ಚಿಂತಾಮಣಿ: ಈದ್ ಮಿಲಾದ್ ಹಬ್ಬ(Eid-Milad Festival)ವನ್ನು ಶಾಂತಿ, ಸೌಹಾರ್ದತೆ ಹಾಗೂ ಶಿಸ್ತಿನಿಂದ ಆಚರಿಸಲು ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದ್ದು, ಮೆರವಣಿಗೆ ಯಲ್ಲಿ ಡಿಜೆ, ಟ್ಯಾಬ್ಲೋ ಹಾಗೂ ಅನುಮತಿಯಿಲ್ಲದೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಚಿಂತಾಮಣಿ ನಗರ ಠಾಣೆಯ ಸಿಐ ವಿಜಿ ಕುಮಾರ್ ತಿಳಿಸಿದರು.
ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮೆರವಣಿಗೆಯಲ್ಲಿ ಬಳಸುವ ಧ್ವಜ ಹಾಗೂ ಬಾವುಟಗಳು ಮೂರು ಅಡಿಗಿಂತ ಎತ್ತರ ಇರಬಾರದು. ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಲು ನಗರಸಭೆಯಿಂದ ಪೂರ್ವಾನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿ ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ: Chinthamani News: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ: ಯು.ನಿಸಾರ್ ಅಹಮದ್
ಮುಖಂಡ ಮೂನ್‌ಸ್ಟಾರ್ ಗೌಸ್ ಪಾಷಾ ಮಾತನಾಡಿ, ಜಾಮಿಯಾ ಮಸೀದಿಯಿಂದ ಆರಂಭ ವಾಗುವ ಮೆರವಣಿಗೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಈದ್ಗಾ ಮೈದಾನ ತಲುಪಲಿದೆ. ಅಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದ ಬಳಿಕ ಸಂಜೆ 5 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಶಾಂತಿ ಕಾಪಾಡಲು ಸಂಘಟಕರು ಹಾಗೂ ಮಸೀದಿ ಮುಖಂಡರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು.
ಮುಖಂಡರಾದ ಶೇಕ್ ಸಾಧಿಕ್ ರಜ್ವಿ, ಸಿಕೆಎಲ್ ಚಂದ್ ಪಾಷಾ, ಸಮೀಉಲ್ಲಾ, ಇನಾಯತ್ ಉಲ್ಲಾ, ಅಪ್ಸರ್ ಪಾಷಾ, ಜಹೀರ್ ಪಾಷಾ, ಯೂನಿಸ್ ಪಾಷಾ ಸೇರಿದಂತೆ ಹಲವರು ಇದ್ದರು.