನ್ನು “ಒಲವಿನ ಊಟ” ವಾಗಿ ಉಣಬಡಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಯಾಗಿದೆ.

ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಂದ ಚಿಕ್ಕ ಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿರುವ ಅಕ್ಕ ಕೆಫೆಯ ಉದ್ಘಾಟನೆ ನೆರವೇರಿತು.

ಇದನ್ನೂ ಓದಿ: Chikkaballapur News: ಛಾಯಾಗ್ರಾಹಕರ ಅಕಾಡೆಮಿ ಸ್ಥಾಪಿಸುವಂತೆ ಸರಕಾರಕ್ಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹ

ಇದು ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿರುವ ಮೊದಲ ಅಕ್ಕ ಕೆಫೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಏಳು ಅಕ್ಕ ಕೆಫೆಗಳನ್ನು ಸ್ಥಾಪಿಸುವ ಗುರಿಯಿದ್ದು, ಅದರಲ್ಲಿ ಒಂದು ಅಕ್ಕ ಕೆಫೆ ಜಿಲ್ಲಾಡಳಿತ ಭವನದಲ್ಲಿ ಈಗಾಗಲೇ ಆರಂಭವಾಗಿದ್ದು, ಸಧ್ಯದಲ್ಲಿಯೇ ಪ್ರಸಿಧ್ಧ ಪ್ರವಾಸೋದ್ಯಮ ತಾಣವಾದ ನಂದಿಗಿರಿಧಾಮದಲ್ಲಿ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ತಲಾ ಒಂದೊಂದು ಅಕ್ಕ ಕೆಫೆಗಳನ್ನು ಪ್ರಾರಂಭಿಸ ಲಾಗುವುದು.

ಅಕ್ಕ ಕೆಫೆಗಳು ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಒದಗಿಸುವುದರಿಂದ ಎಲ್ಲಾ ಇಲಾಖೆ ಗಳೂ, ಸಂಘ – ಸಂಸ್ಥೆಗಳೂ ತಮ್ಮ ಇಲಾಖೆಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಜರುಗುವ ಸಭೆ-ಸಮಾರಂಭಗಳಲ್ಲಿ ಅಕ್ಕ ಕೆಫೆಯ ಆಹಾರವನ್ನು ಬಳಸಲು, ಸಾರ್ವಜನಿಕರೂ ಸಹ ಅಕ್ಕ ಕೆಫೆಯ ಆಹಾರವನ್ನು ಸವಿದು, ಸ್ವ-ಸಹಾಯ ಗುಂಪಿನ ಮಹಿಳೆಯರ ಆರ್ಥಿಕ ಅಭಿವೃಧ್ಧಿಗೆ ಉತ್ತೇಜನ ನೀಡಲು ಮನವಿ ಮಾಡಲಾಗಿದೆ.