ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ದಲಿತ ಸಮುದಾಯದ ದುರುಪಯೋಗ ಖಂಡನೀಯ : ಬಾಲಕುಂಟಹಳ್ಳಿ ಗಂಗಾಧರ್ ಆರೋಪ

ಸಂಸದರ ವಿರುದ್ಧದ ದಲಿತರ ಹೋರಾಟಕ್ಕೆ ಫೋಸ್ಟರ್ ಗಳನ್ನು ಅಂಟಿಸುತ್ತಿದ್ದ ಹಾಗೂ ಹಂಚು ವವರಲ್ಲಿ ಯಾರೂ ದಲಿತರಿಲ್ಲ. ಬಲಿಜ ಜನಾಂಗಕ್ಕೆ ಸೇರಿದ ಕಾಂಗ್ರೆಸ್ ನಾಯಕರು ಇದ್ದಾರೆ. ಇವರು ದಲಿತ ವಿರೋಧಿ ಎಂಬುದಾಗಿ ಹೇಳುತ್ತಿದ್ದಾರೆ. ಶೋಷಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರು ವುದರ ಜತೆಗೆ ದಲಿತ ಸಮುದಾಯದ ನಾಯಕರನ್ನು ಪರಸ್ಪರ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ

ದಲಿತ ಸಮುದಾಯವನ್ನು ದುರುಪಯೋಗಪಡಿಸಿಕೊಳ್ಳುವುದು ಖಂಡನೀಯ

ದಲಿತ ಸಮುದಾಯವನ್ನು ದುರುಪಯೋಗಪಡಿಸಿಕೊಳ್ಳುವುದರ ಧೋರಣೆಯು ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಬಿ.ಎನ್.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ashok Nayak Ashok Nayak Aug 11, 2025 10:54 PM

ಚಿಕ್ಕಬಳ್ಳಾಪುರ : ದಲಿತ ಸಮುದಾಯವನ್ನು ದುರುಪಯೋಗಪಡಿಸಿಕೊಳ್ಳುವುದರ ಧೋರಣೆಯು ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಬಿ.ಎನ್.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಭವನದ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಬುವಿನ ಡೆತ್ ನೋಟ್ ನಲ್ಲಿ ಸಂಸದ ಡಾ ಕೆ.ಸುಧಾಕರ್ ಹೆಸರು ಇಲ್ಲದಿದ್ದಲ್ಲಿ ಬೇರೆ ಯಾರೂ ಹೋರಾಟ ನಡೆಸುತ್ತಿರಲಿಲ್ಲ ಎಂದು ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಇದನ್ನೂ ಓದಿ: Air chief marshal: ಆಪರೇಷನ್‌ ಸಿಂದೂರ್‌ನಲ್ಲಿ ಪಾಕ್ ನ 5 ಫೈಟರ್ ಜೆಟ್‌, 1 F16 ಧ್ವಂಸ; ವಾಯುಸೇನೆ ಮುಖ್ಯಸ್ಥರಿಂದ ಮಾಹಿತಿ

ಸಂಸದರ ವಿರುದ್ಧದ ದಲಿತರ ಹೋರಾಟಕ್ಕೆ ಫೋಸ್ಟರ್ ಗಳನ್ನು ಅಂಟಿಸುತ್ತಿದ್ದ ಹಾಗೂ ಹಂಚು ವವರಲ್ಲಿ ಯಾರೂ ದಲಿತರಿಲ್ಲ. ಬಲಿಜ ಜನಾಂಗಕ್ಕೆ ಸೇರಿದ ಕಾಂಗ್ರೆಸ್ ನಾಯಕರು ಇದ್ದಾರೆ. ಇವರು ದಲಿತ ವಿರೋಧಿ ಎಂಬುದಾಗಿ ಹೇಳುತ್ತಿದ್ದಾರೆ. ಶೋಷಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರು ವುದರ ಜತೆಗೆ ದಲಿತ ಸಮುದಾಯದ ನಾಯಕರನ್ನು ಪರಸ್ಪರ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಾಬುವಿನ ಆತ್ಮಹತ್ಯೆ ಪ್ರಕರಣದಲ್ಲಿ ಹಣ ಕೊಟ್ಟವರು, ಹಣ ಪಡೆದುಕೊಂಡವರು ಇಬ್ಬರು ದಲಿತರು. ಇದರ ಅರಿವಿದ್ದರೂ ದಲಿತ ವಿರೋಧಿ ಟೀಕೆಯ ಹೋರಾಟಗಳನ್ನು ನಡೆಸಲಾಗುತ್ತಿದೆ. ಈಗಲಾದರೂ ರಾಜಕಾರಣ ಬಿಟ್ಟು ಅವರ ಕುಟುಂಬಕ್ಕೆ ಪ್ರಾಮಾಣಿಕ ನ್ಯಾಯ ಒದಗಿಸಬೇಕಾಗಿದೆ ಎಂದು ಒತ್ತಾಯಿಸಿದರು.