ಗುಡಿಬಂಡೆ: ಪಟ್ಟಣದ ವಿನಾಯಕ ನಗರದಲ್ಲಿ ಅಯಪ್ಪ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಶುಕ್ರವಾರ ಬೆಳಗಿನ ಜಾವ ೪ ಗಂಟೆಗೆ ಅಗ್ನಿ ಪ್ರವೇಶ ಮಾಡಿದರು.
ತಾಲ್ಲೂಕಿನ ಅಯ್ಯಪ್ಪ ಸ್ವಾಮಿ ಭಕ್ತರು ಹಮ್ಮಿಕೊಂಡ ಪಲ್ಲಕ್ಕಿ ಉತ್ಸವ ಅಗ್ನಿಗುಂಡ ಮಹೋತ್ಸವ ಅಂಗವಾಗಿ ಗುರುವಾರ ಮತ್ತು ಶುಕ್ರವಾರ ಬೆಳಿಗ್ಗೆ ಯಲ್ಲಂಪಲ್ಲಿ ಆದಿಶೇಷಪ್ಪ ಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಮಹಾಗಣಪತಿ ಹೋಮ ನಡೆಸಿ ನವಗ್ರಹ ಪೂಜೆ ನಡೆಸಲಾಯಿತು. ಬಳಿಕ ಮಹಾಪೂಜೆ ನೆರವೇರಿಸಿ ಪ್ರಸಾದ ವಿತರಣೆ ಮಾಡಲಾಯಿತು.
ಇದನ್ನೂ ಓದಿ: Gudibande News: ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ : ಆಸ್ತಿ ಮಾಲೀಕರೊಡನೆ ಅಧಿಕಾರಿಗಳ ಸಭೆ
ಗುರುವಾರ ರಾತ್ರಿ ಚಿನ್ನದ ಪಲ್ಲಕ್ಕಿ ಯಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಿ ನಡೆದ ಅಯ್ಯಪ್ಪ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿಜೃಂಭಣೆಯಿAದ ಸಾಗಿತು. ಪಲ್ಲಕ್ಕಿ ಸಾಗಿದ ಕಡೆಯಲೆಲ್ಲಾ ಭಕ್ತರು ಅಯ್ಯಪ್ಪ ಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿ ಪುನೀತರಾದರು. ಗುಡಿಬಂಡೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮೆರವಣಿಗೆಯಲ್ಲಿ ಹಾಜರಿದ್ದರು.