ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ಕುಡುಮಲಕುಂಟೆಯಲ್ಲಿ ಔಷಧಿ ಕಾರ್ಖಾನೆಯಿಂದ ರಾಸಾಯನಿಕ ತ್ಯಾಜ್ಯ ವಿಲೇವಾರಿ ಆರೋಪ: ಆರೋಗ್ಯ, ಪರಿಸರಕ್ಕೆ ಅಪಾಯದ ಆತಂಕ

ಕಾರ್ಖಾನೆಯ ಹಿಂಭಾಗದಲ್ಲಿ ರಾಸಾಯನಿಕ ತ್ಯಾಜ್ಯ ನಿರಂತರವಾಗಿ ಹರಿಯುತ್ತಿರುವ ಪರಿಣಾಮ ಎಕರೆಗಟ್ಟಲೆ ಭೂಮಿ ಹಾನಿಗೊಳಗಾಗಿದ್ದು, ಮಣ್ಣಿನ ಫಲವತ್ತತೆ ಕುಂಠಿತವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾಸಾಯನಿಕ ಹರಡಿರುವ ಪ್ರದೇಶದ ಸುತ್ತಮುತ್ತಲಿನ ಸಸ್ಯಗಳು ಒಣಗಿದ್ದು, ಭೂಮಿಯಲ್ಲಿ ಹುಲ್ಲು ಸಹ ಬೆಳೆಯದ ಸ್ಥಿತಿ ನಿರ್ಮಾಣವಾಗಿದೆ

ಕುಡುಮಲಕುಂಟೆಯಲ್ಲಿ ಔಷಧಿ ಕಾರ್ಖಾನೆಯಿಂದ ರಾಸಾಯನಿಕ ತ್ಯಾಜ್ಯ ವಿಲೇವಾರಿ ಆರೋಪ: ಆರೋಗ್ಯ, ಪರಿಸರಕ್ಕೆ ಅಪಾಯದ ಆತಂಕದ ಚಿತ್ರ

ಗೌರಿಬಿದನೂರು: ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ರ್ಯಾಕ್ಸ್ ಫಾರ್ಮ್ ಕೆಮ್ ಪ್ರೈವೇಟ್ ಲಿಮಿಟೆಡ್  ಔಷಧಿ ತಯಾರಿಕಾ ಘಟಕವು ಉತ್ಪಾದನಾ ಪ್ರಕ್ರಿಯೆಯ ಬಳಿಕ ಉಳಿಯುವ ರಾಸಾಯನಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಬಯಲು ಪ್ರದೇಶಕ್ಕೆ ಹರಿಬಿಡುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುವುದರೊಂದಿಗೆ ಸಾರ್ವಜನಿಕರ ಆರೋಗ್ಯದ ಮೇಲೂ ಗಂಭೀರ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಿದ್ದಾರೆ.

ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಕಾರ್ಖಾನೆಯ ಕಾಂಪೌಂಡ್ ಗೋಡೆಯಲ್ಲಿ ರಂಧ್ರ ಮಾಡಿ ಅಳವಡಿ ಸಿರುವ ಪೈಪ್‌ಗಳ ಮೂಲಕ ರಾತ್ರಿ 10 ಗಂಟೆಯ ಬಳಿಕ ಕಾರ್ಖಾನೆಯ ಹಿಂಭಾಗದ ಬಯಲು ಪ್ರದೇಶಕ್ಕೆ ರಾಸಾಯನಿಕ ತ್ಯಾಜ್ಯವನ್ನು ನಿರಂತರವಾಗಿ ಹರಿಬಿಡಲಾಗುತ್ತಿದೆ. ಈ ವೇಳೆ ವ್ಯಾಪಿಸುವ ತೀವ್ರ ದುರ್ವಾಸನೆಯಿಂದ ಉಸಿರಾಟದ ತೊಂದರೆ ಉಂಟಾಗುತ್ತಿದ್ದು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Gauribidanur News: ಛಾಯಾಗ್ರಾಹಕರು ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ಸಂಘಟನೆಯ ಬಲ ಹೆಚ್ಚಿಸಬೇಕು: ಎನ್.ಎ. ರಾಮಚಂದ್ರ

ಕಾರ್ಖಾನೆಯ ಹಿಂಭಾಗದಲ್ಲಿ ರಾಸಾಯನಿಕ ತ್ಯಾಜ್ಯ ನಿರಂತರವಾಗಿ ಹರಿಯುತ್ತಿರುವ ಪರಿಣಾಮ ಎಕರೆಗಟ್ಟಲೆ ಭೂಮಿ ಹಾನಿಗೊಳಗಾಗಿದ್ದು, ಮಣ್ಣಿನ ಫಲವತ್ತತೆ ಕುಂಠಿತವಾಗಿದೆ ಎಂದು ಗ್ರಾಮಸ್ಥ ರು ತಿಳಿಸಿದ್ದಾರೆ. ರಾಸಾಯನಿಕ ಹರಡಿರುವ ಪ್ರದೇಶದ ಸುತ್ತಮುತ್ತಲಿನ ಸಸ್ಯಗಳು ಒಣಗಿದ್ದು, ಭೂಮಿಯಲ್ಲಿ ಹುಲ್ಲು ಸಹ ಬೆಳೆಯದ ಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಹಲವು ಬಾರಿ ಕಾರ್ಖಾನೆಯ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯ ಹಿಂಭಾಗದಲ್ಲಿ ರಾಸಾಯನಿಕ ತ್ಯಾಜ್ಯ ನಿರಂತರವಾಗಿ ಹರಿಯುತ್ತಿರುವ ಪರಿಣಾಮ ಎಕರೆಗಟ್ಟಲೆ ಭೂಮಿ ಹಾನಿಗೊಳಗಾಗಿದ್ದು, ಮಣ್ಣಿನ ಫಲವತ್ತತೆ ಕುಂಠಿತವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾಸಾಯನಿಕ ಹರಡಿರುವ ಪ್ರದೇಶದ ಸುತ್ತಮುತ್ತಲಿನ ಸಸ್ಯಗಳು ಒಣಗಿದ್ದು, ಭೂಮಿಯಲ್ಲಿ ಹುಲ್ಲು ಸಹ ಬೆಳೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ರಾಸಾಯನಿಕ ತ್ಯಾಜ್ಯ ಕಾರ್ಖಾನೆಯ ಹೊರಭಾಗದ ಖಾಲಿ ಜಾಗದಿಂದ ಜಿನುಗಿ ಸಮೀಪದ ಹಳ್ಳಕ್ಕೆ ಸೇರುತ್ತಿದ್ದು, ಮಳೆಗಾಲದಲ್ಲಿ ಕೆರೆಗೆ ಹರಿಯುವ ಸಾಧ್ಯತೆ ಇದೆ. ಇದರಿಂದ ಜಲಮೂಲಗಳು ಕಲುಷಿತವಾಗುವ ಹಾಗೂ ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅಂತರ್ಜಲ ಮಾಲಿನ್ಯದ ಸಾಧ್ಯತೆಯೂ ಇರುವುದಾಗಿ ಹೇಳಿದ್ದಾರೆ.

ಕಾರ್ಖಾನೆಯವರು ತ್ಯಾಜ್ಯ ಹರಡಿರುವ ಪ್ರದೇಶವನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸಮಸ್ಯೆಯನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತಾಲೂಕು ಆಡಳಿತ ಹಾಗೂ ಸಂಬAಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿ, ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.