ಕಾರು ಚಾಲಕ ಎಂ.ಬಾಬು ಆತ್ಮಹತ್ಯೆ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಆ.11ರಂದು ದಲಿತ ಸಂಘಟನೆಗಳಿಂದ ಪ್ರತಿಭಟನೆ
ಎಫ್‌ಐಆರ್‌ನಲ್ಲಿ ಪ್ರಭಾವಿ ಮುಖಂಡರ ಹೆಸರಿದೆ ಎಂಬ ಕಾರಣಕ್ಕೆ ಬಂಧಿಸಲು ಪೊಲೀಸರು ಮುಂದಾ ಗುತ್ತಿಲ್ಲ ಎಂಬ ಅನುಮಾನವಿದೆ. ಎರಡು ದಿನದೊಳಗೆ ಬಂಧಿಸದಿದ್ದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಆಗಲೂ ನಿರ್ಲಕ್ಷ್ಯ ವಹಿಸಿದರೆ ಚಿಕ್ಕಬಳ್ಳಾಪುರ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಸುಧಾವೆಂಕಟೇಶ್ ಮಾತನಾಡಿದರು.

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿಯ ಕಾರು ಚಾಲಕ ಕಚೇರಿ ಆವರಣದಲ್ಲೆ ನೇಣು ಬಿಗಿದುಕೊಂಡು ಸಾವನ್ನಪ್ಪಿ ನಾಲ್ಕು ದಿನಗಳಾದರೂ ಸಾವಿಗೆ ಕಾರಣರಾದ ಮೂರು ಜನರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಎರಡು ದಿನದೊಳಗೆ ಅವರನ್ನು ಬಂಧಿಸದಿದ್ದರೆ ಆಗಸ್ಟ್ 11ರಂದು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಸುಧಾವೆಂಕಟೇಶ್ ಎಚ್ಚರಿಕೆ ನೀಡಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆದ ಸುದ್ದಿಗೋಷ್ಟಿ ಯನ್ನುದ್ದೇಶಿಸಿ ಮಾತನಾಡಿ, ಎಫ್‌ಐಆರ್‌ನಲ್ಲಿ ಪ್ರಭಾವಿ ಮುಖಂಡರ ಹೆಸರಿದೆ ಎಂಬ ಕಾರಣಕ್ಕೆ ಬಂಧಿಸಲು ಪೊಲೀಸರು ಮುಂದಾಗುತ್ತಿಲ್ಲ ಎಂಬ ಅನುಮಾನವಿದೆ. ಎರಡು ದಿನದೊಳಗೆ ಬಂಧಿಸದಿದ್ದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಆಗಲೂ ನಿರ್ಲಕ್ಷ್ಯ ವಹಿಸಿದರೆ ಚಿಕ್ಕಬಳ್ಳಾಪುರ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Crime: ಅನೈತಿಕ ಸಂಬಂಧ; ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸಿದ ನವವಧು
ಬಾಬು ಸಾವಿನ ಹಿಂದೆ ಯಾರೆಲ್ಲಾ ಇದ್ದಾರೆ. ಆ ಕುತಂತ್ರಿಗಳ ವಿರುದ್ದ ನಿಸ್ಪಕ್ಷಪಾತ ತನಿಖೆಯಾಗಲಿ. ೨೫ ಲಕ್ಷ ಪಡೆದು ಬಾಕಿ ಹಣಕ್ಕೆ ಹಿಂಸೆ ನೀಡಿದ ಪರಿಣಾಮ ನೇಣಿಗೆ ಶರಣಾಗಿರುವುದಾಗಿ ಬಾಬು ಡೆತ್‌ನೋಟಲ್ಲಿ ಬರೆದುಕೊಂಡಿದ್ದಾರೆ. ಇದರಲ್ಲಿ ಸಂಸದರ ಪಾತ್ರ ಏನಿದೆ. ಅವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರಾ? ಅನ್ನೋ ತನಿಖೆ ನಡೆಯಲಿ. ಬಿಜೆಪಿ ಪಕ್ಷದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯೂ ದಲಿತರಾಗಿ ಏನು ಮಾಡುತಿದ್ದಾರೆ? ಒಬ್ಬ ದಲಿತ ಚಿಕ್ಕಬಳ್ಳಾಪುರ ದಲ್ಲಿ ಸತ್ತು ಹೋಗಿದ್ದಾರೆ? ಯಾಕೆ ತುಟಿ ಬಿಚ್ಚುತ್ತಿಲ್ಲ? ದಲಿತ ಸತ್ತರೂ ಸಾಯಲಿ ಬಿಡು ಎಂಬ ಧೋರಣೆ ಅನುಸರಿಸುತಿದ್ದಾರೆಯೆ? ಎಂದು ಆಕ್ರೋಶ ವ್ಯಕ್ತಡಿಸಿ, ಬಾಬು ಸಾವಿಗೆ ಕಾರಣನಾದ ಸರ್ಕಾರಿ ಅಧಿಕಾರಿ ಮಂಜುನಾಥ್‌ನನ್ನ ಕೂಡಲೆ ಅಮಾನತ್ತು ಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ನಾಮನಿರ್ಧೇಶಿತ ನಗರಸಭಾ ಸದಸ್ಯೆ ಅಣ್ಣೆಮ್ಮ, ನಗರಾಭಿವೃಧ್ಧಿ ಪ್ರಾಧಿಕಾರದ ಸದಸ್ಯೆ ನಾರಾಯಣಮ್ಮ, ದಲಿತ ಮುಖಂಡರಾದ ಗವಿರಾಯಪ್ಪ, ಶ್ರೀನಿವಾಸ್, ವೆಂಕಟ್, ಮತ್ತಿತರರು ಇದ್ದರು.