ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ಶಿಡ್ಲಘಟ್ಟಕ್ಕೆ ನ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

ಶಿಡ್ಲಘಟ್ಟ ವಿಧಾನಸಭಾ  ಕ್ಷೇತ್ರವೂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ರಾಜ್ಯಧನ ಪಾವತಿಯಲ್ಲಿ ನಮ್ಮ ಕ್ಷೇತ್ರ ಜಿಲ್ಲೆಯಲ್ಲಿ ಮೊದಲಿದ್ದರೂ ಕೂಡ ಕೈಗಾರಿಕೆಗಳ ಬೆಳವಣಿಗೆ, ಉದ್ಯಮ ಸ್ಥಾಪನೆ ಸೇರಿ ನಾನಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಬೇಕಿದೆ. ಆದ್ದರಿಂದ ನನಗೆ ಮತ ಹಾಕಿರುವಂತ ಕ್ಷೇತ್ರದ ಜನರಿಗೆ ಯಾವುದೇ ರೀತಿ ತೊಂದರೆ ಕೊಡದೆ ನನ್ನ ಕೈಲಾದಷ್ಟು ಮಟ್ಟಿಗೆ  ಅಭಿವೃದ್ಧಿ ಮಾಡಲು ಶಕ್ತಿಮೀರಿ ಶ್ರಮಿಸುತ್ತಿದ್ದೇನೆ

ಶಿಡ್ಲಘಟ್ಟಕ್ಕೆ ನ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

-

Ashok Nayak
Ashok Nayak Nov 20, 2025 12:12 AM

ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರು ಭಾಗವಹಿಸಲು ಶಾಸಕ ಬಿಎನ್ ರವಿಕುಮಾರ್ ಮನವಿ

ಶಿಡ್ಲಘಟ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಅವರು ಜಿಲ್ಲೆಗೆ ನ.24ರಂದು ಆಗಮಿಸುತ್ತಿದ್ದು, ಶಿಡ್ಲಘಟ್ಟ ನಗರದಲ್ಲಿ 200 ಕೋಟಿ ವೆಚ್ಚದ ಹೈಟೆಕ್ ರೇಷ್ಮೆ ಗೂಡು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಿದ್ದಾರೆ. ಆದ್ದರಿಂದ ಎಲ್ಲರೂ ಪಕ್ಷಾತೀತವಾಗಿ ಈ ಕಾರ್ಯಕ್ರಮದಲ್ಲಿ ಭಾಗ ವಹಿಸಬೇಕೆಂದು ಶಾಸಕ ಬಿಎನ್ ರವಿಕುಮಾರ್ ಮನವಿ ಮಾಡಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಶಾಸಕರ ಸ್ವಗೃಹದ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳ ಕಾರ್ಯಕ್ರಮ ದಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ನೋಡಿಕೊಳ್ಳುವ ಮೂಲಕ ಕ್ಷೇತ್ರದ ಗೌರವ ಕಾಪಾಡೋಣ.ಹೆಚ್ಚಿನ ಸಂಕ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಜನತೆ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ, ಅಭಿವೃದ್ದಿಗೆ ಶ್ರೀಕಾರ ಹಾಡೋಣ ಎಂದರು.

ನನ್ನ ಅವಧಿಯಲ್ಲಿ ನಗರ ಸೇರಿದಂತೆ ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕನಸು ಹೊಂದಿದ್ದೇನೆ, ಅಭಿವೃದ್ಧಿ ಮಾಡಲು ನನ್ನದೇ ಆದ ನೀಲನಕ್ಷೆ ಹೊಂದಿದ್ದು, ಹಂತ, ಹಂತವಾಗಿ ಎಲ್ಲವೂ ಕಾರ್ಯರೂಪಕ್ಕೆ ಬರಲಿವೆ ಎಂದರು.

ಇದನ್ನೂ ಓದಿ: Shidlaghatta News: ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ಶಿಡ್ಲಘಟ್ಟ ವಿಧಾನಸಭಾ  ಕ್ಷೇತ್ರವೂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ರಾಜ್ಯಧನ ಪಾವತಿಯಲ್ಲಿ ನಮ್ಮ ಕ್ಷೇತ್ರ ಜಿಲ್ಲೆಯಲ್ಲಿ ಮೊದಲಿದ್ದರೂ ಕೂಡ ಕೈಗಾರಿಕೆಗಳ ಬೆಳವಣಿಗೆ, ಉದ್ಯಮ ಸ್ಥಾಪನೆ ಸೇರಿ ನಾನಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಬೇಕಿದೆ. ಆದ್ದರಿಂದ ನನಗೆ ಮತ ಹಾಕಿರುವಂತ ಕ್ಷೇತ್ರದ ಜನರಿಗೆ ಯಾವುದೇ ರೀತಿ ತೊಂದರೆ ಕೊಡದೆ ನನ್ನ ಕೈಲಾ ದಷ್ಟು ಮಟ್ಟಿಗೆ  ಅಭಿವೃದ್ಧಿ ಮಾಡಲು ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಬಿ.ವೆಂಕಟೇಶ್, ಹುಜುಗೂರು ರಾಮಣ್ಣ, ದಲಿತ ಸಂಘದ ಸಂಚಾಲಕ ಮಂಜುನಾಥ್, ಶಿವಾರೆಡ್ಡಿ ನರಸಿಂಹಮೂರ್ತಿ, ನರಸಿಂಹ ರೆಡ್ಡಿ, ಚೀಮನಹಳ್ಳಿ ಗೋಪಾಲ್, ನಾರಾಯಣಸ್ವಾಮಿ, ಆನಂದ್, ಸದಾಶಿವ, ಎಚ್.ಎನ್. ವೆಂಕಟೇಶ್ ಸೇರಿದಂತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.