Chikkaballapur News: ಅನಧಿಕೃತ ಹೋಂ-ಸ್ಟೇ ಮತ್ತು ರೆಸಾರ್ಟ್ʼಗಳ ವಿರುದ್ಧ ಕಾನೂನು ಕ್ರಮ
ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಸದರಿ ಹೋಂ-ಸ್ಟೇ ಹಾಗೂ ರೆಸಾರ್ಟ್ಗಳನ್ನು ಕಾನೂನು ಬದ್ದವಾಗಿ ಮುಂದುವರಿಸಲು ಆಸಕ್ತಿ ಇದ್ದಲ್ಲಿ ಇದರ ಮಾಲೀಕರು, ಅಗತ್ಯ ದಾಖಲೆ ಗಳೊಂದಿಗೆ ಕೂಡಲೇ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಯನ್ನು ಸಂಪರ್ಕಿಸಬೇಕು.
ಹೋಂ-ಸ್ಟೇಗಳ ಸಾಂದರ್ಭಿಕ ಚಿತ್ರ. -
Ashok Nayak
May 9, 2026 12:00 AM
ಚಿಕ್ಕಬಳ್ಳಾಪುರ : ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಅಧಿಕೃತ ಅನುಮೋದನೆ ಪಡೆಯದೇ ಇರುವ ಹೋಂ-ಸ್ಟೇಗಳು ಹಾಗೂ ರೆಸಾರ್ಟ್ಗಳು ಅನಧಿಕೃತ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಸದರಿ ಹೋಂ-ಸ್ಟೇ ಹಾಗೂ ರೆಸಾರ್ಟ್ಗಳನ್ನು ಕಾನೂನು ಬದ್ದವಾಗಿ ಮುಂದುವರಿಸಲು ಆಸಕ್ತಿ ಇದ್ದಲ್ಲಿ ಇದರ ಮಾಲೀಕರು, ಅಗತ್ಯ ದಾಖಲೆ ಗಳೊಂದಿಗೆ ಕೂಡಲೇ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಯನ್ನು ಸಂಪರ್ಕಿಸಬೇಕು.
ಆಮೂಲಕ ಕೂಡಲೇ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗು ವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.