ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MP Dr K Sudhakar: ಸಂಸದ ಸುಧಾಕರ್ ದಲಿತ ವಿರೋಧಿ ಎನ್ನುವ ಕಾಂಗ್ರೆಸ್ ಮುಖಂಡರ ಆರೋಪ ನಿರಾಧಾರ: ಗಂಗರೇಕಾಲುವೆ ಮೂರ್ತಿ

ಮೃತ ಬಾಬು ಕುಟುಂಬದ ಬಗ್ಗೆ ನಮಗೆ ಅಪಾರವಾದ ಅನುಕಂಪವಿದೆ. ಆ ಕುಟುಂಬಕ್ಕೆ ನ್ಯಾಯ ಒದಗಿಸಲು ನಾವು ಕೂಡ ಮುಂದೆ ನಿಲ್ಲುತ್ತೇವೆ. ಆದರೆ ಶಾಸಕ ಮತ್ತು ಸಚಿವರು ಸಾವಿನ ಮನೆ ಯಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ನಾಯಕರ ಏಳಿಗೆ ಸಹಿಸದೆ ಅವರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸುವ ಬದಲಿಗೆ, ಬೇರೆ ಏನಾದರೂ ಹುಡುಕಿ, ನೀವು ಏನೇ ಮಾಡಿದರೂ ನಮ್ಮ ನಾಯಕದ್ದು ಅಪರಂಜಿಯ ವ್ಯಕ್ತಿತ್ವ

ಚಿಕ್ಕಬಳ್ಳಾಪುರ ನಗರದ ಸಂಸದ ಡಾ.ಕೆ.ಸುಧಾಕರ್ ನಿವಾಸದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಬೆಂಬಲಿತ ದಲಿತ ಮುಖಂಡರು ಮಾತನಾಡಿದರು.

ಚಿಕ್ಕಬಳ್ಳಾಪುರ : ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರನ್ನು ಅಪರಾಧಿ ಮಾಡಿರುವ ಕಾಂಗ್ರೆಸ್ ನಾಯಕರು ಅವರನ್ನು ದಲಿತ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರ ಆರೋಪ ನಿರಾಧಾರವಾಗಿದೆ. ನಮ್ಮ ನಾಯಕರು ದಲಿತರ ಪಾಲಿನ ಆಶಾಕಿರಣವಾಗಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್ಟಿ ಸಮುದಾಯದ ಮುಖಂಡ ಗಂಗರೇಕಾಲುವೆ ಮೂರ್ತಿ ತಿಳಿಸಿದರು.

ಸಂಸದ ಡಾ.ಕೆ.ಸುಧಾಕರ್ ಅವರ ನಿವಾಸದಲ್ಲಿ ಸೋಮವಾರ ಡಾ.ಕೆ.ಸುಧಾಕರ್ ಬೆಂಬಲಿತ ದಲಿತ ಮುಖಂಡರು ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಮೃತ ಬಾಬು ಕುಟುಂಬದ ಬಗ್ಗೆ ನಮಗೆ ಅಪಾರವಾದ ಅನುಕಂಪವಿದೆ. ಆ ಕುಟುಂಬಕ್ಕೆ ನ್ಯಾಯ ಒದಗಿಸಲು ನಾವು ಕೂಡ ಮುಂದೆ ನಿಲ್ಲುತ್ತೇವೆ. ಆದರೆ ಶಾಸಕ ಮತ್ತು ಸಚಿವರು ಸಾವಿನ ಮನೆ ಯಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ನಾಯಕರ ಏಳಿಗೆ ಸಹಿಸದೆ ಅವರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸುವ ಬದಲಿಗೆ, ಬೇರೆ ಏನಾದರೂ ಹುಡುಕಿ, ನೀವು ಏನೇ ಮಾಡಿ ದರೂ ನಮ್ಮ ನಾಯಕದ್ದು ಅಪರಂಜಿಯ ವ್ಯಕ್ತಿತ್ವ. ವಿಧಾನ ಸಭೆ ಚುನಾವಣೆಯಲ್ಲಿ ಸೋತರೂ ಲೋಕಸಭೆಯಲ್ಲಿ ಗೆದ್ದು ರಾಷ್ಟçನಾಯಕರಾಗಿದ್ದಾರೆ.ಅಂತಹವರ ವಿರುದ್ಧ ಬೀದಿಯಲ್ಲಿ ನಿಂತಿರುವ ಯರ‍್ಯಾರೋ ಹಗುರವಾಗಿ ಮಾತನಾಡುವುದು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Chikkaballapur News: ದಲಿತ ಸಮುದಾಯದ ದುರುಪಯೋಗ ಖಂಡನೀಯ : ಬಾಲಕುಂಟಹಳ್ಳಿ ಗಂಗಾಧರ್ ಆರೋಪ

ಸಂಸದರ ಬಂಧನಕ್ಕೆ ಆಗ್ರಹಿಸುವ ಕೆಲವರಿಗೆ ಅಟ್ರಾಸಿಟಿ ಕೇಸು ಯಾವಾಗ ಹಾಕುತ್ತಾರೆ? ಯಾಕೆ ಹಾಕುತ್ತಾರೆ ಎಂಬ ಬಗ್ಗೆ ಕನಿಷ್ಟ ಜಾಗೃತಿಯಿಲ್ಲದಿರುವುದು ದುರಂತ.ಮೃತ ಬಾಬುವನ್ನು ನಮ್ಮ ನಾಯಕರು ಮುಖಾಮುಖಿ ಭೇಟಿಯಾಗಿಲ್ಲ, ಮಾತನಾಡಿಲ್ಲ, ಆದರೂ ಜಾತಿನಿಂದನೆ ಕೇಸು ಹಾಕ ಲಾಗಿದೆ. ಸುಖಾಸುಮ್ಮನೆ ಇಂತಹ ಕೇಸು ಹಾಕಿರುವವರಿಗೆ ನ್ಯಾಯಾಲಯವೇ ತಕ್ಕ ಶಿಕ್ಷೆ ಕೊಡಲಿದೆ, ಛೀಮಾರಿ ಹಾಕಲಿದೆ.ಆಗ ನಮ್ಮ ನಾಯಕರ ವ್ಯಕ್ತಿತ್ವ ಎಂತಹುದು ಎಂಬುದು ಜಗತ್ತಿಗೆ ತಿಳಿಯಲಿದೆ. ನಾವು ದಲಿತರೇ ನಮ್ಮ ನಾಯಕರ ಬೆಂಬಲಕ್ಕೆ ಸದಾ ನಿಲ್ಲುತ್ತೇವೆ.ಯಾರಿಗೂ ಅಂಜುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಕ್ಷೇತ್ರದಲ್ಲಿ ಧ್ವೇಷದ ರಾಜಕಾರಣ ಮಾಡುತ್ತಿದ್ದಾರೆ? ನಮ್ಮ ನಾಯಕರ ಏಳಿಗೆ ಸಹಿಸದೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.ಯಾರು ಏನೇ ಮಾಡಿದರೂ ಸಂಸದ ಸುಧಾಕರ್ ಅವರ ವ್ಯಕ್ತಿತ್ವಕ್ಕೆ ಮಸಿಬಳಿಯಲು ಸಾಧ್ಯವಿಲ್ಲ. ಮೃತಬಾಬು ಎಲ್ಲೂ ಕೂಡ ಸುಧಾಕರ್ ಅವರ ಕೈಗೆ ಹಣಕೊಟ್ಟಿದ್ದೇನೆ ಎಂದು ಹೇಳಿಲ್ಲ. ಆದರೂ ದುರುದ್ಧೇಶದಿಂದ ಅವರ ಮೇಲೆ ಎಫ್‌ಐಆರ್ ಮಾಡಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಅಧಿಕಾರ ಹೀಗೆಯೇ ಇರುವುದಿಲ್ಲ, ಸಮಯ ಬಂದಾಗ ಎಲ್ಲರಿಗೂ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸುಧಾಕರ್ ಬೆಂಬಲಿತ ಮುಖಂಡರು ಬಾಬು ಸಾವಿವನ್ನು ಕಾಂಗ್ರೆಸ್ ಹೈಜಾಕ್ ಮಾಡಿ, ರಾಜಕೀಯಕ್ಕೆ ಬಳಸಿಕೊಂಡಿದೆ. ನಮ್ಮ ನಾಯಕರು ದಲಿತ ವಿರೋಧಿ ಯೋ ಅಲ್ಲವೋ ಎಂಬುದು ತಿಳಿಯಬೇಕಾದರೆ ಅವರ ಅವಧಿಯಲ್ಲಿ ಆಗಿರುವ ಪೋಲೀಸು ಕೇಸು ಗಳ ಮಾಹಿತಿ, ದಲಿತರಿಗೆ ಒದಗಿಸಿರುವ ಸೌಲತ್ತುಗಳ ಮಾಹಿತಿ ಪಡೆದು ತಾಳೆ ಹಾಕಿ ನೋಡಿ, ಕೇವಲ 2 ವರ್ಷದಲ್ಲಿ ಕ್ಷೇತ್ರದಲ್ಲಿ ಶಾಸಕರು, ಜಿಲ್ಲೆಯಲ್ಲಿ ಸಚಿವರು ಎಷ್ಟು ಅಟ್ರಾಸಿಇಟಿ ಕೇಸು ಗಳನ್ನು ಹಾಕಿಸಿದ್ದಾರೆ ಎಂಬುದರ ಸತ್ಯ ತಿಳಿಯಲಿದೆ ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷ ಗ್ಯಾಸ್ ನಾಗರಾಜ್, ಟಿಎಪಿಸಿಎಂಸ್ ನಿರ್ದೇಶಕ ಈರಚೆನ್ನಪ್ಪ, ಏರ್‌ಪೋರ್ಟ್ ಮುನಿರಾಜು, ಕೌನ್ಸಿಲರ್ ಸತೀಶ್, ಮಾಜಿ ನಗರಸಭಾ ಅಧ್ಯಕ್ಷ ಮುನಿಕೃಷ್ಣ, ಮುದ್ದೇನಹಳ್ಳಿ ಶಿವಕುಮಾರ್, ರಾಮ್‌ಸಾಗರ್ ಮತ್ತಿತರರು ಇದ್ದರು.