ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಜುಲೈ 27ರಿಂದ 29ರ ತನಕ ಕೈವಾರದಲ್ಲಿ ಗುರುಪೂಜಾ-ಸಂಗೀತೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ

ಈ ಬಾರಿ ಕೈವಾರ ತಾತಯ್ಯನವರ 300ನೇ ಜಯಂತೋತ್ಸವದ ಸಂದರ್ಭದಲ್ಲಿ ಗುರುಪೂಜಾ ಮಹೋ ತ್ಸವವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುವುದು. ಕೈವಾರದ ಸಂಗೀತೋತ್ಸವವು ಸಂಗೀತ ಕ್ಷೇತ್ರದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಗುರುಪೂಜಾ - ಸಂಗೀತ ಮಹೋತ್ಸವಗಳು ಸುಮಾರು ವರ್ಷ ಗಳಿಂದಲೂ ಕೈವಾರದಲ್ಲಿ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ.

ಜುಲೈ 27ರಿಂದ 29ರ ತನಕ ಕೈವಾರದಲ್ಲಿ ಗುರುಪೂಜಾ-ಸಂಗೀತೋತ್ಸವ

ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ಮಠದಲ್ಲಿ ಜುಲೈ 27ರಿಂದ 29 ರವರೆಗೆ ನಡೆಯುವ ರಾಷ್ಟçಮಟ್ಟದ ಸಂಗೀತೋತ್ಸವ ಮತ್ತು ಗುರುಪೂಜಾ ಮಹೋತ್ಸವದ ಆಹ್ವಾನಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. -

Profile
Ashok Nayak Jun 23, 2026 7:53 PM

ಚಿಂತಾಮಣಿ: ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ಮಠ ದಲ್ಲಿ ಜುಲೈ 27 ರಿಂದ 29ರವರೆಗೆ ನಡೆಯುವ ರಾಷ್ಟ್ರಮಟ್ಟದ ಸಂಗೀತೋತ್ಸವ ಮತ್ತು ಗುರುಪೂಜಾ ಮಹೋತ್ಸವದ ಆಹ್ವಾನಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯ ರಾಮ್ ಅವರು ವಿಶೇಷ ಪೂಜೆ ಸಮರ್ಪಿಸುವುದರ ಮೂಲಕ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ಗುರುಗಳ ಪೂಜೆ ಮತ್ತು ಸಂಗೀತೋ ತ್ಸವವನ್ನು ಗುರುಪೂರ್ಣಿಮೆಯ ವಿಶೇಷವಾಗಿ 3 ದಿನಗಳು ನಿರಂತರ 72 ಗಂಟೆಗಳ ಕಾಲ ಶ್ರೀಕ್ಷೇತ್ರ ದಲ್ಲಿ ನಡೆಯುತ್ತದೆ. ಸಂಗೀತ ವಿದ್ವಾಂಸರುಗಳು ಸಂಕೀರ್ತನೆಯನ್ನು ಶ್ರದ್ದಾಭಕ್ತಿಗಳಿಂದ ಗುರುಗಳಿಗೆ ಸಮರ್ಪಿಸಲಿದ್ದಾರೆ ಎಂದರು.

ಇದನ್ನೂ ಓದಿ: Chinthamani News: ಇರಗಂಪಲ್ಲಿ ಗ್ರಾಮ ಸಭೆ: ಮೂಲ ಸೌಕರ್ಯಗಳ ಕೊರತೆ ಹಿನ್ನೆಲೆ ಸಾರ್ವಜನಿಕರ ಆಕ್ರೋಶ

ಈ ಬಾರಿ ಕೈವಾರ ತಾತಯ್ಯನವರ 300ನೇ ಜಯಂತೋತ್ಸವದ ಸಂದರ್ಭದಲ್ಲಿ ಗುರುಪೂಜಾ ಮಹೋತ್ಸವವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುವುದು. ಕೈವಾರದ ಸಂಗೀತೋತ್ಸವವು ಸಂಗೀತಕ್ಷೇತ್ರದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಗುರುಪೂಜಾ - ಸಂಗೀತ ಮಹೋತ್ಸವಗಳು ಸುಮಾರು ವರ್ಷಗಳಿಂದಲೂ ಕೈವಾರದಲ್ಲಿ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ದೇಶದ ವಿವಿಧ ಸಂಗೀತ ವಿದ್ವಾಂಸರುಗಳು ಇಲ್ಲಿ ಬಂದು ಸೇವೆ ಸಲ್ಲಿಸುತ್ತಾರೆ. ಸಂಗೀತ ರಸದೌತಣ ಸವಿಯಲು ಸಂಗೀತ ಪ್ರಿಯರು ಅಪಾರ  ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದರು.

ಶ್ರೀ ಯೋಗಿ ನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಜುಲೈ 27 ಸೋಮವಾರ ಬೆಳಿಗ್ಗೆ 6 ಗಂಟೆಗೆ  ಗುರುಪೂಜೆ-ಸಂಗೀತೋತ್ಸವ ಆರಂಭವಾಗುತ್ತದೆ. ನಾಡಿನ ಪ್ರಸಿದ್ದ ವಿದ್ವಾಂಸರುಗಳು, ನಾದಸ್ವರ ವಾದಕರು, ಸಂಗೀತಗಾರು ಹಾಗೂ ಕಲೆಯ ನಾನಾ ಪ್ರಕಾರದ ಎಲ್ಲಾ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕಾಣುವ ಅವಕಾಶ ಒದಗಿ ಬಂದಿದೆ. ಇಂತಹ ಕಾರ್ಯಕ್ರಮಗಳನ್ನು ಸಂಗೀತ ಕಲಾಭಿಮಾನಿಗಳು ಸದುಪ ಯೋಗ ಮಾಡಿಕೊಳ್ಳಬೇಕು. ಸಂಗೀತ ವಿದ್ವಾಂಸರಿಗೆ ಹಾಗೂ ಆಗಮಿಸುವ ಭಕ್ತರಿಗೆ ಹಲವಾರು ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಆಹ್ವಾನ ಪತ್ರಿಕೆಗಳ ಬಿಡುಗಡೆ ಸಂದರ್ಭದಲ್ಲಿ ಸಾಮೂಹಿಕ ಭಜನೆಯನ್ನು ಸಮರ್ಪಿಸಿ, ಸದ್ಗುರು ತಾತಯ್ಯನವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮಠದ ಟ್ರಸ್ಟ್ನ  ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯನಾರಾಯಣ್, ಶ್ರೀ ಯೋಗಿ ನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಮಠದ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ್, ಉಪನ್ಯಾಸಕ ವೆಂಕಟರವಣಪ್ಪ ಮುಂತಾದವರು ಉಪಸ್ಥಿತ ರಿದ್ದರು.