ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chimul Election: ಚೀಮುಲ್ ಚುನಾವಣೆ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಚಟುವಟಿಕೆ ಗರಿಗೆದರಿಕೆ

ತಾಲ್ಲೂಕಿನ ಮೇಲೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಚೀಮುಲ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಚೀಮುಲ್ ಚುನಾವಣೆಯಲ್ಲಿ ಸ್ವಾಭಿಮಾನಿ ಮತ ದಾರರನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕು ಎಂದರು

ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಚಟುವಟಿಕೆ ಗರಿಗೆದರಿಕೆ

ಶಿಡ್ಲಘಟ್ಟದ ಮೇಲೂರು ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್. -

Ashok Nayak
Ashok Nayak Jan 19, 2026 11:45 PM

ಫೆಬ್ರವರಿ ೧ರಂದು ಚುನಾವಣೆ

ಜೆಡಿಎಸ್ ಅಭ್ಯರ್ಥಿಗಳಿಗೆ ಶಿಸ್ತಿನ ಹೋರಾಟಕ್ಕೆ ಶಾಸಕ ಬಿ.ಎನ್ ರವಿಕುಮಾರ್ ಕರೆ

ಶಿಡ್ಲಘಟ್ಟ: ಚೀಮುಲ್ ಚುನಾವಣೆಯಲ್ಲಿ ಸ್ವಾಭಿಮಾನಿ ಮತದಾರರನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕು ಎಂದು ಶಾಸಕ ಬಿ.ಎನ್ ರವಿಕುಮಾರ್(MLA B.N. Ravikumar) ಕರೆ ನೀಡಿದರು.

ತಾಲ್ಲೂಕಿನ ಮೇಲೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಚೀಮುಲ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಚೀಮುಲ್ ಚುನಾವಣೆಯಲ್ಲಿ ಸ್ವಾಭಿಮಾನಿ ಮತದಾರರನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಬೇಕು ಎಂದರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಲವಾರು ಬಲಿಷ್ಠ ನಾಯಕರು ಇದ್ದರೂ,ಮುಂಬರುವ ಫೆಬ್ರವರಿ 1ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಮೀಸಲಾದ ಎರಡು ಸ್ಥಾನಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳಿಗೆ ಅತಿಹೆಚ್ಚು ಮತ ನೀಡಿ ಗೆಲುವು ಸಾಧಿಸಬೇಕು ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ: Chikkaballapur News: ಯುವಶಕ್ತಿಯಲ್ಲಿ ಸೇವಾ ಮನೋಭಾವ ಜಾಗೃತವಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ : ಡಾ.ಟಿ.ಶ್ರೀನಿವಾಸಪ್ಪ ಅಭಿಮತ

ಈ ವರ್ಷ ಮೊದಲಿಗೆ ನಡೆಯುತ್ತಿರುವ ಚೀಮುಲ್ ಚುನಾವಣೆಯ ಬಳಿಕ ನಗರಸಭೆ ಹಾಗೂ ಪಂಚಾಯತ್ ಸಂಘ–ಸಂಸ್ಥೆಗಳ ಚುನಾವಣೆಗಳು ನಡೆಯಲಿದ್ದು, ಮುಂದಿನ ರಾಜಕೀಯ ಬೆಂಬಲದ ದಿಕ್ಕು ಈ ಚುನಾವಣೆಯ ಫಲಿತಾಂಶದ ಮೇಲೆ ಅವಲಂಬಿತವಾಗಿರಲಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

ಬಾಗೇಪಲ್ಲಿ, ಚೇಳೂರು, ಶಿಡ್ಲಘಟ್ಟ ಹಾಗೂ ಜಂಗಮಕೋಟೆ ಪ್ರದೇಶಗಳಿಗೆ ಒಬ್ಬ ಮಹಿಳಾ ಅಭ್ಯರ್ಥಿ ಸೇರಿ ಒಟ್ಟು ಆರು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ನೂತನವಾಗಿ ರಚನೆಯಾದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಈ ಚುನಾವಣೆ ಯಲ್ಲಿ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆ ಹೆಚ್ಚಿದ್ದು,ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಅತಿದೊಡ್ಡ ಕ್ಷೇತ್ರವಾದ ಶಿಡ್ಲಘಟ್ಟಕ್ಕೆ ಒಟ್ಟು ಆರು ಸ್ಥಾನಗಳನ್ನು ಮೀಸಲಿರಿಸಲಾಗಿದ್ದು, ಅದರಲ್ಲಿ ಶಿಡ್ಲಘಟ್ಟ ನಗರಕ್ಕೆ ಒಂದು ಹಾಗೂ ಜಂಗಮಕೋಟೆ ಹೋಬಳಿಗೆ ಒಂದು ಸ್ಥಾನ ಮಾತ್ರ ಲಭಿಸಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಜೆಡಿಎಸ್ ವತಿಯಿಂದ ವಿಶೇಷ ಸಭೆ ಹಮ್ಮಿಕೊಳ್ಳ ಲಾಗಿದೆ.

ಸಭೆಯಲ್ಲಿ ಹಲವರು ತಾವು ಆಕಾಂಕ್ಷಿಗಳೆಂದು ಅಭಿಪ್ರಾಯ ವ್ಯಕ್ತಪಡಿಸಿದರೂ, ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕ ಹತ್ತಿರವಾಗಿರುವ ಕಾರಣ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಪಕ್ಷದ ಭರವಸೆ ನೀಡಿದರು.

ಸಭೆಯಲ್ಲಿ ಬಂಕ್ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಲಕ್ಷ್ಮೀನಾರಾಯಣ ರೆಡ್ಡಿ, ನಾರಾಯಣಸ್ವಾಮಿ, ಧನಂಜಯ್, ತಾದರೂ ರಘು ಅನಿಲ್ ಕುಮಾರ್, ಮನೋಹರ್, ಜಗದೀಶ್, ಸುರೇಶ್ ಬಚ್ಚನಹಳ್ಳಿ ನಾರಾಯಣಸ್ವಾಮಿ, ಮುನಿಶ್ಯಾಮಪ್ಪ, ವಿಜಯೇಂದ್ರ, ಜನಾರ್ಧನ್, ರಹಮತ್ಹುಲ್ಲಾ, ಆಂಜಿನಪ್ಪ, ಸೇರಿದಂತೆ ಮತ್ತಿತರರು ಹಾಜರಿದ್ದರು.