ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಗುಬ್ಬಿಯಲ್ಲಿ ಮರಗಳ ಮಾರಣಹೋಮ : ಅರಣ್ಯ ಇಲಾಖೆ ಮೇಲೆ ಸಾರ್ವಜನಿಕರ ಆಕ್ರೋಶ

ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರ ಬಳಿ ಮರ ಕಡಿಯುವ ಗುತ್ತಿಗೆ ದಾರ ಲಕ್ಷ್ಮಯ್ಯ ಹಾರಿಕೆ ಉತ್ತರ ನೀಡಿದ್ದಲ್ಲದೆ ಮರ ಕಡಿಯುವ ಕೆಲಸ ನನ್ನದು, ಬೆಳೆಸುವವ ನಾನಲ್ಲ ಎಂದು ಹೇಳಿದ್ದು ಸ್ಥಳೀಯ ನಾಗರೀಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ನಂತರ ದಲ್ಲಿ ಮರದ ತೂಕ ಕಡಿಮೆ ಹಿನ್ನಲೆ ಈ ಮರವನ್ನು ಕಡಿದೆ ಎಂದು ಹೇಳಿ ಮತ್ತಷ್ಟು ಕೆರಳಿಸಿದ ಹಿನ್ನಲೆ ಪ್ರತಿಭಟನೆ ಸುಧೀರ್ಘ ಕಾಲ ನಡೆಯಿತು.

ಗುಬ್ಬಿ: ಅಭಿವೃದ್ದಿ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುಬ್ಬಿ ನಾಗರೀಕರು ಹಾಗೂ ಪರಿಸರ ಪ್ರೇಮಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದ ತಹಶೀಲ್ದಾರ್ ವಸತಿಗೃಹದ ಪಕ್ಕದ ಉದ್ಯಾನವನದಲ್ಲಿ ಕಡಿದ ಮರದ ಮುಂದೆ ಶಾಮಿಯಾನ ಹಾಕಿಸಿ ನಡೆಸಿದರು.

ಬೆಳಿಗ್ಗೆ ಮರ ಕಡಿದ ಸ್ಥಳಕ್ಕೆ ಆಗಮಿಸಿದ ಪರಿಸರ ಪ್ರೇಮಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಸ್ಥಳಕ್ಕೆ ಕರೆದು ಆರೋಗ್ಯವಂತ ಸುಮಾರು 40 ವರ್ಷದ ಮಳೆ ಮರ (ಹಗಲು ರಾಣಿ) ಸಕಾರಣವಿಲ್ಲದೆ ಧರೆಗುರುಳಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉದ್ಯಾನವನದಲ್ಲಿ ನಿರ್ಮಾಣವಾದ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ತೋರಿಸಿ ಟ್ಯಾಂಕ್ ನಿಂದ ದೂರ ಇದ್ದ ಯಾರಿಗೂ ತೊಂದರೆ ಕೊಡದ ದೊಡ್ಡ ಮರವನ್ನು ಕಡಿದ ಬಗ್ಗೆ ಪ್ರಶ್ನಿಸಿ ಉಡಾಫೆ ಉತ್ತರ ಬಂದ ಹಿನ್ನಲೆ ದಿಢೀರ್ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರ ಬಳಿ ಮರ ಕಡಿಯುವ ಗುತ್ತಿಗೆ ದಾರ ಲಕ್ಷ್ಮಯ್ಯ ಹಾರಿಕೆ ಉತ್ತರ ನೀಡಿದ್ದಲ್ಲದೆ ಮರ ಕಡಿಯುವ ಕೆಲಸ ನನ್ನದು, ಬೆಳೆಸುವವ ನಾನಲ್ಲ ಎಂದು ಹೇಳಿದ್ದು ಸ್ಥಳೀಯ ನಾಗರೀಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ನಂತರ ದಲ್ಲಿ ಮರದ ತೂಕ ಕಡಿಮೆ ಹಿನ್ನಲೆ ಈ ಮರವನ್ನು ಕಡಿದೆ ಎಂದು ಹೇಳಿ ಮತ್ತಷ್ಟು ಕೆರಳಿಸಿದ ಹಿನ್ನಲೆ ಪ್ರತಿಭಟನೆ ಸುಧೀರ್ಘ ಕಾಲ ನಡೆಯಿತು.

ಇದನ್ನೂ ಓದಿ: Gubbi News: ಮೇ.25 ರಂದು ಅರ್ಥಪೂರ್ಣ ಬಸವ ಜಯಂತಿ: ತಾಲ್ಲೂಕಿನಾದ್ಯಂತ ಪ್ರಚಾರಕ್ಕೆ ಚಾಲನೆ ನೀಡಿದ ಪ್ರಮುಖರು.

ಸ್ಥಳಕ್ಕೆ ಆಗಮಿಸಿದ್ಧ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಕೂಡಾ ಪ್ರತಿಭಟನಾಕಾರರ ಜೊತೆ ಮಾತಿಗೆ ನಿಂತರು. ಪ್ರತಿಭಟನಾಕಾರರ ಪ್ರಶ್ನೆಗೆ ಸೂಕ್ತ ಉತ್ತರ ನೀಡಲಾಗದೆ ಕೈಚೆಲ್ಲಿದರು. ಗುತ್ತಿಗೆದಾರನ ಉದ್ಧಟತನದ ಮಾತಿಗೆ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಪರಿಸರ ಪ್ರೇಮಿ ಪಿ.ಬಿ.ಚಂದ್ರಶೇಖರ್ ಬಾಬು ಮಾತನಾಡಿ ಏಕಾಏಕಿ ಸಂಜೆ ಸಮಯದಲ್ಲಿ ಬೃಹತ್ ಮರವನ್ನು ಕಡಿದ ಬಗ್ಗೆ ತಿಳಿದು ಬೆಳಿಗ್ಗೆ ಸ್ಥಳದಲ್ಲಿ ಅರಣ್ಯ ಅಧಿಕಾರಿ ಗಳಿಗೆ ಪ್ರಶ್ನೆ ಮಾಡಲಾಗಿ ಉದ್ಯಾನವನದಲ್ಲಿ ಬೃಹತ್ ಮರ ಧರೆಗುರುಳಿಸಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೆ. ಆದರೆ ವರ್ಷದ ಹಿಂದೆ ಇಲ್ಲಿ ನಡೆದಿದ್ದ ಟ್ಯಾಂಕ್ ಕಾಮಗಾರಿಗೆ ಅಡ್ಡಿಯಾದ ನಾಲ್ಕು ರಂಬೆ ಕಡಿಯಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ನಾಲ್ಕು ತಿಂಗಳ ಹಿಂದೆ ರಂಬೆಗಳನ್ನು ಕಡಿಯಲಾಗಿದೆ. ಈಗ ಟ್ಯಾಂಕ್ ಕಾಮಗಾರಿ ಪೂರ್ಣಗೊಂಡ ಮೇಲೆ ತೊಂದರೆ ಇಲ್ಲದ ಈ ಮರ ವನ್ನು ಸಂಪೂರ್ಣ ಕಡಿಯಲಾಗಿದೆ. ಈ ಬಗ್ಗೆ ಗುತ್ತಿಗೆದಾರ ಉಡಾಫೆ ಉತ್ತರ ನೀಡಿದ್ದಾನೆ. ಈ ಕೂಡಲೇ ಗುತ್ತಿಗೆದಾರ ಲಕ್ಷ್ಮಯ್ಯ ಅವರ ಬ್ಲಾಕ್ ಲಿಸ್ಟ್ ಸೇರಿಸಬೇಕು. ಎಫ್ಐಆರ್ ಹಾಕಿ ಕ್ರೇನ್ ಇನ್ನಿತರ ವಾಹನಗಳನ್ನು ಸೀಜ್ ಮಾಡುವಂತೆ ಆಗ್ರಹಿಸಿದರು.

Gubbi 0

ಬಿಜೆಪಿ ಮುಖಂಡ ಬಿ.ಎಸ್.ಪಂಚಾಕ್ಷರಿ ಮಾತನಾಡಿ, ಪರಿಸರ ರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆ ಪಟ್ಟಣದಲ್ಲಿ ಅನಗತ್ಯವಾಗಿ ಮರಗಳನ್ನು ಕತ್ತರಿಸಲು ಅನುಮತಿ ನೀಡಿದ್ದಾರೆ. ಅಭಿವೃದ್ದಿ ಹೆಸರಲ್ಲಿ ನಾಲ್ಕು ಮರ ಕಡಿಯಲು ಅನುಮತಿ ಪಡೆದು ನಲವತ್ತು ಮರಗಳನ್ನು ಕಡಿಯುವ ಪ್ರವೃತ್ತಿ ಕೆಲ ತಿಂಗಳಿಂದ ನಡೆದಿದೆ. ಮರಗಳನ್ನು ಕಡಿಯಲು ಇಡೀ ತಾಲ್ಲೂಕಿನಲ್ಲಿ ಆದೇಶ ನೀಡಿದ್ದು ಒಬ್ಬನೇ ಗುತ್ತಿಗೆದಾರನಿಗೆ ಅನುಮತಿ ಸಿಕ್ಕಿದ್ದು ಮಾತ್ರ ಅಚ್ಚರಿಯಾಗಿದೆ. ಬೇಕಾಬಿಟ್ಟಿ ಪತ್ರ ವ್ಯವಹಾರ ಮಾಡಿ ಮನಸ್ಸೋ ಇಚ್ಚೆ ಮರಗಳನ್ನು ಕಡಿಯುತ್ತಿರುವುದು ಅರಣ್ಯ ಇಲಾಖೆಗೆ ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದರು.

ಸಾಗರನಹಳ್ಳಿ ವಿಜಯ್ ಕುಮಾರ್ ಮಾತನಾಡಿ ಮರಗಳನ್ನು ಕಡಿಯುವ ವಿಚಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳೇ ಶಾಮೀಲು ಎನ್ನಬಹುದಾಗಿದೆ. ಇಲಾಖೆಯ ಬಗ್ಗೆ ಭಯವಿಲ್ಲದ ಗುತ್ತಿಗೆದಾರ ಹಾಡುಹಗಲೇ ಮರಗಳ ಮಾರಣ ಹೋಮ ಮಾಡುತ್ತಿರುವುದು ಸಾಕ್ಷಿಯಾಗಿದೆ. ವಲಯ ಅರಣ್ಯಾಧಿ ಕಾರಿ ಈ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಗುತ್ತಿಗೆದಾರನ ವಿರುದ್ಧ ಎಫ್ಐಆರ್ ಹಾಕಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಅಮಾನತು ಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ, ಮರಗಳನ್ನು ಇರುವುದೇ ಕಡಿಯಲು ಎಂದು ಅರಣ್ಯ ಇಲಾಖೆ ತಿಳಿದಂತೆ ಕಾಣುತ್ತಿದೆ. ಅಕ್ರಮವಾಗಿ ಮರ ಕಡಿಯಲು ಗುತ್ತಿಗೆದಾರರು ಹಾತೊರೆ ಯುತ್ತಾರೆ. ನಿತ್ಯ ವಲಯ ಅರಣ್ಯಾಧಿಕಾರಿ ಹಿಂದೆ ಓಡಾಡುವ ಮರಗಳ್ಳರ ಗುಂಪು ಸಂಜೆ ಅಧಿಕಾರಿ ಯನ್ನು ಮನೆಗೆ ತಲುಪಿಸಿ ತೆರಳುತ್ತಾರೆ ಎಂದು ಛೇಡಿಸಿದರು.

ನಾಲ್ಕು ತಾಸುಗಳ ನಂತರ ಸ್ಥಳಕ್ಕೆ ಬಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಮರ್ಥಿಸಿಕೊಳ್ಳಲು ಮುಂದಾದಾಗ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾದರು. ನಂತರ ಮರ ಕಡಿದ ವಿಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನಂತರ ಚರ್ಚೆ ಮುಂದುವರಿಸಿ ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲು ಹಾಗೂ ವಾಹನಗಳ ಸೀಜ್ ಮಾಡುವ ಭರವಸೆ ನೀಡಿದರು. ಮುಂದಿನ ದಿನದಲ್ಲಿ ಹರಾಜು ಪ್ರಕ್ರಿಯೆ ಆಗಿರುವ ಮರಗಳನ್ನು ಕಡಿಯದಂತೆ ಪ್ರತಿಭನಾಕಾರರು ಖಡಕ್ ಎಚ್ಚರಿಕೆ ನೀಡಿದರು.

ಸ್ಥಳದಲ್ಲಿ ಮುಖಂಡರಾದ ಸಿ.ಆರ್.ಶಂಕರ್ ಕುಮಾರ್ , ರಮೇಶಗೌಡ, ರುದ್ರೇಶ್, ಲೋಕೇಶ್, ಯತೀಶ್, ಉಮೇಶ್, ನಾಗೇಶ್, ಸಲೀಂಪಾಷ, ಕುಮಾರ್ ಇನ್ನಿತರರು ಇದ್ದರು.