CPIM: ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು, ಹೈಕೋರ್ಟ್ ಘೋಷಣೆ ಸ್ವಾಗತಿಸಿದ ಸಿಪಿಐಎಂ: ತಕ್ಷಣವೇ ಮರು ಚುನಾವಣೆಗೆ ಆಗ್ರಹ
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಅವರ ಅಕ್ರಮ ಆಸ್ತಿ ಮತ್ತು ಆದಾಯದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಪಿಐ(ಎಂ) ನಿರಂತರವಾಗಿ ಜನರ ನಡುವೆ ಸ್ಪಷ್ಟ ವಾಗಿ ಹೇಳುತ್ತಾ ಬಂದಿದೆ. ಅವರು ತಮ್ಮ ನಿಜವಾದ ಆದಾಯ ಮತ್ತು ಆಸ್ತಿಗಳನ್ನು ಚುನಾವಣಾ ಆಯೋಗಕ್ಕೆ ಸರಿಯಾದ ರೀತಿಯಲ್ಲಿ ತೋರಿಸದೆ ವಂಚನೆ ಮಾಡಿದ್ದಾರೆ ಎಂಬುದು ಹೈಕೋರ್ಟ್ನ ಈ ತೀರ್ಪಿನಿಂದ ಸಾಬೀತು ಆದಂತಾಗಿದೆ
-
ಚಿಕ್ಕಬಳ್ಳಾಪುರ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA SN Subbareddy) ಶಾಸಕತ್ವ ಅಸಿಂಧುಗೊಳಿಸಿ ತೀರ್ಪು ಪ್ರಕಟಿಸಿರುವ ರಾಜ್ಯ ಹೈಕೋರ್ಟ್ನ ಏಕ ಸದಸ್ಯ ಪೀಠದ ಆದೇಶ ವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯು, ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತದೆ. ಚುನಾವಣಾ ಆಯೋಗ ತಕ್ಷಣವೇ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಲು ಅಗತ್ಯ ಕ್ರಮ ವಹಿಸಬೇಕು ಎಂದು ರಾಜ್ಯ ಸಮಿತಿ ಸದಸ್ಯ ಅನಿಲ್ ಆವುಲಪ್ಪ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಿಪಿಐಎಂ ಪಕ್ಷದ ವತಿಯಿಂದ ನಡೆಸಿದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಅವರ ಅಕ್ರಮ ಆಸ್ತಿ ಮತ್ತು ಆದಾಯದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಪಿಐ(ಎಂ) ನಿರಂತರವಾಗಿ ಜನರ ನಡುವೆ ಸ್ಪಷ್ಟವಾಗಿ ಹೇಳುತ್ತಾ ಬಂದಿದೆ. ಅವರು ತಮ್ಮ ನಿಜವಾದ ಆದಾಯ ಮತ್ತು ಆಸ್ತಿಗಳನ್ನು ಚುನಾವಣಾ ಆಯೋಗಕ್ಕೆ ಸರಿಯಾದ ರೀತಿಯಲ್ಲಿ ತೋರಿಸದೆ ವಂಚನೆ ಮಾಡಿದ್ದಾರೆ ಎಂಬುದು ಹೈಕೋರ್ಟ್ನ ಈ ತೀರ್ಪಿನಿಂದ ಸಾಬೀತು ಆದಂತಾಗಿದೆ ಎಂದರು.
ಇದನ್ನೂ ಓದಿ: MLA SN Subbareddy: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಎಂದ ರಾಜ್ಯ ಹೈಕೋರ್ಟ್
ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಶಾಸಕ ಸುಬ್ಬಾರೆಡ್ಡಿ ಅವರು 2023ರ ಚುನಾವಣೆಯಲ್ಲಿ ಆಸ್ತಿ ಮತ್ತು ತೆರಿಗೆ ಪಾವತಿ ಬಗ್ಗೆ ಸತ್ಯವನ್ನು ಘೋಷಣೆ ಮಾಡಿಕೊಳ್ಳದೆ, ಮುಚ್ಚಿಡುವ ಮೂಲಕ ಚುನಾವಣಾ ಆಯೋಗವನ್ನೇ ದಾರಿ ತಪ್ಪಿಸಿರುವ ಇವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರದಿಂದ ಈ ಎರಡುವರೆ ವರ್ಷದಲ್ಲಿ ಶಾಸಕರಾಗಿ ಅವರು ಪಡೆದ ಎಲ್ಲ ಹಣಕಾಸು ಮತ್ತಿತರೆ ಸೌಲಭ್ಯಗಳನ್ನು ಸರಕಾರ ಈ ಕೂಡಲೇ ವಾಪಾಸು ಪಡೆಯಬೇಕು ಎಂದರು.
ಕಾಂಗ್ರೆಸ್ ಪಕ್ಷ ಕೂಡ ಇಂತಹ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಿ ಮತದಾರರನ್ನು ವಂಚಿಸಿದ್ದಕ್ಕಾಗಿ ಬಾಗೇಪಲ್ಲಿ ಕ್ಷೇತ್ರದ ಮತದಾರರಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸ ಬೇಕು ಎಂದು ಒತ್ತಾಯಿಸುತ್ತದೆ ಎಂದರು.
ಸುಬ್ಬಾರೆಡ್ಡಿ ಅವರು ತಾವು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೊದಲ ಚುನಾವಣೆಯಿಂದಲೇ ತಮ್ಮ ಅಕ್ರಮ ಬಂಡವಾಳವನ್ನ ಹೂಡುತ್ತಾ ಈ ಕ್ಷೇತ್ರದ ಮತದಾರರನ್ನು ಭ್ರಷ್ಟ ಗೊಳಿಸು ವಂತಹ ದುಷ್ಟ ಕೆಲಸದಲ್ಲಿ ತೊಡಗಿರುವಂತಹದ್ದು ಗುಟ್ಟಾದ ವಿಚಾರವಲ್ಲ. ಅದೇ ರೀತಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತು ಅದರ ಅಭ್ಯರ್ಥಿ ಕೂಡಾ ವ್ಯಾಪಕವಾದ ಅಕ್ರಮ ಬಂಡವಾಳ ತೊಡಗಿಸಿ ಮತದಾರರನ್ನು ಭ್ರಷ್ಠಗೊಳಿಸಿದ್ದು ಕೂಡಾ ಗುಟ್ಟಿನ ವಿಚಾರವಲ್ಲ. ಇದೆಲ್ಲ ಕ್ಷೇತ್ರದ ಜನತೆಗೆ ಗೊತ್ತಿರುವ ವಿಚಾರವಾಗಿದೆ ಎಂದರು.
ಈ ರೀತಿ ಚುನಾವಣೆಗಳಲ್ಲಿ ಅಕ್ರಮ ನಡೆಸಿ ಗೆಲ್ಲುವವರು, ಅವರ ಸರಕಾರಗಳು ತಮ್ಮ ಸ್ವಂತ ಹಾಗೂ ಅವರ ವಂದಿ ಮಾಗದರ ಆಸ್ತಿಗಳ ಹೆಚ್ಚಳಕ್ಕೆ, ಕ್ಷೇತ್ರದಲ್ಲಿ ಭ್ರಷ್ಟತೆಗೆ ಹಾಗು ಆ ಮೂಲಕ ಜನತೆಯ ಮೇಲಿನ ದೌರ್ಜನ್ಯಕ್ಕೆ ಕಾರಣವಾಗುತ್ತಾರೆಯೇ ಹೊರತು,ಕ್ಷೇತ್ರದ ಹಾಗೂ ಜನತೆಯ ನೈಜ ಅಭಿವೃದ್ಧಿಗೆ ಕಾರಣವಾಗುವುದಿಲ್ಲ ಎಂಬುದು ಮತದಾರರ ಅನುಭವವಾಗಿದೆ ಎಂದರು.
ಹಿಂದೆ ಸಿಪಿಐಎಂ ಪಕ್ಷದ ಜಿ.ವಿ.ಶ್ರೀರಾಮ ರೆಡ್ಡಿ ಅವರು ಶಾಸಕರಾದ ಸಂದರ್ಭದಲ್ಲಿ ಆಗಿರು ವಂತಹ ಕ್ಷೇತ್ರದ ಅಭಿವೃದ್ಧಿ ಜನತೆಯ ಕಣ್ಣಿಗೆ ಕಟ್ಟುವಂತಿದೆ. ಆದರೆ ಆನಂತರ ಶಾಸಕರ ಅಭಿವೃದ್ಧಿ ಏನು ಎಂಬುದು ಎಲ್ಲರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮತದಾರ ಬಂಧುಗಳು ಇಂತಹ ಅಭ್ಯರ್ಥಿಗಳು ಮತ್ತು ಇಂತಹ ರಾಜಕೀಯ ಪಕ್ಷಗಳನ್ನು ತಿರಸ್ಕರಿಸುವಂತೆ ಸಿಪಿಐಎಂ ಪಕ್ಷ ಮನವಿ ಮಾಡುತ್ತದೆ.
ಈ ವೇಳೆ ಸಿಪಿಐಎಂ ರಾಜ್ಯ ಸಮಿತಿ ಸದಸ್ಯರಾದ ಡಾ. ಅನಿಲ್ ಕುಮಾರ್, ಜಿಲ್ಲಾ ಕಾರ್ಯ ದರ್ಶಿ ಜಿ. ಸಿದ್ದಗಂಗಪ್ಪ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ರಘುರಾಮರೆಡ್ಡಿ,ಬೈರಾರೆಡ್ಡಿ, ಬಿ.ಎನ್.ಮುನಿಕೃಷ್ಣಪ್ಪ, ಇ.ಟಿ.ಮುನಿಶಾಮಿ, ಅಶ್ವತ್ಥ ನಾರಾಯಣ, ಚನ್ನರಾಯಪ್ಪ,ರಮಣ, ಮತ್ತಿತರರು ಇದ್ದರು.