Bagepally News: ನೊಂದವರ ನೆರವಿಗಾಗಿ ಧಾವಿಸುವುದೇ ನಿಜವಾದ ಮಾನವ ಧರ್ಮ: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರಿನಾಥರೆಡ್ಡಿ
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರಿನಾಥರೆಡ್ಡಿ ಮಾತನಾಡಿ, ಬಾಗೇಪಲ್ಲಿ ತಾಲೂಕಿನ ಕಮ್ಮರ ವಾರಪಲ್ಲಿ ಗ್ರಾಮದಲ್ಲಿ ನಡೆದಿರುವ ದುರಂತದಲ್ಲಿ ೪೮ ಕುರಿಗಳು ಮೃತಪಟ್ಟಿವೆ, ಕುರಿಗಳ ಸಾವಿನ ದುರಂತದಿಂದ ರೈತ ಮಂಜುನಾಥ್ ಅತಂಕಕ್ಕೆ ಗುರಿಯಾಗಿದ್ದು, ಬಡ ಕುಟುಂಬದ ರೈತನಿಗೆ ನೆರವು ನೀಡಿ ದೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಅದೇ ರೀತಿಯಲ್ಲಿ ಪಶುಪಾಲನಾ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಬೇಟಿ ನೀಡಿ ಕುರಿಗಳ ಸಾವು ಅವಘಡ ಕುರಿತು ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ,


ಬಾಗೇಪಲ್ಲಿ: ಸರ್ಕಾರ ನೀಡುವ ಪರಿಹಾರ ಹಣದ ಜತೆಗೆ ಸಮಾಜ ಸೇವಕರಾದ ನಮ್ಮಿಂದ ಒಂದಿಷ್ಟು ಆರ್ಥಿಕ ನೆರವು ನೀಡಿದರೆ ಕುರಿಗಾಹಿ ಬಡ ಕುಟುಂಬಗಳ ಜೀವನಕ್ಕೆ ಸಹಕಾರಿ ಆಗಲಿದೆ ಎಂಬ ಭಾವನೆ ನಮ್ಮೆಲ್ಲರಲ್ಲಿ ಬರಬೇಕಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಅಭಿಮತ ವ್ಯಕ್ತಪಡಿಸಿದರು.
ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಕಮ್ಮರವಾರಿಪಲ್ಲಿ ಗ್ರಾಮದಲ್ಲಿ ಸಂಭವಿಸಿರುವ ಆಕಸ್ಮಿಕ ಅಗ್ನಿ ಅವಘಡದಲ್ಲಿ ರೈತ ಮಂಜನಾಥಗೆ ಸೇರಿರುವ 48 ಕುರಿಗಳು ಮೃತಪಟ್ಟಿದ್ದು, ಗ್ರಾಮಕ್ಕೆ ಬೇಟಿ ನೀಡಿರುವ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರಿನಾಥರೆಡ್ಡಿ ರೈತ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ದೈರ್ಯ ತುಂಬಿಸಿರುತ್ತಾರೆ.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರಿನಾಥರೆಡ್ಡಿ ಮಾತನಾಡಿ, ಬಾಗೇಪಲ್ಲಿ ತಾಲೂಕಿನ ಕಮ್ಮರವಾರಪಲ್ಲಿ ಗ್ರಾಮದಲ್ಲಿ ನಡೆದಿರುವ ದುರಂತದಲ್ಲಿ ೪೮ ಕುರಿಗಳು ಮೃತಪಟ್ಟಿವೆ, ಕುರಿಗಳ ಸಾವಿನ ದುರಂತದಿಂದ ರೈತ ಮಂಜುನಾಥ್ ಅತಂಕಕ್ಕೆ ಗುರಿಯಾಗಿದ್ದು, ಬಡ ಕುಟುಂಬದ ರೈತನಿಗೆ ನೆರವು ನೀಡಿ ದೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಅದೇ ರೀತಿಯಲ್ಲಿ ಪಶುಪಾಲನಾ ಇಲಾಖೆ ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಬೇಟಿ ನೀಡಿ ಕುರಿಗಳ ಸಾವು ಅವಘಡ ಕುರಿತು ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ, ನೊಂದ ರೈತ ಮಂಜುನಾಥ ಕುಟುಂಬಕ್ಕೆ ಆಸರೆ ಆಗಿದ್ದ ಕುರಿಗಳು ಸಂಪೂರ್ಣ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಶ್ರೇಷ್ಟ ಸಹಕಾರಿ ಪ್ರಶಸ್ತಿಗೆ ನಗರದ ಅಕ್ಷಯ ಸೌಹಾರ್ದ ಸಹಕಾರಿ ಬ್ಯಾಂಕ್ ಭಾಜನ
ಪಶುಪಾಲನಾ ಇಲಾಖೆ ಆಡಳಿತ ವಿಭಾಗದ ಉಪ ನಿರ್ದೇಶಕ ಡಾ.ರಂಗಪ್ಪ ಮಾತನಾಡಿ, ಬಾಗೇಪಲ್ಲಿ ತಾಲೂಕಿನ ಕಮ್ಮರವಾರಪಲ್ಲಿ ಗ್ರಾಮದಲ್ಲಿ ಭಾನುವಾರ ಸಂಭವಿಸಿರುವ ಬೆಂಕಿ ಅವಘಡದಲ್ಲಿ ರೈತ ಮಂಜುನಾಥಗೆ ಸೇರಿರುವ ಕುರಿಗಳು ಉಸಿರುಕಟ್ಟಿ ಮೃತಪಟ್ಟಿದ್ದು, ಈ ಘಟನೆಯನ್ನು ವಿಶೇಷ ಪ್ರಕರಣ ಎಂದು ಭಾವಿಸಿ ಸರ್ಕಾರ ವರದಿ ಸಲ್ಲಿಸಲಾಗುತ್ತದೆ. ಈ ಹಿಂದೆ ಸರ್ಕಾರ ಒಂದು ಕುರಿಗೆ ೫ ಸಾವಿರ ರೂ ಪರಿಹಾರ ನೀಡುತ್ತಿತ್ತು, ೨೦೨೫ ರಿಂದ ಪರಿಹಾರ ಮೊತ್ತವನ್ನು ೭೫೦೦ ರೂಗೆ ಏರಿಕೆ ಮಾಡಿದ್ದು, ಒಂದು ಕುರಿಗೆ ಸರ್ಕಾರದಿಂದ ೭೫೦೦ ರೂನಂತೆ ೪ ಲಕ್ಷ ರೂ ಪರಿಹಾರ ಕಲ್ಪಿಸುವುದಾಗಿ ರೈತ ಕುಟುಂಬಕ್ಕೆ ಭರವಸೆ ನೀಡಿದರು.
ಬಾಗೇಪಲ್ಲಿ ಠಾಣೆ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಶಾಂತ್ ವರ್ಣಿ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ಮಂಡಳಿ ಸಹಾಯಕ ನಿರ್ದೇಶಕ ಡಾ.ಜ್ಞಾನೇಶ್, ಪಶುಪಾಲನಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ, ಪಶು ವೈದ್ಯ ಡಾ.ಎನ್.ಸತೀಶ್ ಮುಖಂಡರಾದ ಜೆ.ಪಿ.ಚಂದ್ರಶೇಖರರೆಡ್ಡಿ, ಬಿ.ವಿ.ವೆಂಕಟರವಣ, ಸೀಡ್ಸ್ ಬಯ್ಯಾರೆಡ್ಡಿ, ನಾರಾಯಣ ನಾಯಕ್, ಕೆ.ಎನ್.ರಾಮಕೃಷ್ಣಾರೆಡ್ಡಿ, ಗಂಗಪ್ಪ ಮತ್ತಿತರರು ಇದ್ದರು.