ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಪದಾರ್ಥಗಳನ್ನೇ ಖರೀದಿಸಿ, ಮಹಿಳಾ ಸಂಘಗಳಿಗೆ ಪ್ರೋತ್ಸಾಹ ನೀಡಿ ; ಜಿ. ಪ್ರಭು ಕರೆ

ಪ್ರಸ್ತುತ 3 ದಿನ ಮಾಡುತ್ತಿರುವ ಯುಗಾದಿ ಮಾಸಿಕ ಸಂತೆಗಳು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಪ್ರತಿ ಪ್ರಮುಖ ಹಬ್ಬಗಳಲ್ಲೂ ಈ ರೀತಿಯ ಮಾರಾಟ ಮೇಳಗಳನ್ನು ಜಿಲ್ಲೆ ಯಲ್ಲಿ ಆಯೋಜಿಸಲಾಗುವುದು. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವು ದರಿಂದ ಈ ಮಾಸಿಕ ಸಂತೆ ಯಶಸ್ವಿಯಾಗುತ್ತದೆ. ಜಿಲ್ಲೆಯ ಸರ್ಕಾರಿ ನೌಕರರು, ಉತ್ತಮ ಪ್ರತಿಕ್ರಿಯೆ ತೋರುತ್ತಿದ್ದಾರೆ.

ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಪದಾರ್ಥಗಳನ್ನೇ ಖರೀದಿಸಿ

ಜಿಲ್ಲೆಯ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರು ತಯಾರಿಸಿದ ಸ್ಥಳೀಯ ವಿಶೇಷತೆಗಳನ್ನು ಬಿಂಬಿಸುವ ಯುಗಾದಿ ಹಬ್ಬದ ದಿನಸಿ ಪದಾರ್ಥಗಳನ್ನು ಜಿಲ್ಲೆಯ ಸಾರ್ವಜನಿಕರು ಖರೀದಿಸುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು. -

Ashok Nayak
Ashok Nayak Mar 16, 2026 8:07 PM

ಚಿಕ್ಕಬಳ್ಳಾಪುರ: ಜಿಲ್ಲೆಯ ಜನತೆ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರು ತಯಾರಿಸಿದ ಸ್ಥಳೀಯ ವಿಶೇಷತೆಗಳನ್ನು ಬಿಂಬಿಸುವ ಯುಗಾದಿ ಹಬ್ಬದ ದಿನಸಿ ಪದಾರ್ಥಗಳನ್ನು ಖರೀದಿಸುವ ಮೂಲಕ ಮಹಿಳಾ ಸಂಘಗಳನ್ನು ಪ್ರೋತ್ಸಾಹಿಸಿ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾ ಯತ್ ವತಿಯಿಂದ ತೆರೆದಿರುವ "ಸಂಜೀವಿನಿ ಯುಗಾದಿ ಮಾಸಿಕ ಸಂತೆ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳಾ ಸ್ವಹಾಯ ಸಂಘಗಳ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸರ್ಕಾರಗಳು ಎನ್ ಆರ್ ಎಲ್ ಎಂ ಯೋಜನೆ(NRLM project)ಯಡಿ ಪ್ರೋತ್ಸಾಹ ನೀಡು ತ್ತಿದೆ. ಅದರಂತೆ ಗ್ರಾಮೀಣ ಪ್ರದೇಶದ ಮಹಿಳಾ ಸಂಘಗಳ ಸಬಲೀಕರಣ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಮಾಡುವ ಸದುದ್ದೇಶದಿಂದ ಈ ಯುಗಾದಿ ಮೇಳದಲ್ಲಿ ಯುಗಾದಿ ವಿಶೇಷ ಕಿಟ್ ನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಒದಗಿಸ ಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ನಾಗರೀಕರು ಈ ಯುಗಾದಿ ವಿಶೇಷ ಕಿಟ್ ನ್ನು ಖರೀದಿಸುವ ಮೂಲಕ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Chikkaballapur News: ಕೆಐಎಡಿಬಿ ವಿರೋಧಿ ಹೋರಾಟ ಸಮಿತಿಗಳ ಮಹಾಪೋಷಕರೇ ಸಮಾಜ ಸೇವಕರ ಮುಖವಾಡ ಹೊತ್ತ ರಾಜೀವ್‌ಗೌಡ: ರಾಮಾಂಜಿ ಆರೋಪ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ನವೀನ್ ಭಟ್ ವೈ ರವರು ಮಾತನಾಡಿ, ಯುಗಾದಿ ಹಾಗೂ ರಂಜಾನ್ ಹಬ್ಬಗಳು ನಮ್ಮ ದೇಶದಲ್ಲಿ ದೊಡ್ಡ ಹಬ್ಬ ಗಳು. ಈ ಹಬ್ಬಗಳ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಮಹಿಳಾ ಸಂಘಗಳ ಸಬಲೀಕರಣ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಮಾಡುವ ಸದುದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ ಡೇ ಎನ್.ಆರ್.ಎಲ್.ಎಂ ಯೋಜನೆ ವತಿಯಿಂದ ವಿಶೇಷವಾಗಿ ಹಬ್ಬದ ಕಿಟ್ ನ್ನು ತಯಾರಿಸಿದ್ದು, ಈ ಕಿಟ್ ನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ವಿನೂತನ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಈ ಮೇಳಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 12 ಜಿಪಿಎಫ್‌ʼನ 24ಕ್ಕೂ ಹೆಚ್ಚು ಸ್ವ ಸಹಾಯ ಗುಂಪುಗಳ 250ಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನೊಳಗೊಂಡ ತಂಡವು ಒಟ್ಟಾಗಿ ಸೇರಿ ಈ ಯುಗಾದಿ ಅಕ್ಕ ಹೋಳಿಗೆ ಕಿಟ್ ನ್ನು ತಯಾರಿಸಿದ್ದಾರೆ. ಈ ವಿಶೇಷ ಕಿಟ್ ನಲ್ಲಿ ನಮ್ಮ ಜಿಲ್ಲೆಯಲ್ಲಿ ಬೆಳೆದಿರುವ ಸಾವಯವ ಬೆಳೆಗಳಾದ ತೊಗರಿಬೇಳೆ, ಹೆಸರುಬೇಳೆ, ಗಾಣದ ಕಡಲೇ ಕಾಯಿ ಎಣ್ಣೆ, ಮೈದಾ ಹಿಟ್ಟು, ಆರ್ಗಾನಿಕ್ ಬೆಲ್ಲ, ತುಪ್ಪ, ಹೋಮ್ ಮೇಡ್ ಹಪ್ಪಳ, ತೆಂಗಿನಕಾಯಿ, ಗಾಣದ ಹರಳೆಣ್ಣೆ, ಸೀಗೇಕಾಯಿ ಪುಡಿ, ತುಪ್ಪ ಸೇರಿದಂತೆ ಇತರೆ ಪೌಷ್ಠಿಕಾಂಶ ಪದಾರ್ಥಗಳು ಒಳಗೊಂಡಿದ್ದು, ಜಿಲ್ಲೆಯ ಎಲ್ಲಾ ಗ್ರಾಹಕರು  ಖರೀದಿ ಸುವ ಮೂಲಕ ಸ್ವ ಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಈ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಕರೆ ನೀಡಿದರು.

ಪ್ರಸ್ತುತ 3 ದಿನ ಮಾಡುತ್ತಿರುವ ಯುಗಾದಿ ಮಾಸಿಕ ಸಂತೆಗಳು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಪ್ರತಿ ಪ್ರಮುಖ ಹಬ್ಬಗಳಲ್ಲೂ ಈ ರೀತಿಯ ಮಾರಾಟ ಮೇಳಗಳನ್ನು ಜಿಲ್ಲೆ ಯಲ್ಲಿ ಆಯೋಜಿಸಲಾಗುವುದು. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ಈ ಮಾಸಿಕ ಸಂತೆ ಯಶಸ್ವಿಯಾಗುತ್ತದೆ. ಜಿಲ್ಲೆಯ ಸರ್ಕಾರಿ ನೌಕರರು, ಉತ್ತಮ ಪ್ರತಿಕ್ರಿಯೆ ತೋರುತ್ತಿದ್ದಾರೆ.

cbpm2sanjeevini

ಸಾರ್ವಜನಿಕರು ಸಹ ಮುಂದಿನ ಎರಡು ದಿನಗಳಲ್ಲಿ ಸ್ಪಂದನೆ ನೀಡುವ ಭರವಸೆ ಇದೆ. ಏಕೆಂದರೆ "ಯುಗಾದಿ ಅಕ್ಕ ದಿನಸಿ ಮಿನಿ ಕಿಟ್" ನ್ನು 670 ರೂ.ಗಳ ಮಾರುಕಟ್ಟೆ ದರಕ್ಕೆ ಬದಲಾಗಿ ಕೇವಲ 499 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ಮಧ್ಯವರ್ತಿ ಗಳಲ್ಲದೆ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಸ್ಥಳೀಯ ಉತ್ಪನ್ನಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದಲ್ಲಿ ತಯಾರಿಸಿದ ದಿನಸಿಗಳನ್ನು ಕಡಿಮೆ ದರದಲ್ಲಿ ನೀಡಲು ಸಾಧ್ಯವಾಗಿದೆ. ಆದ್ದರಿಂದ  ಮಾರಾಟ ಮೇಳ ಯಶಸ್ವಿಯಾಗುವ ಭರವಸೆ ಇದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಗಣ್ಯರು ಅಕ್ಕ ದಿನಸಿ ಕಿಟ್ ನ್ನು ಖರೀದಿಸಿದರು. ಅಕ್ಕ ಹೋಳಿಗೆ ಮನೆಯಲ್ಲಿ ತಯಾರಿಸಿದ ಹೋಳಿಗೆ ಊಟವನ್ನು ಸೇವಿಸಿ ಮಾರಾಟ ಮೇಳಕ್ಕೆ ಮೆರುಗು ನೀಡಿದರು.

ಮಾರಾಟದಲ್ಲಿ ಏನೇನು ಇರಲಿದೆ!!

ಆರ್ಗಾನಿಕ್ ಬೆಲ್ಲ. ತೊಗರಿಬೇಳೆ, ತೆಂಗಿನಕಾಯಿ, ಗಾಣದ ಕಡಲೆ ಕಾಯಿ ಎಣ್ಣೆ, ಗಾಣದ ಹರಳೆಣ್ಣೆ, ಹೋಮ್ ಮೇಡ್ ಹಪ್ಪಳಗಳನ್ನು ಗ್ರಾಮೀಣ ಸ್ವ-ಸಹಾಯ ಗುಂಪುಗಳ ಸ್ಥಳೀಯ ರೈತರಿಂದ ಸಾವಯವ ವಿಧಾನದಲ್ಲಿ ಬೆಳೆದ ಉತ್ಪನ್ನಗಳನ್ನು ಖರೀದಿಸಿ, ಸಂಸ್ಕರಿಸಿ ಮಾಡಲಾಗಿದೆ.

ಮೈದಾ ಹಿಟ್ಟು, ಹೆಸರುಬೇಳೆ, ನಂದಿನಿ ತುಪ್ಪ, ಸೀಗೆಕಾಯಿ ಪುಡಿಯನ್ನು ತಯಾರಿಕರಿಂದ ನೇರವಾಗಿ ಖರೀದಿಸಿ, ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ದಿನಸಿ ಉತ್ಪನ್ನಗಳಲ್ಲದೆ ಖಾದಿ ಬಟ್ಟೆಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ.

ಮಾರಾಟ ಮೇಳ ಎಲ್ಲೆಲ್ಲಿ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣ, ಕನ್ನಡ ಭವನದ ಆವರಣ, ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಮುಂಭಾಗ ಮತ್ತು ತಾಲ್ಲೂಕು ಆಪೀಸ್ ಮುಂಭಾಗ, ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಮುಂಭಾಗ ಮತ್ತು ಮೈಲಾಂಡ್ಲಹಳ್ಲಿ ಕ್ರಾಸ್ ಕುರುಬೂರು, ಗೌರಿಬಿದನೂರು ನಗರಸಭೆ ಆವರಣ ಮತ್ತು ಶನಿಮಹಾತ್ಮ ದೇವಾಲಯ ಆವರಣ, ಗುಡಿ ಬಂಡೆ ತಾಲ್ಲೂಕು ಪಂಚಾಯಿತಿ ಮುಂಭಾಗ ಹಾಗೂ ಶಿಡ್ಲಘಟ್ಟ ತಾಲೂಕಿನ ಜಂಗಮ ಕೋಟೆ ಕ್ರಾಸ್ ಬಸ್ ನಿಲ್ದಾಣ. ಈ 10 ಸ್ಥಳಗಳಲ್ಲಿ ಮಾರಾಟ ಮೇಳ ಮುಂದಿನ 2 ದಿನ ಇರಲಿದೆ.

ಚಾಲನೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿ ಕಾರಿ ಡಾ. ಎನ್.ಭಾಸ್ಕರ್, ಪಂಚಾಯತ್ ಉಪ ಕಾರ್ಯದರ್ಶಿ ಅಥಿಕ್ ಪಾಷ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.