Minister MC Sudhakar: ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕ ರಹಿತ, ಸರಿಸಾಟಿ ಇಲ್ಲದ ನಾಯಕ: ಸಚಿವ ಎಂ ಸಿ ಸುಧಾಕರ್
ಬಡವರ್ಗದ ಸಮುದಾಯದ ಮಕ್ಕಳಿಗೆ ಶಿಕ್ಷಣ,ಅನ್ನ ನೀಡಬೇಕು ಎನ್ನುವ ಹಂಬಲ,ಕಾಳಜಿ ಮುಖ್ಯ ಮಂತ್ರಿಗಳಿಗೆ ಇದೆ. ಹೀಗಾಗಿ ಮುಖ್ಯಮಂತ್ರಿಯಾಗಿ ಆ ವರ್ಗಗಳ ಶೋಷಿತರಿಗೆ, ಧ್ವನಿ ಇಲ್ಲದವರ ಧ್ವನಿ ಯಾಗಿದ್ದಾರೆ. ಹಣಕಾಸಿನ ಮಂತ್ರಿಯಾಗಿ ಅನೇಕ ಜನಪರ ಯೋಜನೆಗಳ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬಡವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ
-
ಚಿಂತಾಮಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕ ರಹಿತ, ಸರಿಸಾಟಿ ಇಲ್ಲದ ನಾಯಕರಾಗಿದ್ದು, ನಿರಂತರವಾಗಿ ಬಡವರಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪರ ಮುಖ್ಯಮಂತ್ರಿ ಯಾಗಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್( Minister MC Sudhakar)ಅಭಿಪ್ರಾಯಪಟ್ಟರು.
ಕುರುಬರ ಸಂಘವು ನಗರದಲ್ಲಿ ಆಯೋಜಿಸಿದ್ದ ಐತಿಹಾಸಿಕ ವಿಜಯೋತ್ಸವ ಮತ್ತು ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿ ಹಲವಾರು ಸಂಕಷ್ಟಗಳನ್ನು ಎದುರಿಸಿ, ರಾಜಕೀಯ ಏಳುಬೀಳುಗಳ ನಡುವೆ ಈ ಸಾಧನೆ ಮಾಡಿರುವುದು ಗಮನಾರ್ಹ.ಅವರ ಜೀವನದ ಅನುಭವಗಳು ಕಲಿಸಿದ ಪಾಠದಿಂದಲೇ ಬಡವರಿಗೆ ಸ್ಪಂದಿಸುವ ವಿಶಿಷ್ಟ ಶೈಲಿಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದರು.
ಬಡವರ್ಗದ ಸಮುದಾಯದ ಮಕ್ಕಳಿಗೆ ಶಿಕ್ಷಣ, ಅನ್ನ ನೀಡಬೇಕು ಎನ್ನುವ ಹಂಬಲ,ಕಾಳಜಿ ಮುಖ್ಯ ಮಂತ್ರಿಗಳಿಗೆ ಇದೆ. ಹೀಗಾಗಿ ಮುಖ್ಯಮಂತ್ರಿಯಾಗಿ ಆ ವರ್ಗಗಳ ಶೋಷಿತರಿಗೆ,ಧ್ವ ನಿ ಇಲ್ಲದವರ ಧ್ವನಿ ಯಾಗಿದ್ದಾರೆ. ಹಣಕಾಸಿನ ಮಂತ್ರಿಯಾಗಿ ಅನೇಕ ಜನಪರ ಯೋಜನೆಗಳ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬಡವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕಳಂಕ ರಹಿತ ರಾಜಕಾರಣಿಯಾಗಿದ್ದರೂ, ಒಮ್ಮೆ ವಿರೋಧ ಪಕ್ಷಗಳು ಅವರ ಆತ್ಮವಿಶ್ವಾಸವನ್ನು ಕುಂದಿಸುವ ಮತ್ತು ಮನನೋಯಿಸುವ ಕೆಲಸವನ್ನು ಮಾಡಿದರು. ಆದರೂ ಅವರು ಧೃತಿ ಗೆಡಲಿಲ್ಲ, ಸತ್ಯಕ್ಕೆ ಜಯವಾಗುತ್ತದೆ ಎಂದು ಎಲ್ಲವನ್ನು ಸಹಿಸಿಕೊಂಡರು. ಕೊನೆಗೆ ಸತ್ಯಕ್ಕೆ ಜಯವಾಗಿ ಅವರ ಕಳಂಕ ದೂರವಾಯಿತು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಧರ್ಮ,ಜಾತಿ,ಜನಾಂಗಗಳ ಜನರು ಅನ್ಯೋನ್ಯವಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎನ್ನುವ ಕಡೆ ಗಮನ ಹರಿಸಬೇಕು. ಸಮಾಜದಲ್ಲಿ ಶಾಂತಿ,ಸೌಹಾರ್ಧತೆ ಬೆಳೆಸಬೇಕು ಎಂದು ಮನವಿ ಮಾಡಿದರು.
ನಗರದಲ್ಲಿ ವಿವಿಧ ಸಮುದಾಯ, ಸಂಘಗಳ ಮುಖಂಡರು ಪ್ರತಿವರ್ಷ ಜಾಗ ನೀಡಲು ಮನವಿ ನೀಡುತ್ತಿದ್ದರು. ಸುಮಾರು 25 ಸಮುದಾಯದ ಸಂಘಗಳಿಗೆ ಶೈಕ್ಷಣಿಕ ಅಧ್ಯಯನ ಕೇಂದ್ರಗಳ ಸ್ಥಾಪನೆಗಾಗಿ ಒಂದೇ ಕಡೆ ಸ್ಥಳವನ್ನು ನೀಡಲಾಗಿದೆ. ರಸ್ತೆ ಮತ್ತಿತರ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಮುಖಂಡ ಮುನಿಶಾಮಿ ರೆಡ್ಡಿ, ಕುರುಬರ ಸಂಘದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ವೆಂಕಟರವಣಪ್ಪ, ಎಂ.ಎ.ಪ್ರಕಾಶ್ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.