ಚಿಂತಾಮಣಿ : ತಾಲ್ಲೂಕಿನ ಕಸಬಾ ಹೋಬಳಿ ಕುರುಟಹಳ್ಳಿ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಬ್ರಹ್ಮರಥೋತ್ಸವ ಹಾಗೂ ಜಾತ್ರೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 1.00ಕ್ಕೆ ಆರಂಭ ವಾದ ಜಾತೋತ್ಸವದಲ್ಲಿ ಪ್ರತಿ ವರ್ಷ ನಡೆದಂತೆ ಈ ಬಾರಿಯೂ ಕೂಡ ಶ್ರೀ ವೀರಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವವನ್ನು ವೈಭವಯುತವಾಗಿ ನೆರವೇರಿಸಲಾಯಿತು. ಬ್ರಹ್ಮರಥೋತ್ಸವ ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ಜಿಲ್ಲೆಯ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾವಿ ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಇದಕ್ಕೂ ಮೊದಲು ಶ್ರೀ ವೀರಾಂಜನೇಯ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಿ ಗಳನ್ನು ಭಕ್ತರ ಸಮ್ಮುಖದಲ್ಲಿ ಸಲ್ಲಿಸಲಾಗಿತ್ತು.ಸಂಪ್ರದಾಯದಂತೆ ಜಾತ್ರೋತ್ಸವದಲ್ಲಿ ಪಾಲ್ಗೊಂ ಡಿದ್ದ ಭಕ್ತರು ಗೋವಿಂದ ಗೋವಿಂದ ಎನ್ನುವ ವೇದಘೋಷಗಳೊಂದಿಗೆ ರಥದ ಹಗ್ಗ ಹಿಡಿದು ಎಳೆದು ಪುನೀತರಾದರು. ಎಂದಿನಂತೆ ಹರಕೆಹೊತ್ತವರು ರಥಕ್ಕೆ ಬಾಳೆಹಣ್ಣು ದವನ ಎಸೆದು ಹರಕೆ ತೀರಿದ ಭಾವದಲ್ಲಿ ಪುಳಕಿತರಾದ ದೃಶ್ಯಗಳು ಸಮಾನ್ಯವಾಗಿದ್ದವು.
ಬ್ರಹ್ಮರಥೋತ್ಸವದ ಅಂಗವಾಗಿ ದಾನಿಗಳಿಂದ ಪಾನಕ ಪನ್ನೀರು ಸೇವೆ, ಪೂಜಾ ವಸಂತೋತ್ಸವ, ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದು ಜನತೆ ಸಾವಕಾಶವಾಗಿ ಇದರಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.