ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು ಖರೀದಿಸಿ, ಸ್ವಸಹಾಯ ಸಂಘಗಳ ಬೆಂಬಲಿಸಿ: ಸಿಇಒ ಡಾ.ವೈ.ನವೀನ್ ಭಟ್

ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿರುವ ಅಕ್ಕ ಮಾರಾಟ ಮಳಿಗೆಯಲ್ಲಿರುವ ತಿನಿಸುಗಳನ್ನು ಖರೀದಿಸಿ ಬಳಸುವಂತೆ ಕರೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಸಂಜೀವಿನಿ-ಡೇ-ಎನ್.ಆರ್.ಎಲ್.ಎಂ ಯೋಜನೆಯ ವತಿಯಿಂದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಿವಿಧ ತರಬೇತಿಗಳನ್ನು ನೀಡಿ, ಸ್ವ-ಉದ್ಯಮಗಳಲ್ಲಿ ತೊಡಗಿಸಿ ಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ.

ಜಿಲ್ಲಾಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್

ಚಿಕ್ಕಬಳ್ಳಾಪುರ: ಮಹಿಳಾ ಸ್ವ- ಸಹಾಯ ಗುಂಪುಗಳಿಂದ ತಯಾರಿಸಲಾದ "ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳ" ಉಡುಗೊರ ಬಾಕ್ಸ್ಗಳನ್ನು ಖರೀದಿಸಿ ಬಳಕೆ ಮಾಡುವ ಮೂಲಕ ಜಿಲ್ಲೆಯ ಮಹಿಳೆಯರ ಉತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸಿ, ಗ್ರಾಮೀಣ ಉತ್ಪನ್ನ ಗಳನ್ನು ಪ್ರೋತ್ಸಾಹಿಸಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ತಮ್ಮ ಅಮೂಲ್ಯ, ಸಹಕಾರ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಮನವಿ ಮಾಡಿದ್ದಾರೆ.

ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿರುವ ಅಕ್ಕ ಮಾರಾಟ ಮಳಿಗೆಯಲ್ಲಿರುವ ತಿನಿಸುಗಳನ್ನು ಖರೀದಿಸಿ ಬಳಸುವಂತೆ ಕರೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಸಂಜೀವಿನಿ-ಡೇ-ಎನ್.ಆರ್.ಎಲ್.ಎಂ ಯೋಜನೆಯ ವತಿಯಿಂದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಿವಿಧ ತರಬೇತಿಗಳನ್ನು ನೀಡಿ, ಸ್ವ-ಉದ್ಯಮಗಳಲ್ಲಿ ತೊಡಗಿಸಿ ಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ಅದರ ಫಲವಾಗಿ ಜಿಲ್ಲೆಯಲ್ಲಿ ಬೆಳೆಯುವ ವಿವಿಧ ಸಾಮಗ್ರಿಗಳನ್ನು ಖರೀದಿಸಿ ಗ್ರಾಮೀಣ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರುಗಳಿಂದ ಸಂಸ್ಕರಿಸಲಾದ ಉತ್ಪನ್ನಗಳನ್ನು ಬಳಸಿಕೊಂಡು "ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು" ಎಂಬ ಬ್ಯಾಂಡ್ ನಲ್ಲಿ ಉಡುಗೊರೆಯ ಬಾಕ್ಸ್/ಬುಟ್ಟಿಗಳನ್ನು ಪರಿಚಯಿಸಲಾಗಿರುತ್ತದೆ ಎಂದರು.

ಇದನ್ನೂ ಓದಿ: Chikkaballapur News: ಅನಧಿಕೃತ ಹೋಂ-ಸ್ಟೇ ಮತ್ತು ರೆಸಾರ್ಟ್‌ʼಗಳ ವಿರುದ್ಧ ಕಾನೂನು ಕ್ರಮ

ಈ ಉಡುಗೊರೆಯ ಪ್ಯಾಕ್ ಮತ್ತು ಬುಟ್ಟಿಗಳನ್ನು ಅತ್ಯುತ್ತಮ ಗುಣಮಟ್ಟದಿಂದ ಕೂಡಿದ ಶುಚಿಯಾಗಿ ಪ್ಯಾಕ್ ಮಾಡಲಾದ ಮಸಾಲೆ ಗೋಡಂಬಿ, ಚಿಂತಾಮಣಿಯ ಮಸಾಲೆ ಕಡಲೆಬೀಜ, ನುಗೆ ಸೋಪ್ಪಿನ ವಿಕ್ಸರ್, ಪೆರೇಸಂದ್ರ ಚಕ್ಕುಲಿ, ಬೆಲ್ಲದ ಕೊಬ್ಬರಿ ಮಿಠಾಯಿ, ರಾಗಿ/ನವಣೆ ಮುರುಕು, ಗುಲ್ಕನ್, ಬೇಲದಹಣ್ಣಿನ ತಿರುಳು, ಮಸಾಲೆ ಮಖಾನಾ, ಚಿಕ್ಕಿ, ರಾಗಿ ಲಡು ಸಹಿತ ಇನ್ನಿತರ ಸಿಹಿ ಹಾಗೂ ಖಾರದ ತಿನಿಸುಗಳನ್ನೊಳಗೊಂಡಂತೆ ಆಕರ್ಷಕವಾಗಿ ಸಿದ್ಧಪಡಿಸಲಾಗಿರುತ್ತದೆ ಎಂದು ಹೇಳಿದರು.

ಸರ್ಕಾರದ ವಿವಿಧ ಕಾರ್ಯಕ್ರಮಗಳು, ಗಣ್ಯರ ಹುಟ್ಟುಹಬ್ಬದ ಶುಭಾಷಯ ಕೋರಲು, ಅತಿಥಿ ಸತ್ಕಾರಕ್ಕೆ/ಸನ್ಮಾನದಂತಹ ವಿಶೇಷ ಸಂದರ್ಭಗಳಿಗಾಗಿ ಸಕಾಲದಲ್ಲಿ ಕಚೇರಿಗಳಿಗೆ/ಮನಬಾಗಿಲಿಗೆ ತಲುಪಿಸಲು ಸ್ವ-ಸಹಾಯ ಗುಂಪಿನ ಸದಸ್ಯರು ಆಸಕ್ತಿ ಹೊಂದಿದ್ದಾರೆ. ಜಿಲ್ಲೆಯಲ್ಲಿನ ಮೂಲ ಸಾಮಗ್ರಿಗಳನ್ನು ಬಳಸಿಕೊಂಡು, ಗ್ರಾಮೀಣ ಭಾಗದ ಮಹಿಳೆಯರು ಅಕ್ಕರೆಯಿಂದ ಸಿದ್ಧಪಡಿಸಿದ ಪ್ರಸಿದ್ಧವಾದ ತಿನಿಸುಗಳಿಗೆ ತಮ್ಮಿಂದ ಮತ್ತಷ್ಟು ಪುಚಾರ ಹಾಗೂ ಮಾರುಕಟ್ಟೆ ಒದಗಿಸುವುದರ ಮೂಲಕ ಮಹಿಳೆಯರಿಗೆ ಆರ್ಥಿಕ ಚೈತನ್ಯ ನೀಡಿದಂತಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ತಮ್ಮ ಕಚೇರಿಯ ವತಿಯಿಂದ ಆಯೋಜಿಸುವ ವಿವಿಧ ಕಾರ್ಯಕ್ರಮಗಳು, ಗಣ್ಯರ ಹುಟ್ಟುಹಬ್ಬದ ಶುಭಾಷಯ ಕೋರುವಿಕೆ, ಅತಿಥಿ ಸತ್ಕಾರ/ಸನ್ಮಾನ ಮುಂತಾದ ಸಂದರ್ಭಗಳಲ್ಲಿ ಮಹಿಳಾ ಸ್ವ- ಸಹಾಯ ಗುಂಪುಗಳಿಂದ ತಯಾರಿಸಲಾದ "ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳ" ಉಡುಗೊರ ಬಾಕ್ಸ್ಗಳನ್ನು ಖರೀದಿಸಿಯೇ ಬಳಕೆ ಮಾಡುವ ಮೂಲಕ ಜಿಲ್ಲೆಯ ಮಹಿಳೆಯರ ಉತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸಿ, ಗ್ರಾಮೀಣ ಉತ್ಪನ್ನಗಳನ್ನು ಪ್ರೋತ್ಸಾಹಿಸಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ತಮ್ಮ ಅಮೂಲ್ಯ, ಸಹಕಾರ ನೀಡಬೇಕೆಂದು ಕೋರಿದರು.