ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2850 ಎಕರೆ ಭೂಸ್ವಾಧೀನ ವಿರೋಧಿಸಿ ಶತದಿನೋತ್ಸವ ಪ್ರತಿಭಟನೆ – “ಭೂಮಿ ಕಸಿದರೆ ಸರ್ಕಾರವನ್ನೇ ಕಸಗುಡಿಸುತ್ತೇವೆ” ಎಚ್ಚರಿಕೆ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯುತ್ತಿರುವ “ನಮ್ಮ ಭೂಮಿ–ನಮ್ಮ ಹಕ್ಕು”(Our land – our right) ಹೋರಾಟದ ಶತದಿನೋತ್ಸವದಲ್ಲಿ ನೂರಾರು ರೈತರು, ಮಹಿಳೆಯರು ಭಾಗವಹಿಸಿ ಸರ್ಕಾರದ ಭೂಸ್ವಾಧೀನ ನೀತಿಯನ್ನು ಖಂಡಿಸಿ ದರು. ಪ್ರತಿಭಟನೆಯ ವೇಳೆ ಮಹಿಳೆಯರು ಪೊರಕೆ ಪ್ರದರ್ಶಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದು ಗಮನ ಸೆಳೆಯಿತು.

ಜಂಗಮಕೋಟೆ ಭೂಸ್ವಾಧೀನ ವಿರೋಧಿ ಹೋರಾಟದ ೧೦೦ನೇ ದಿನದ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ ರೈತ ಮಹಿಳೆಯರು.

ಚಿಕ್ಕಬಳ್ಳಾಪುರ: ಜಂಗಮಕೋಟೆ ಹೋಬಳಿಯ 13 ಗ್ರಾಮಗಳ 2850 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿ(KIADB) ಮೂಲಕ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ವಿರೋಧಿಸಿ ನಡೆಯು ತ್ತಿರುವ ರೈತರ ಹೋರಾಟ ಮಂಗಳವಾರಕ್ಕೆ ನೂರು ದಿನ ಪೂರೈಸಿದ್ದು, ಶತದಿನೋತ್ಸವದ ಅಂಗವಾಗಿ ರೈತ ಮಹಿಳೆಯರು ಪೊರಕೆ ಹಿಡಿದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯುತ್ತಿರುವ “ನಮ್ಮ ಭೂಮಿ–ನಮ್ಮ ಹಕ್ಕು”(Our land – our right) ಹೋರಾಟದ ಶತದಿನೋತ್ಸವದಲ್ಲಿ ನೂರಾರು ರೈತರು, ಮಹಿಳೆಯರು ಭಾಗವಹಿಸಿ ಸರ್ಕಾರದ ಭೂಸ್ವಾಧೀನ ನೀತಿಯನ್ನು ಖಂಡಿಸಿ ದರು. ಪ್ರತಿಭಟನೆಯ ವೇಳೆ ಮಹಿಳೆಯರು ಪೊರಕೆ ಪ್ರದರ್ಶಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದು ಗಮನ ಸೆಳೆಯಿತು.

ಇದನ್ನೂ ಓದಿ: Chinthamani News: ಜುಲೈ 27ರಿಂದ 29ರ ತನಕ ಕೈವಾರದಲ್ಲಿ ಗುರುಪೂಜಾ-ಸಂಗೀತೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, “ಜಂಗಮಕೋಟೆ ಮತ್ತು ಬಿಡದಿ ರೈತರ ಹೋರಾಟಗಳೇ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಗೆ ಜೀವಂತ ಸಾಕ್ಷಿಗಳಾಗಿವೆ. ರೈತರ ವಿರೋಧಕ್ಕೆ ಗುರಿಯಾದ ಯಾವುದೇ ಸರ್ಕಾರ ಇತಿಹಾಸದಲ್ಲಿ ಉಳಿದುಕೊಂಡಿಲ್ಲ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivkumar) ಅವರು ಕೂಡಲೇ ಜಂಗಮ ಕೋಟೆ ಹೋಬಳಿಯ 13 ಗ್ರಾಮಗಳಿಗೆ ಸಂಬಂಧಿಸಿದ ಕೆಐಎಡಿಬಿ ಅಂತಿಮ ಅಧಿಸೂಚನೆ ಹಿಂಪಡೆದು ರೈತಪರ ನಿರ್ಧಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

“ಜನಪರ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷ ಗಳಿಂದ ಜನವಿರೋಧಿ ಧೋರಣೆ ಅನುಸರಿಸುತ್ತಿದೆ. ಅಧಿಕಾರಕ್ಕೆ ಮುನ್ನ ರೈತರ ಪರ ನಿಲ್ಲುವುದಾಗಿ ಹೇಳಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ರೈತ ವಿರೋಧಿ ನಿಲುವು ತಾಳಿರುವುದು ದುರಂತ” ಎಂದು ಕಿಡಿಕಾರಿದರು.

cbpm7d

ಬಿಡದಿ ಭೂ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಹಾಗೂ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಜಂಗಮ ಕೋಟೆ ಭಾಗದ ರೈತರ ಸಂಕಷ್ಟಕ್ಕೂ ಸ್ಪಂದಿಸ ಬೇಕು. ಅವರು ಈ ಭಾಗಕ್ಕೆ ಬಂದರೆ ಸಾವಿರಾರು ರೈತರೊಂದಿಗೆ ನಾವು ಬಿಡದಿಗೂ ತೆರಳಿ ಬೆಂಬಲ ಸೂಚಿಸುತ್ತೇವೆ ಎಂದು ಆಹ್ವಾನ ನೀಡಿದರು.

ಇನ್ನೂ ಸಮಯ ಮೀರಿಲ್ಲ. ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್(Shidlaghat MLA B.N. Ravikumar) ಅವರು ರೈತರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜೊತೆಗೆ ಎಚ್.ಡಿ. ದೇವೇಗೌಡ(HD Devegowda), ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ರೈತಪರ ನಿಲುವು ತಾಳುವಂತೆ ಶಾಸಕ ರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅರಿಕೆರೆ ಗ್ರಾಮದ ಹಿರಿಯ ರೈತ ಮಹಿಳೆ ಮುತ್ತಕ್ಕ, “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಮ್ಮ ಭೂಮಿಯ ತಂಟೆಗೆ ಬಂದರೆ ನಿಮ್ಮ ಸರ್ಕಾರವನ್ನೇ ಈ ಪೊರಕೆಯಿಂದ ಕಸಗುಡಿಸುವಂತೆ ಗುಡಿಸಿ ಹಾಕುತ್ತೇವೆ. ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವಪಟ್ಟಣ ಗ್ರಾಮದ ಶಾರದಮ್ಮ ಮಾತನಾಡಿ, “ನೂರು ದಿನಗಳಿಂದ ಚಳಿ, ಮಳೆ, ಗಾಳಿ, ಹಾವು-ಚೇಳು, ಸೊಳ್ಳೆಗಳನ್ನೂ ಲೆಕ್ಕಿಸದೆ ಬೀದಿಯಲ್ಲೇ ಮಲಗಿ ಹೋರಾಟ ನಡೆಸುತ್ತಿದ್ದೇವೆ. ಭೂಮಿ ನಮ್ಮ ಬದುಕಿನ ಆಧಾರ. ಅದನ್ನು ಕಸಿದುಕೊಳ್ಳುವ ಪ್ರಯತ್ನ ನಡೆದರೆ ರೈತರ ಕಣ್ಣೀರ ಶಾಪ ಸರ್ಕಾರಕ್ಕೆ ತಟ್ಟಲಿದೆ” ಎಂದು ನೊಂದು ನುಡಿದರು.

ಹೋರಾಟದ ಶತದಿನೋತ್ಸವ ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡರು, ಮಹಿಳಾ ಕಾರ್ಯ ಕರ್ತರು ಹಾಗೂ ನೂರಾರು ರೈತರು ಭಾಗವಹಿಸಿ ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.