ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಎನ್‌ಡಿಎ ಮೈತ್ರಿ ಕೂಟದ ಸಂಖ್ಯೆ 800 ಮಾಡಿದ ರಾಹುಲ್‌ಗೆ ಧನ್ಯವಾದ ಹೇಳಿದ ಬಿಜೆಪಿ ಜಿಲ್ಲಾಧ್ಯಕ್ಷ

ವೋಟ್ ಚೋರಿ ವೋಟ್ ಚೋರಿ ಎಂದು ಬೊಬ್ಬೆ ಹೊಡೆಯುತ್ತಿದೆ. ಆಮೂಲಕ ಕಳೆದ ೬೫ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಿಕಾರ ಹಿಡಿಯಲು ಅಕ್ರಮ ಮತದಾರರನ್ನು ಓಟರ್ ಪಟ್ಟಿಯಲ್ಲಿ ಸೇರಿಸಿತ್ತು. ವೋಟ್ ಚೋರಿಯ ಬೊಬ್ಬೆ ಇದನ್ನು ತೆಗೆಸಲು ಸಹಾಯ ಮಾಡಿದಂತಾಗಿದೆ. ಸುಧೀರ್ಘ ಅವಧಿಗೆ ಅಧಿಕಾರ ನಡೆಸಿದ ಕಾಂಗ್ರೆಸ್ ದೇಶದಲ್ಲಿ ಮಾಡಿದ್ದ ಚೋರಿಯನ್ನು ಬಿಜೆಪಿ ವಾಪಸ್ಸು ತಂದು ಉಳಿಸುವ ಕೆಲಸ ಮಾಡಿದೆ.

ರಾಹುಲ್‌ಗಾಂಧಿ ಕಾಂಗ್ರೆಸ್ ಪಕ್ಷದ ಸರ್ವನಾಶಕ್ಕೆ ಮುನ್ನುಡಿ ಬರೆದಿದ್ದಾರೆ

-

Ashok Nayak
Ashok Nayak Nov 14, 2025 11:33 PM

ಚಿಕ್ಕಬಳ್ಳಾಪುರ: ಕಳೆದ ೬ ತಿಂಗಳಿಂದ ದೇಶದ ಉದ್ದಗಲಕ್ಕೂ ವೋಟ್ ಛೋರಿ ಎಂದು ಹೇಳುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿರುವ ಕಾಂಗ್ರೆಸ್ ಪಕ್ಷ ಅದರ ಸ್ಟಾರ್ ಕ್ಯಾಂಪೇನರ್ ರಾಹುಲ್‌ಗಾಂಧಿ ಅವರೇ ಕಾಂಗ್ರೆಸ್ ಪಕ್ಷದ ಸರ್ವನಾಶಕ್ಕೆ ಮುನ್ನುಡಿ ಬರೆದಿದ್ದಾರೆ. ಅದಕ್ಕಾಗಿ, ಅವರಿಗೆ ಬಿಜೆಪಿ ಧನ್ಯವಾದ ಹೇಳುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮ ಚಂದ್ರಗೌಡ ವ್ಯಂಗ್ಯವಾಡಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬಿಹಾರ ಚುನಾವಣೆ ಸಂಭ್ರಮಾಚಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವ, ಅಮಿತ್‌ಷಾ ಅವರ ಚಾಣಾಕ್ಯ ಸೂತ್ರ,ಆರೆಸ್‌ಎಸ್ ಮಾರ್ಗದರ್ಶನವು ದೇಶದಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಅಧಿಕಾರದ ಗದ್ದುಗೆ ಏರುವಂತೆ ಮಾಡಿದೆ.ಎನ್‌ಡಿಎ ಮೈತ್ರಿಕೂಟದ ಬಿಹಾರದ ಚುನಾವಣೆ ನಂತರ ಸಂಖ್ಯೆ 500ರ ಗಡಿ ದಾಟುವಂತೆ ಮಾಡಿದ ಕಾಂಗ್ರೆಸ್‌ನ ರಾಹುಲ್‌ಗೆ ಧನ್ಯವಾದ ಹೇಳಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ ತಿಳಿಸಿದರು.

ಇದನ್ನೂ ಓದಿ: Chikkaballapur News: ಚಿತ್ರಕಲಾ ಪರಿಷತ್‌ನೊಂದಿಗೆ ಸತ್ಯ ಸಾಯಿ ಮಾನವ ಅಭ್ಯುದಯ ವಿವಿ ಒಡಂಬಡಿಕೆ: ಕಲಾ ಶಿಕ್ಷಣಕ್ಕೆ ಮತ್ತಷ್ಟು ಮಹತ್ವ

ವೋಟ್ ಚೋರಿ ವೋಟ್ ಚೋರಿ ಎಂದು ಬೊಬ್ಬೆ ಹೊಡೆಯುತ್ತಿದೆ. ಆಮೂಲಕ ಕಳೆದ ೬೫ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಿಕಾರ ಹಿಡಿಯಲು ಅಕ್ರಮ ಮತದಾರ ರನ್ನು ಓಟರ್ ಪಟ್ಟಿಯಲ್ಲಿ ಸೇರಿಸಿತ್ತು. ವೋಟ್ ಚೋರಿಯ ಬೊಬ್ಬೆ ಇದನ್ನು ತೆಗೆಸಲು ಸಹಾಯ ಮಾಡಿದಂತಾಗಿದೆ. ಸುಧೀರ್ಘ ಅವಧಿಗೆ ಅಧಿಕಾರ ನಡೆಸಿದ ಕಾಂಗ್ರೆಸ್ ದೇಶದಲ್ಲಿ ಮಾಡಿದ್ದ ಚೋರಿಯನ್ನು ಬಿಜೆಪಿ ವಾಪಸ್ಸು ತಂದು ಉಳಿಸುವ ಕೆಲಸ ಮಾಡಿದೆ. ಹೀಗಾ ಗಿಯೇ ಬಿಹಾರದ ಮಂದಿ ಶೇ.65ರಷ್ಟು ಮತವನ್ನು ಬಿಜೆಪಿಗೆ ನೀಡಿದೆ ಎಂದರು.

ಬಿಹಾರ ಚುನಾವಣೆಯ ಫಲಿತಾಂಶ ದೇಶದಲ್ಲಿ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ರಾಮರಾಜ್ಯ ಸ್ಥಾಪನೆ ಖಚಿತವಾಗಲಿದೆ.ಅದರಂತೆ 2028ಕ್ಕೆ ಕರ್ನಾಟಕದಲ್ಲಿ ಕೂಡ ಬಿಜೆಪಿ ಮತ್ತು ಎನ್‌ಡಿಎ 180ಕ್ಕೂ ಹೆಚ್ಚು ಸೀಟು ಪಡೆಯುವ ಮೂಲಕ ಅಧಿಕಾರಕ್ಕೆ ಬರುವುದು ಶತಸ್ಸಿದ್ದ ಎಂದು ಭರವಸೆಯು ಮಾತುಗಳನ್ನಾಡಿದರು.

ರಾಹುಲ್ ಗಾಂಧಿಯವರ ನಾಯಕತ್ವ ಹೆಂಗಾಗಿದೆ ಎಂದರೆ ಕಾಂಗ್ರೆಸ್ ಮಕಾಡೆ ಮಲಗಿಸುವ ಬಹುದೊಡ್ಡ ನಾಯಕರಾಗಿ ಹೊರಹೊಮ್ಮಿದ್ದಾರೆ.ಕರ್ನಾಟಕದಲ್ಲಿ ಮತಪರಿಷ್ಕರಣೆ ಆಗುವ ಕಾಲಕ್ಕೆ ಕಾಂಗ್ರೆಸ್ ಸೇರಿಸಿರುವ ಕಳ್ಳ ಓಟುಗಳನ್ನು ತೆಗೆಸುವ ಕೆಲಸ ಮಾಡಲು ಬಿಹಾರ ಫಲಿತಾಂಶ ಅವಕಾಶ ಮಾಡಿಕೊಟ್ಟಿದೆ.ಮೋದಿ ಹೇಳುತ್ತಿದ್ದ ಮಾತು ಕಾಂಗ್ರೆಸ್ ಹಠಾವೋ ಭಾರತ್ ಬಜಾವೋ ಶೀಘ್ರದಲ್ಲಿಯೇ ಆಗಲಿದೆ ಎಂದು ಹೇಳಿದರು.

ಮುಕ್ತ ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ತಕ್ಕಪಾಠ ಕಲಿಸಿ ಎನ್‌ಡಿಎ ಮೈತ್ರಿ ಕೂಟಕ್ಕೆ ಭರ್ಜರಿ ಜಯ ಕೊಟ್ಟು ಬಿಹಾರದಲ್ಲಿ ಅಧಿಕಾರಕ್ಕೆ ಏರುವಂತೆ ಮಾಡಿರುವ ಮತದಾರರಿಗೆ ಶುಭವನ್ನು ಕೋರುತ್ತೇವೆ.ಇದೇ ಫಲಿತಾಂಶ ಕರ್ನಾಟಕದಲ್ಲಿ ಮರುಕಳಿಸಲಿದೆ ಎಂಬ ವಿಶ್ವಾಸವಿದೆ. ಹೀಗಾಗಿ ಪ್ರಧಾನಿ ನರೇಂದ್ರಮೋದಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ, ಕೇಂದ್ರಸಚಿವ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸೀಕಲ್ ರಾಮಚಂದ್ರಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಾದ ಮುಕ್ತಾ ಮುನಿಯಪ್ಪ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ. ವಿ. ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಎಸ್.ಮುರುಳಿಧರ್, ಕೆ.ಬಿ. ಮುರಳಿ, ಮುಖಂಡರಾದ ಲಕ್ಷ್ಮೀನಾರಾಯಣ ಗುಪ್ತ, ಜಿಲ್ಲಾ ಕಾರ್ಯದರ್ಶಿಗಳಾದ ಆರ್ ಎನ್ ಅಶೋಕ್, ನಂದೀಶ್, ಹಿರಿಯ ಮುಖಂಡರಾದ ಸುರೇಂದ್ರ ಗೌಡ, ಸಂತೋಷ, ಸಿಕಲ್ ಆನಂದ ಗೌಡ, ಅವಲಕುಂಡರಾಯಪ್ಪ, ಲಕ್ಷ್ಮಿ ನರಸಿಂಹಪ್ಪ, ದೇವಸ್ಥಾನ ಹೊಸಹಳ್ಳಿ ರಾಮಣ್ಣ, ಸೊಪ್ಪಹಳ್ಳಿ ರಾಮಕೃಷ್ಣ, ನರೇಂದ್ರ ಬಾಬು, ಕಂದವಾರ ಮುರುಳಿ, ನಾಯನಳ್ಳಿ ಶ್ರೀನಿವಾಸ್, ಚಂದ್ರಶೇಖರ್, ಕೃಷ್ಣಮೂರ್ತಿ, ಬಾಲಕೃಷ್ಣ,ಜಯಕೃಷ್ಣ ಮಹಿಳಾ ಮೋರ್ಚ ಪದಾಧಿಕಾರಿಗಳಾದ ಸುಮಿತ್ರ, ಮಲ್ಲಿಕಾ, ಶಾಂತ ಶಿವರಾಂ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಮಧುಚಂದ್ರ, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರುಗಳು ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.