ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಮೇ.25 ರಂದು ಅರ್ಥಪೂರ್ಣ ಬಸವ ಜಯಂತಿ: ತಾಲ್ಲೂಕಿನಾದ್ಯಂತ ಪ್ರಚಾರಕ್ಕೆ ಚಾಲನೆ ನೀಡಿದ ಪ್ರಮುಖರು.

ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಇದೇ ತಿಂಗಳ 25ರಂದು ಬಸವ ಜಯಂತಿ ಆಚರಣೆ ಯನ್ನು ಹೇರೂರು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯಭವನದಲ್ಲಿ ಬೆಳಿಗ್ಗೆ 7 ಗಂಟೆಗೆ ಇಷ್ಟಲಿಂಗ ಪೂಜೆ ಮೂಲಕ ಆರಂಭಿಸಲಾಗುವುದು. ತಾಲ್ಲೂಕಿನ ಎಲ್ಲಾ ಧರ್ಮ ಗುರುಗಳ ಉಪಸ್ಥಿತಿ ಯಲ್ಲಿ ನಡೆಯುವ ಇಷ್ಟ ಲಿಂಗ ಪೂಜೆಗೆ ತಾಲ್ಲೂಕಿನ ಎಲ್ಲಾ ಸಮಾಜದ ಬಂಧುಗಳು ಆಗಮಿಸಬೇಕು

ಮೇ.25 ರಂದು ಅರ್ಥಪೂರ್ಣ ಬಸವ ಜಯಂತಿ

-

Profile
Ashok Nayak May 19, 2026 8:56 PM

ಗುಬ್ಬಿ: ತಾಲ್ಲೂಕಿನ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸಲು ಇದೇ ತಿಂಗಳ 25 ರ ಸೋಮವಾರ ದಿನಾಂಕ ನಿಗದಿ ಮಾಡಿದ ತಾಲ್ಲೂಕಿನ ಬಸವ ಜಯಂತಿ ಆಚರಣಾ ಸಮಿತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಮಾಜದ ಎಲ್ಲಾ ಬಾಂಧವರು ಆಗಮಿಸುವಂತೆ ತಾಲ್ಲೂಕಿನಾದ್ಯಂತ ಪ್ರಚಾರ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ತಾಲ್ಲೂಕಿನ ದೇವಮೂಲೆ ಮಾದಾಪುರ ಶ್ರೀ ಮಣ್ಣಮ್ಮದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ವೀರಶೈವ ಲಿಂಗಾಯಿತ ಸಮಾಜದ ಪ್ರಮುಖ ಮುಖಂಡರು ಬಸವ ಜಯಂತಿ ಆಚರಣೆ ಅರ್ಥ ಗರ್ಭಿತವಾಗಿ ನಡೆಸಲು ಸಮಾಜದ ಸಹಕಾರ ಕೋರಿ ಕಾರ್ಯಕ್ರಮಕ್ಕೆ ಬರಲು ಮನವಿ ಮಾಡಿದರು.

ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಇದೇ ತಿಂಗಳ 25 ರಂದು ಬಸವ ಜಯಂತಿ ಆಚರಣೆಯನ್ನು ಹೇರೂರು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯಭವನದಲ್ಲಿ ಬೆಳಿಗ್ಗೆ 7 ಗಂಟೆಗೆ ಇಷ್ಟ ಲಿಂಗ ಪೂಜೆ ಮೂಲಕ ಆರಂಭಿಸಲಾಗುವುದು. ತಾಲ್ಲೂಕಿನ ಎಲ್ಲಾ ಧರ್ಮ ಗುರುಗಳ ಉಪಸ್ಥಿತಿಯಲ್ಲಿ ನಡೆಯುವ ಇಷ್ಟ ಲಿಂಗ ಪೂಜೆಗೆ ತಾಲ್ಲೂಕಿನ ಎಲ್ಲಾ ಸಮಾಜದ ಬಂಧು ಗಳು ಆಗಮಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Gubbi News: ಪ್ರಸ್ತುತ ದಿನಮಾನದಲ್ಲಿ ದೈಹಿಕ ಆರೋಗ್ಯ ಮುಖ್ಯ: ಜಿ.ಪ್ರಸನ್ನಕುಮಾರ್

ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ, ಬಸವ ಜಯಂತಿ ಮೂಲಕ ಬಸವ ಶರಣಾದಿಗಳ ಚಿಂತನೆ ತತ್ವ ಆದರ್ಶಗಳ ಬಗ್ಗೆ ಸಮಾಜಕ್ಕೆ ತಿಳಿಸಲಾಗುವುದು. ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಬೆಳಿಗ್ಗೆ 9 ಗಂಟೆಗೆ ಶ್ರೀ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಗುವುದು. ಸಾಂಸ್ಕೃತಿಕ ಕಲಾ ಮೇಳದೊಂದಿಗೆ ಸಾವಿರಾರು ಬಸವ ಅನುಯಾಯಿಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಗುರು ನಾಗಲಿಂಗೇಶ್ವರ ದೇವಾಲಯದವರೆಗೆ ಆಕರ್ಷಣೀಯವಾಗಿ ನಡೆಯಲಿದೆ ಎಂದರು.

ಮುಖಂಡ ಎನ್.ಸಿ.ಪ್ರಕಾಶ್ ಮಾತನಾಡಿ ಮೆರವಣಿಗೆ ನಂತರ ಹೇರೂರು ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ನಡೆಯುವ ಬಸವ ಜಯಂತಿ ವೇದಿಕೆ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಮಠಾಧೀಶರು ಸಾನಿಧ್ಯ ವಹಿಸಲಿದ್ದಾರೆ. ಬೆಳಿಗ್ಗೆ 10.30 ಗಂಟೆಗೆ ವೀರಶೈವ ಲಿಂಗಾಯಿತ ಸಮಾಜದ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ. ಬಸವ ತತ್ವಗಳ ಚಿಂತನ ಮಂಥನ ನಡೆಸುವ ಜೊತೆಗೆ ಸಮಾಜದ ಏಳಿಗೆ ಬಗ್ಗೆ ಕೂಡ ಚರ್ಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಖಿಲ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಶಿಭೂಷಣ್, ಯುವ ಘಟಕದ ಅಧ್ಯಕ್ಷ ಯತೀಶ್, ನೌಕರರ ಸಂಘದ ರವೀಶ್, ದಯಾನಂದ ಸರಸ್ವತಿ, ಧರಣೇಶ್, ದಯಾನಂದ್, ಸಮಾಜದ ಪ್ರಮುಖರಾದ ಆರ್.ಬಿ. ಜಯಣ್ಣ, ಪಾಲನೇತ್ರಪ್ಪ, ಶಿವಪ್ಪ, ಸಂಗಪ್ಪ, ಸಿದ್ದಲಿಂಗಮೂರ್ತಿ, ಬಸವಲಿಂಗಪ್ಪ, ಬಿ.ಎಸ್. ಪಂಚಾಕ್ಷರಿ, ಯತೀಶ್, ವಿದೀಶ್, ವಿಶ್ವನಾಥ್, ಗಂಗಾಧರ್, ಸೌಮ್ಯ, ಯಶೋಧ, ತ್ರಿನೇಶ್, ಸದಾಶಿವಯ್ಯ, ನಂಜೇಗೌಡ, ಹೇರೂರು ಯತೀಶ್, ಬಾಬು, ಸ್ವರೂಪ್ ಇನ್ನಿತರರು ಭಾಗವಹಿಸಿದ್ದರು.