ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur city shutdown: ಮಾ.15ಕ್ಕೆ ಹೆಚ್.ಎನ್.ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ಚಿಕ್ಕಬಳ್ಳಾಪುರ ಬಂದ್ : ಸಂದೀಪ್‌ ರೆಡ್ಡಿ ಹೇಳಿಕೆ

ಯಾವಾಗ ಇಲ್ಲಿಗೆ ನೀರು ಬಂತೋ ಆಗ ಬತ್ತಿದ್ದ ಇವುಗಳ ಒಡಲಿನ ತುಂಬಾ ನೀರುಕ್ಕಿ ಹರಿಯು ತ್ತಿದೆ. ಇದೇ ನೀರನ್ನು ನಗರಾಡಳಿತ ಹಿಂದೆ ಮುಂದೆ ನೋಡದೆ ನೇರವಾಗಿ ನಗರವಾಸಿಗಳಿಗೆ ಕುಡಿಯಲು ಹರಿಸಿ ಅವರ ಆರೋಗ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ಯಾಕೆ? ಕುಡಿಯಲು ಯೋಗ್ಯವಲ್ಲ ಎಂದು ಬೋರ್ಡ್ ಹಾಕಿದ್ದರೂ ಯಾಕೆ ಜನತೆಗೆ ಕುಡಿಯಲು ಕೊಡುತ್ತಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು, ಸರಕಾರ ತಿಳಿಸಬೇಕು

3 ಹಂತದ ಶುದ್ಧೀಕರಣ ಮಾಡಿಯೇ ಹರಿಸಬೇಕು.ಇದಕ್ಕಾಗಿ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಬೇಕು.ಹೀಗಾಗಿ ೩ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿ ಮಾ.15ರಂದು ಚಿಕ್ಕಬಳ್ಳಾಪುರ ನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ತಿಳಿಸಿದರು.

ಚಿಕ್ಕಬಳ್ಳಾಪುರ: ಹೆಬ್ಬಾಳ–ನಾಗವಾರ ಕೆರೆಗಳ ಕೊಳಚೆ ನೀರನ್ನು 2 ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿರುವುದನ್ನು ಈ ಕೂಡಲೇ ನಿಲ್ಲಿಸಿ. 3 ಹಂತದ ಶುದ್ಧೀಕರಣ ಮಾಡಿಯೇ ಹರಿಸಬೇಕು. ಇದಕ್ಕಾಗಿ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಬೇಕು. ಹೀಗಾಗಿ 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿ ಮಾ.15ರಂದು ಚಿಕ್ಕಬಳ್ಳಾಪುರ ನಗರ ಬಂದ್‌(Chikkaballapur city shutdown)ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ತಿಳಿಸಿದರು.

ನಗರದ ಕಂದವಾರ ಕೆರೆಯ ಬಳಿಗೆ ಶನಿವಾರ ಮಾಧ್ಯಮದವರನ್ನು ಕರೆದೊಯ್ದು ಹೆಚ್.ಎನ್.ವ್ಯಾಲಿ ನೀರಿನಿಂದಾಗುವ ಅಪಾಯಗಳನ್ನು ತಿಳಿಸಿದ ನಂತರ ಖಾಸಗಿ ಹೋಟೆಲ್‌ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ವಿಸ್ತೃತವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Budget 2026: ಶಾಶ್ವತ ನೀರಾವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಘೋಷಣೆ ಬಗ್ಗೆ ಚಕಾರ ಎತ್ತದಿರುವುದು 17ನೇ ಬಜೆಟ್ ವಿಶೇಷ

ಹೆಚ್.ಎನ್.ವ್ಯಾಲಿ ನೀರು ಕೃಷಿಗೆ ಮತ್ತು ಕುಡಿಯಲು ಯೋಗ್ಯವಲ್ಲ. ಯಾರಾದರೂ ಈ ನೀರನ್ನು ಅಕ್ರಮವಾಗಿ ಬಳಸಿಕೊಂಡರೆ ದಂಡ ವಿಧಿಸಲಾಗುವುದು ಎಂದು ಬೋರ್ಡ್ ಹಾಕಿರುವುದು ಸರಿಯಾಗಿದೆ. ಏಕೆಂದರೆ ಹೆಚ್.ಎನ್,ವ್ಯಾಲಿ ನೀರು ಸಂಗ್ರಹ ಮಾಡಿರುವ ಕಂದವಾರ ಕೆರೆಯ ದಂಡೆಯ ಉದ್ದಕ್ಕೂ 7-8 ಕೊಳವೆ ಬಾವಿಗಳು ಅಂತರ್ಜಲವಿಲ್ಲದೆ ಹಾಳಾಗಿದ್ದವು. ಯಾವಾಗ ಇಲ್ಲಿಗೆ ನೀರು ಬಂತೋ ಆಗ ಬತ್ತಿದ್ದ ಇವುಗಳ ಒಡಲಿನ ತುಂಬಾ ನೀರುಕ್ಕಿ ಹರಿಯುತ್ತಿದೆ. ಇದೇ ನೀರನ್ನು ನಗರಾಡಳಿತ ಹಿಂದೆ ಮುಂದೆ ನೋಡದೆ ನೇರವಾಗಿ ನಗರವಾಸಿಗಳಿಗೆ ಕುಡಿಯಲು ಹರಿಸಿ ಅವರ ಆರೋಗ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ಯಾಕೆ? ಕುಡಿಯಲು ಯೋಗ್ಯವಲ್ಲ ಎಂದು ಬೋರ್ಡ್ ಹಾಕಿದ್ದರೂ ಯಾಕೆ ಜನತೆಗೆ ಕುಡಿಯಲು ಕೊಡುತ್ತಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು, ಸರಕಾರ ತಿಳಿಸಬೇಕು ಎಂದು ಪ್ರಶ್ನಿಸಿದರು.

ಹೆಚ್.ಎನ್. ವ್ಯಾಲಿ ನೀರನ್ನು ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸಿದ ಪರಿಣಾಮ ಜನರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ತಪ್ಪು ತಿದ್ದಿಕೊಳ್ಳಲು 3 ವರ್ಷಗಳ ಕಾಲ ಅವಕಾಶ ನೀಡಲಾಗಿದೆ. ಆದರೂ ತಿದ್ದಿಕೊಂಡಿಲ್ಲ, ಸುಮ್ಮನೆ ಕೂತರೆ ಅಮಾಯಕ ಜನ ಸಾಯುತ್ತಾರೆ. ಹೀಗಾಗಿ ಹಲವು ಸಂಘ–ಸಂಸ್ಥೆಗಳ ಜತೆಗೂಡಿ ಚಿಕ್ಕಬಳ್ಳಾಪುರ ಬಂದ್‌ಗೆ ಕರೆ ನೀಡಲಾಗಿದೆ. ಇದೊಂದು ಪಕ್ಷಾತೀತ, ಧರ್ಮಾ ತೀತ, ಹೋರಾಟವಾಗಿದೆ ಎಂದು ಸ್ಪಷ್ಟಪಡಿಸಿದರು.

ಬಜೆಟ್‌ಗೆ ಮುನ್ನ ಹೆಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಅನುದಾನ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ತಪ್ಪಿದ್ದಲ್ಲಿ ಹೋರಾಟ ಮಾಡುವ ಎಚ್ಚರಿಕೆ ಕೂಡ ರವಾನಿಸಲಾಗಿತ್ತು. ಆದರೂ ಸರಕಾರ ಇತ್ತ ಸಂಪೂರ್ಣವಾಗಿ ನಿರ್ಲಕ್ಷö್ಯ ಧೋರಣೆ ತಾಳಿದೆ.ಸ್ಥಳೀಯ ಜನಪ್ರತಿನಿಧಿಗಳು ಕೂಡ ಇತ್ತ ಗಮನ ಹರಿಸಿಲ್ಲದಿರುವುದು ಬೇಸರ ತರಿಸಿದೆ. ಹೀಗಾಗಿ ಜನರ ಆರೋಗ್ಯ ಮತ್ತು ಶುದ್ಧ ನೀರಿಗಾಗಿ ಆಗ್ರಹಿಸಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶದಿಂದ ಬಂದ್ ಹಮ್ಮಿಕೊಳ್ಳಲಾಗಿದೆ. ಬಂದ್ ವೇಳೆ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಉಂಟು ಮಾಡುವ ಉದ್ದೇಶವಿಲ್ಲ. ಕೊಳಚೆ ನೀರು ಬೇಡ,ಶುದ್ಧ ನೀರು ಬೇಕು”ಎಂಬ ಬೇಡಿಕೆಯೊಂದಿಗೆ ಜನರು ಸ್ವಯಂಪ್ರೇರಿತವಾಗಿ ಈ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ,. ಸ್ವಯಂ ಪ್ರೇರಣೆಯಿಂದ ನಗರವಾಸಿಗಳು ಅಂಗಡಿ ಮುಂಗಟ್ಟೆಗಳನ್ನು ಮುಚ್ಚಿ ಹೋರಾಟಕ್ಕೆ ಬೆಂಬಲ ಸೂಚಿಸುವ ವಿಶ್ವಾಸವಿದೆ. ಕಾನೂನಿನ ಚೌಕಟ್ಟಿನ ಅಡಿಯಲ್ಲಿಯೇ ಶಾಂತಿಯುತವಾಗಿ ಬಂದ್ ಆಚರಿಸಲಾಗುವುದು  ಎಂದು ಹೇಳಿದರು.

ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar)ತಮ್ಮ ಕ್ಷೇತ್ರದ ಜನರಿಗೆ ಗುಣಮಟ್ಟದ ನೀರು ಒದಗಿಸುವತ್ತ ಗಮನ ಹರಿಸಬೇಕು. ತಮ್ಮ ಪಕ್ಷದ ನಾಯಕರ ಮೇಲಿರುವ ಪ್ರೀತಿಯಂತೆ ಕ್ಷೇತ್ರದ ಜನರ ಮೇಲೂ, ಅವರ ಆರೋಗ್ಯದ ಮೇಲೂ ಕಾಳಜಿ ತೋರಿಸಬೇಕು. ಹೆಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಕುರಿತು ಅವರು ಹೋರಾಟಕ್ಕೆ ಕರೆ ನೀಡಿದರೆ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ನಾವು ಭರಿಸಿ, ಅವರೊಂದಿಗೆ ಭುಜಕ್ಕೆ ಭುಜ ಕೊಟ್ಟು ಹೋರಾಟ ನಡೆಸಲು ಸಿದ್ಧವಿದ್ದೇವೆ. ಅವರು ಬಯಸಿದರೆ ಮುಖ್ಯಮಂತ್ರಿಗಳ ಕಾಲು ಹಿಡಿದಾದರೂ 3ನೇ ಹಂತದ ಶುದ್ಧೀಕರಣ ಮಾಡಲು ಅನುದಾನ ಮೀಸಲಾಗಿಡಿ ಎಂದು ಪ್ರಾರ್ಥಿಸಲಾಗುವುದು ಎಂದು ಸಂದೀಪ್ ಬಿ.ರೆಡ್ಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್ ರೆಡ್ಡಿ,ಅಣಕನೂರು ವೆಂಕಟೇಶಪ್ಪ, ಬಾಬು, ಶಿವಕುಮಾರ್, ರಮೇಶ್, ನಾರಾಯಣಸ್ವಾಮಿ, ಶ್ರೀನಿವಾಸ್, ಬಾಲು, ಮುರಳಿ, ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಗೊಳ್ಳು ಶ್ರೀನಿವಾಸ್, ಮಂಜುನಾಥ್ ರೆಡ್ಡಿ, ಶ್ರೀ ರಾಮಪುರ ಶಶಿ, ಅರವಿಂದ ಇತರರು ಉಪಸ್ಥಿತರಿದ್ದರು.