#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ: ಯಮನ ವೇಷಧಾರಿ ಮೂಲಕ ಜಾಗೃತಿ

ಸವಾರರು ರಸ್ತೆ ಅಪಘಾತಗಳಲ್ಲಿ ಅತಿಹೆಚ್ಚು ಅಸು ನೀಗುತ್ತಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಯೂ ಒಂದಾಗಿದೆ.ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವ ಸಂಖ್ಯೆ 300ಕ್ಕೂ ಅಧಿಕ ಇದೆ. ಬೈಕ್ ಸವಾರರೇ ಹೆಚ್ಚಿನವರಾಗಿದ್ದಾರೆ

Chikkaballapur News: ಯಮನ ವೇಷಧಾರಿ ಮೂಲಕ ಜಾಗೃತಿ

Profile Ashok Nayak Jan 25, 2025 7:44 PM

ಚಿಕ್ಕಬಳ್ಳಾಪುರ: ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಚಿಕ್ಕಬಳ್ಳಾಪುರ ಇವರ ನೇತೃತ್ವದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ೨೦೨೫ರ ಅಂಗವಾಗಿ ಯಮನ ವೇಷಧಾರಿ ಮೂಲಕ ಜಿಲ್ಲಾಕೇಂದ್ರದಲ್ಲಿ ಜನಜಾಗೃತಿ ಮೂಡಿಸಲಾಯಿತು.

ಸವಾರರು ರಸ್ತೆ ಅಪಘಾತಗಳಲ್ಲಿ ಅತಿಹೆಚ್ಚು ಅಸು ನೀಗುತ್ತಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಯೂ ಒಂದಾಗಿದೆ.ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವ ಸಂಖ್ಯೆ 300ಕ್ಕೂ ಅಧಿಕ ಇದೆ. ಬೈಕ್ ಸವಾರರೇ ಹೆಚ್ಚಿನವರಾಗಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದ ಕಾರಣ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವಾಗಿದ್ದು ಹೆಚ್ಚಿನವರು ಹದಿಹರೆಯ ದವರು ಮತ್ತು ವಯಸ್ಕರು. ಇದರಿಂದಾಗಿ ಸಾವಿರಾರು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಮನೆಯ ಆಧಾರ ಸ್ತಂಭ ಕಳೆದುಕೊಂಡು ನೋವು ಹೆತ್ತವರನ್ನು ಬಾಧಿಸುತ್ತಿರುವುದರಿಂದ ಯಮನ ವೇಷಧಾರಿ ಮೂಲಕ ಜಿಲ್ಲಾಕೇಂದ್ರದಲ್ಲಿ ಜನಜಾಗೃತಿ ಮೂಡಿಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾ ನಂದ ಇದೀಗ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಅವುಗಳಲ್ಲಿನ ಸಾವುಗಳನ್ನು ತಡೆಯಲು ಇದೀಗ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳ ಪೋಲಿಸರಿಂದ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಮುಂಜಾನೆ ೯ ರಿಂದ ೧೧ ಗಂಟೆಯವರೆಗೆ ಮತ್ತು ಸಂಜೆ ೫ ಗಂಟೆಯಿಂದ ಏಳುಗಂಟೆಯವರೆಗೆ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಟ್ರಾಫಿಕ್ ಎಸ್‌ಐ ಮಂಜುಳ ಮಾತನಾಡಿ ನಾಗರೀಕರಲ್ಲಿ ಸಂಚಾರ ನಿಯಮ ಪಾಲಿಸುವ ಬಗ್ಗೆ ಅಸಡ್ಡೆಯಿದೆ.ಇದನ್ನು ದೂರ ಮಾಡಲು ಇಲಾಖೆ ಎಲ್ಲಾ ರೀತಿಯಲ್ಲೂ ಪ್ರಯತ್ನ ಮುಂದುವರೆ ಸಿದೆ. ಕೆಲ ದಿನಗಳ ಹಿಂದೆ ಹೆಲ್ಮೆಟ್ ಇಲ್ಲದೆ ಸವಾರರಿಗೆ ಎಚ್ಚರಿಕೆ ನೀಡಿ ಕಳಿಸಿದ್ದೇವೆ.ನಂತರ ಹೆಲ್ಮೆಟ್ ಇಲ್ಲದ ಸವಾರರಿಗೆ ದಂಡದೊAದಿಗೆ ದಾನಿಗಳ ನೆರವಿನಿಂದ ಹೆಲ್ಮೆಟ್ ನೀಡಿ ಜಾಗೃತಿ ಮೂಡಿಸಿ ದ್ದೇವೆ. ಇದಕ್ಕೂ ಬಗ್ಗದಿದ್ದಾಗ  ದಂಡದ ಹಾಕಲೇಬೇಕಾಗುತ್ತದೆ ಎಂದರು.


ಚಿಕ್ಕಬಳ್ಳಾಪುರ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಶುಕ್ರವಾರದಂದು ನಗರದ ಬಿಬಿ ರಸ್ತೆ, ಜ್ಯೂನಿಯರ್ ಕಾಲೇಜು ಮತ್ತು ಅಂಬೇಡ್ಕರ್ ವೃತ್ತಗಳಲ್ಲಿ  ಯಮ, ಮತ್ತು ಚಿತ್ರಗುಪ್ರ ರೂಪಕದ ಮೂಲಕ ಬೈಕ್ ಸವಾರರಿಗೆ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ.

ಸಂಚಾರಿ ನಿಯಮಗಳನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಯಮನ ವೇಶ ದಾರಿ ಸೋ.ಸು.ನಾಂಗ್ರೇAದ್ರನಾಥ್ ಮತ್ತು ಚಿತ್ರಗುಪ್ತ ವೇಶದಾರಿ ಕಾಮಶೆಟ್ಟಿಹಳ್ಳಿಯ ಶ್ರೀನಿವಾಸ್ ಶಿಡ್ಲಘಟ್ಟ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರರ ಕೊರಳಿಗೆ ನೇಣುಹಾಕಿ ಕರೆ ದೊಯ್ಯುವ ರೂಪಕದ ಮೂಲಕ ಹೆಲ್ಮೆಟ್ ಬಗ್ಗೆ, ಸೀಟ್ ಬೆಲ್ಟ್ ಧರಿಸಿ ಚಾಲನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುಸುವಲ್ಲಿ ಯಶಸ್ವಿಯಾದರು.

ಸಂಚಾರಿ ನಿಯಮಗಳನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ  ಎಸ್ಪಿ ಕುಶಲ್ ಚೌಕ್ಸೆ ಅವರೇ ಹೆಲ್ಮೆಟ್ ಪರಿಶೀಲನೆ ನಡೆಸುತ್ತಿದ್ದಾರೆ. ಮೊದಲು ನಮ್ಮ ಸಿಬ್ಬಂದಿ ಹೆಲ್ಮೆಟ್ ಹಾಕಬೇಕು.ನಂತರ ಸಾರ್ವಜನಿಕರಿಗೆ ನಾವು ಹೇಳಬೇಕು ಎನ್ನುತ್ತಾರೆ. ಅವರು ಯಾರೆ ಇರಲಿ ದ್ವಿ ಚಕ್ರವಾಹನ ಓಡಿಸುತ್ತಿದ್ದರೆ ಅವರ ತಲೆ ಮೇಲೆ ಹೆಲ್ಮೆಟ್ ಇರಬೇಕು. ಇಲ್ಲದಿದ್ದರೆ ದಂಡ ಹಾಕು ವಂತೆ ಸೂಚಿಸಿರುವ  ಎಸ್ಪಿ ಪ್ರತಿಯೊಂದು ಠಾಣೆಗೂ ಭೇಟಿ ನೀಡಿ ವಿಚಾರಿಸುತ್ತಿರುವುದು ಸಾರ್ವ ಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 44 ಮತ್ತು ರಾಷ್ಟ್ರೀಯ ಹೆದ್ದಾರಿ 69 ಹಾದುಹೋಗಿದೆ. ಬೈಕ್ ಅಪಘಾತಗಳಲ್ಲಿ ಈ ರಾಷ್ಟ್ರೀಯ ಹೆದ್ದಾರಿಗಳದೇ ಸಿಂಹಪಾಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೈನ್ ಮೆಂಟೇನ್ ಮೇಲೆ ಸಹ ಕಣ್ಣೀಡಲಾಗಿದೆ. ಆರಂಭದಲ್ಲಿ ಹೆಲ್ಮಟ್ ಜಾಗೃತಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ. ನಂತರ ಬೈಕ್ ಸವಾರರ ಡಾಕ್ಯುಮೆಂಟ್. ಲೈಸೆನ್ಸ್ ಮತ್ತು ಇನ್ ಶ್ಯೂರೆನ್ಸ್ ಸೇರಿದಂತೆ ವಿವಿಧ ಅಂಶಗಳ ಕಡೆ ಗಮನ ಕೂಡಲಾಗುತ್ತಿದೆ. ಇದಲ್ಲದೆ ಪ್ರತಿಯೊಂದು ಕಾಲೇಜ್ ಸಿಬ್ಬಂದಿ,ಸAಘ ಸಂಸ್ಥೆಗಳ ಸದಸ್ಯರು ಸೇರಿದಂತೆ ಪ್ರತಿಯೊಬ್ಬರಲ್ಲಿ ಈ ರೀತಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ  ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಈ ಮೂಲಕವಾದರೂ ಜಿಲ್ಲೆಯಲ್ಲಿ ಬೈಕ್ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರು ಸಂಖ್ಯೆ ಕಡಿಮೆಯಾಗಲಿ. ಬೈಕ್ ಸವಾರರು ಹೆಲ್ಮೆಟ್ ಧರಿಸಿ ಪ್ರಯಾಣಿಸುವ ಮೂಲಕ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಜಾಗೃತಿಗೆ ಕೈಜೋಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ರಸ್ತೆಗಿಳಿದ ಯಮ ಮತ್ತು ಚಿತ್ರಗುಪ್ತರೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್, ಸಂಚಾರಿ ಪೋಲಿಸ್ ಠಾಣೆಯ ಪಿಎಸ್‌ಐ ಎಸ್.ಆರ್.ಮಂಜುಳಾ, ಪಿಎಸ್ ಐಗಳಾದ ಅಮರ್ ಮೊಗಳೆ, ಹರೀಶ್ ಮತ್ತು ಇತರೆ ಸಿಬ್ಬಂದಿ ಇದ್ದರು.