MLA Puttaswamy Gowda: ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಮೂಲಾಗ್ರ ಬದಲಾವಣೆಗೆ ಬದ್ಧ: ಶಾಸಕ ಪುಟ್ಟಸ್ವಾಮಿಗೌಡ
ಇಂದು ತಾಲೂಕಿನಲ್ಲಿ ಸುಮಾರು ಹತ್ತೊಂಬತ್ತು ಗ್ರಾಮಗಳಲ್ಲಿ ಸುಮಾರು 3.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜನರಿಗೆ ಮೂಲಸೌಕರ್ಯಗಳಾದ ರಸ್ತೆ, ಚರಂಡಿ , ಬೀದಿ ದೀಪ, ಕುಡಿಯುವ ನೀರು, ಸಮುದಾಯ ಭವನ ಸೇತುವೆ ಅಭಿವೃದ್ಧಿ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು, ಕಾಮಗಾರಿಗಳನ್ನು ಮೂರು ತಿಂಗಳುಗಳ ಒಳಗೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರು =ಗಳಿಗೆ ಸೂಚಿಸಲಾಗಿದೆ
ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಮೂಲಾಗ್ರ ಬದಲಾವಣೆಗೆ ಬದ್ಧ ಎಂದು ಶಾಸಕ ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು -
ಗೌರಿಬಿದನೂರು: ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಹಲವು ದಶಕಗಳಿಂದಲೂ ಜನರು ಎದುರಿಸುತ್ತಿರುವ ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿ ದೀಪಗಳು, ಕುಡಿಯುವ ನೀರಿನ, ಕೊರತೆಗಳನ್ನು ಸರಿ ಮಾಡಿ ಅಭಿವೃದ್ಧಿಪಡಿಸುವ ಕಾರ್ಯವು ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮತ್ತಷ್ಟು ಅನುದಾನವನ್ನು ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನೆಡಸಲಾಗುವುದೆಂದು ಶಾಸಕ ಕೆಎಚ್.ಪುಟ್ಟಸ್ವಾಮಿ ಗೌಡರು(MLA Puttaswamy Gowda) ತಿಳಿಸಿದರು.
ಅವರು ತಾಲೂಕಿನ ಸೋನಗಾನಹಳ್ಳಿ ಗ್ರಾಮದಲ್ಲಿ, ಸೋನಗಾನಹಳ್ಳಿ ಗ್ರಾಮದಿಂದ ಹುಣಸೇಕುಂಟೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಯ ಸುಮಾರು 1.51 ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.
ಇದನ್ನೂ ಓದಿ: MLA KH Puttaswamy Gowda: ಕಾಯಕಶರಣರ ಜಯಂತಿ ಆಚರಣೆ ಉದ್ದೇಶ ಸಮಾಜಕ್ಕೆ ಅರಿವು ಮೂಡಿಸುವುದಾಗಿದೆ : ಶಾಸಕ ಪುಟ್ಟಸ್ವಾಮಿಗೌಡ
ಇಂದು ತಾಲೂಕಿನಲ್ಲಿ ಸುಮಾರು ಹತ್ತೊಂಬತ್ತು ಗ್ರಾಮಗಳಲ್ಲಿ ಸುಮಾರು 3.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜನರಿಗೆ ಮೂಲಸೌಕರ್ಯಗಳಾದ ರಸ್ತೆ,ಚರಂಡಿ ,ಬೀದಿ ದೀಪ,ಕುಡಿಯುವ ನೀರು, ಸಮುದಾಯ ಭವನ ಸೇತುವೆ ಅಭಿವೃದ್ಧಿ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು, ಕಾಮಗಾರಿಗಳನ್ನು ಮೂರು ತಿಂಗಳು ಗಳ ಒಳಗೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರುಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಸಂದ್ರ ಗಂಗಾಧರಪ್ಪ , ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ತಾ.ಪಂ ಮಾಜಿ ಸದಸ್ಯ ನಾರಾಯಣಸ್ವಾಮಿ ಮುಖಂಡರಾದ ಬೊಮ್ಮಣ್ಣ, ಬಲರಾಮ್, ತಿಮ್ಮೇಗೌಡ, ಗೋಪಿ, ಲಕ್ಷ್ಮೀಪತಿ, ರಘು, ಶ್ರೀನಿವಾಸ್, ವೆಂಕಟೇಶ್, ನಗರಸಭೆ ಮಾಜಿ ಸದಸ್ಯರಾದ ಶ್ರೀರಾಮಪ್ಪ, ರಾಜಕುಮಾರ, ಮಿಲಿಟರಿ ರಾಮಕೃಷ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.