ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊಸ ವರ್ಷಕ್ಕೆ ಹಾಲಿನ ದರ ಹೆಚ್ಚಳದ ಕೊಡುಗೆ ನೀಡಿದ ಚಿಮುಲ್: ಹಾಲು ಉತ್ಪಾದಕರಿಗೆ ಲೀಟರ್‌ಗೆ ರೂ.1 ದರ ಹೆಚ್ಚಳ

ಪ್ರಸ್ತುತ ಚುಮುಲ್‌ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಮುಂದಿನ ಬೇಸಿಗೆ ಅವಧಿಯಲ್ಲಿ ರೈತರಿಗೆ ಎದುರಾಗುವ ಮೇವಿನ ಕೊರತೆ, ರಾಸುಗಳಿಗೆ ನೀರಿನ ಅಭಾವ, ಹಾಲು ಉತ್ಪಾದನೆ ಕುಸಿತ ಸಾಧ್ಯತೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ. ಸುಧಾ ಕರ್ ಹಾಗೂ ಚಿಮುಲ್ ಆಡಳಿತ ಅಧಿಕಾರಿ ಅಶ್ವಿನ್ ಅವರೊಂದಿಗೆ ಸಮಾಲೋಚಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲೀಟರ್‌ಗೆ 1 ರೂ ಹೆಚ್ಚುವರಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ

ಜನವರಿ 1ರಿಂದ ಮಾರ್ಚ್ ಅಂತ್ಯದವರೆಗೆ ಕೇವಲ ಮೂರು ತಿಂಗಳು ಮಾತ್ರ 1 ರೂ ಹೆಚ್ಚಳದ ಆದೇಶ ಜಾರಿಯಲ್ಲಿರಲಿದೆ : ಶ್ರೀನಿವಾಸಗೌಡ

ಚಿಕ್ಕಬಳ್ಳಾಪುರ: ಹೊಸ ವರ್ಷದ ಕೊಡುಗೆಯಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.1 ದರ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಗೌಡ ತಿಳಿಸಿದರು.

ನಗರ  ಹೊರ ವಲಯದಲ್ಲಿರುವ ಚಿಮುಲ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರಸ್ತುತ ಚುಮುಲ್‌ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಮುಂದಿನ ಬೇಸಿಗೆ ಅವಧಿಯಲ್ಲಿ ರೈತರಿಗೆ ಎದುರಾಗುವ ಮೇವಿನ ಕೊರತೆ, ರಾಸುಗಳಿಗೆ ನೀರಿನ ಅಭಾವ, ಹಾಲು ಉತ್ಪಾದನೆ ಕುಸಿತ ಸಾಧ್ಯತೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ (District In-charge Minister Dr.M.C.SudhaKar) ಹಾಗೂ ಚಿಮುಲ್ ಆಡಳಿತ ಅಧಿಕಾರಿ ಅಶ್ವಿನ್ ಅವರೊಂದಿಗೆ ಸಮಾಲೋಚಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲೀಟರ್‌ಗೆ 1 ರೂ ಹೆಚ್ಚುವರಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರ ರೈತಪರ ಕಾಳಜಿಯಿಂದ ಚಿಮುಲ್‌ಗೆ ಆರ್ಥಿಕ ಹೊರೆ ಆದರೂ ಹೊಸ ವರ್ಷದ ಕೊಡುಗೆಯಾಗಿ ಹಾಲು ಉತ್ಪಾದಕರಿಗೆ ಲೀಟರ್ ಗೆ ಒಂದು ರೂಪಾಯಿ ಹೆಚ್ಚುವರಿ ನೀಡುವ ನಿರ್ಧಾರವನ್ನು ಚಿಮುಲ್ ತೆಗೆದುಕೊಂಡಿದೆ. ಜನವರಿ ೧ರಿಂದ ಮಾರ್ಚ್ ಅಂತ್ಯದವರೆಗೆ ಮೂರು ತಿಂಗಳ ಅವಧಿಗೆ ಮಾತ್ರ ಈ ದರ ಹೆಚ್ಚಳ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಒಂದು ರೂಪಾಯಿ ಹೆಚ್ಚಳದ ಕಾರಣವಾಗಿ ಈ ಮೂರು ತಿಂಗಳ ಅವಧಿಯಲ್ಲಿ ಚಿಮುಲ್‌ಗೆ ಸುಮಾರು ನಾಲ್ಕೂವರೆ ಕೋಟಿ ರೂ.ಆರ್ಥಿಕ ಹೊರೆ ಬೀಳಲಿದೆ.ಆದರೂ ಜಿಲ್ಲೆಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಭೀಮಕೋರೆಗಾಂವ್ ಓದೋಣ, ಐತಿಹಾಸಿಕ ಅನ್ಯಾಯವನ್ನು ಅರಿಯೋಣ : ಚಂದ್ರಶೇಖರ್

196 ಸಹಕಾರ ಸಂಘಗಳು

ಕೋಲಾರ ಹಾಲು ಒಕ್ಕೂಟದಿಂದ ಬೇರ್ಪಟ್ಟು ಒಂದು ವರ್ಷ ಕಳೆದಿದೆ. ಚಿಮುಲ್ ಕಳೆದ ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ಹಾಲು ಉತ್ಪಾದಕರ ಹಿತಕ್ಕಾಗಿ ಹಲವು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ವರ್ಷ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಎರಡು ತಿಂಗಳ ಕಾಲ ಲೀಟರ್‌ಗೆ ರೂ.1 ದರ ಹೆಚ್ಚಳ ಮಾಡಲಾಗಿತ್ತು. ಈ ವರ್ಷ ರೈತರ ಅನುಕೂಲಕ್ಕಾಗಿ ಬರೋಬ್ಬರಿ ಮೂರು ತಿಂಗಳ ಕಾಲ ದರ ಹೆಚ್ಚಳ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 996 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು,ಅವುಗಳಲ್ಲಿ 125 ಮಹಿಳಾ ಸಂಘಗಳಿವೆ.ಕರಡು ಮತದಾರರ ಪಟ್ಟಿಯಂತೆ 913 ಡೆಲಿಗೇಟ್ಸ್ ಮತದಾನ ಮಾಡಬಹುದು.

ಪ್ರಸ್ತುತ ಚಿಮುಲ್‌ನಲ್ಲಿ ಹಾಲು ಮತ್ತು ಮೊಸರು ಪ್ಯಾಕಿಂಗ್ ಘಟಕ ಇಲ್ಲದ ಕಾರಣ ಕೋಲಾರ ಹಾಗೂ ಬೆಂಗಳೂರು ಡೇರಿಗಳಿಂದ ಪ್ಯಾಕಿಂಗ ಮಾಡಲಾಗುತ್ತಿದ್ದು ಅದಕ್ಕೆ ಹೆಚ್ಚು ವೆಚ್ಚವಾಗುತ್ತಿದೆ. ಸರಕಾರ ಲೋಕಲ್ ಸೆಲ್ ಪ್ಯಾಕಿಂಗ್ ಘಟಕ ಸ್ಥಾಪನೆಗಾಗಿ 9.15 ಎಕರೆ ಜಮೀನು ಮಂಜೂರು ಮಾಡಿದ್ದು ಇದಕ್ಕೆ ಬೇಲಿ ಅಳವಡಿಸಲಾಗಿದೆ. 30 ಕೋಟಿ ವೆಚ್ಚದಲ್ಲಿ ಪ್ಯಾಕಿಂಗ್ ಯೂನಿಟ್ ಸ್ಥಾಪನೆಗಾಗಿ  ಡಿ.ಪಿ.ಆರ್ ತಯಾರಿಸಲಾಗಿದೆ. ಈ ಘಟಕ ನಿರ್ಮಾಣ ವಾದಲ್ಲಿ ಪ್ರತಿ ತಿಂಗಳು ಸುಮಾರು ಎರಡು ಕೋಟಿ ರೂ ಹೆಚ್ಚು ಉಳಿತಾಯವಾಗಲಿದೆ ಎಂಬ ನಿರೀಕ್ಷೆಯಿದೆ ಎಂದು ತಿಳಿಸಿದರು.

2cbpm2srgowda ಒಕ

*
ಪ್ರಸ್ತುತ ಹಾಲು ಉತ್ಪಾದಕ ರೈತರಿಗೆ ಲೀಟರ್‌ಗೆ ರೂ..35.40 ನೀಡಲಾಗುತ್ತಿತ್ತು. ಜನವರಿ 1 ರಿಂದ ಮೂರು ತಿಂಗಳ ಅವಧಿಗೆ ರೂ.1 ಹೆಚ್ಚಳ ಮಾಡಲಾಗಿದ್ದು, ರೈತರಿಗೆ ಲೀಟರ್‌ಗೆ ರೂ.36.40 ಸಿಗಲಿದೆ.ಇದಕ್ಕೆ ಸರ್ಕಾರದ ಪ್ರೋತ್ಸಾಹಧನ ರೂ.5 ಸೇರಿ, ಒಟ್ಟು ರೂ.41.40 ಹಾಲು ಉತ್ಪಾದಕ ರೈತರಿಗೆ ಲಭಿಸಲಿದೆ. ಮುಂದೆ ಏಪ್ರಿಲ್ ನಂತರ ನೂತನ ಆಡಳಿತ ಮಂಡಳಿ ದರ ಹೆಚ್ಚಳ ಮಂದು ವರೆಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಒಕ್ಕೂಟ ಆದಷ್ಟು ರೈತರಿಗೆ ನೆರವು ನೀಡುವುದೇ ನಮ್ಮ ಉದ್ದೇಶ

-ಶ್ರೀನಿವಾಸಗೌಡ.ವ್ಯವಸ್ಥಾಪಕ ನಿರ್ದೇಶಕರು.

ಚಿಮುಲ್ ಚಿಕ್ಕಬಳ್ಳಾಪುರ.

ಫೆ೧ಕ್ಕೆ ಚಿಮುಲ್ ಚುನಾವಣೆ
ಚಿಮುಲ್ ವ್ಯಾಪ್ತಿಯಲ್ಲಿ 13 ಚುನಾಯಿತ ಪ್ರತಿನಿಧಿಗಳಿದ್ದು ಒಬ್ಬರು ಸರಕಾರದ ನಾಮನಿದೇಶಿತ ಸದಸ್ಯರು, 4 ಅಫಿಷಿಯಲ್ ಬಾಡಿ ಒಟ್ಟು 18 ಮಂದಿ ನಿರ್ದೇಶಕರಿರುತ್ತಾರೆ. ಚುನಾವಣೆಗೆ ಸಂಬಂಧಿ ಸಿದಂತೆ ಜ.12 ಅಥವಾ 13ಕ್ಕೆ ನೋಟಿಫಿಕೇಷನ್ ಹೊರ ಬೀಳಲಿದೆ. ಫೆಬ್ರವರಿ 1ಕ್ಕೆ ಚಿಮುಲ್ ಚುನಾವಣೆ ನಡೆಯಲಿದೆ.ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಚಿಮುಲ್ ವೆಬ್ ಸೈಟ್, ಶಿಬಿರ ಕಚೇರಿ ನೋಟೀಸ್ ಬೋರ್ಡ್, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಜನವರಿ 7 ತನಕ ಈ ಸಂಬAಧ ಏನಾದರೂ ತಕರಾರುಗಳಿದ್ದಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಜ.೧೦ಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮೋದನೆ ಪಡೆದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು.ಚಿಮುಲ್ ಚುನಾವಣಾಧಿಕಾರಿಗಳಾಗಿ ಉಪವಿಭಾಗಾ ಧಿಕಾರಿ ಅಶ್ವಿನ್ ಇರಲಿದ್ದು ಪಾರದರ್ಶಕವಾಗಿ ಚುನಾವಣೆ ನಡೆಯಲಿದೆ ಎಂಬುದು ಎಂ.ಡಿ ಶ್ರೀನಿವಾಸ್ ಗೌಡ ಅವರ ಅನಿಸಿಕೆ.