ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ರೈತರ ನೆರವಿಗೆ ಬೆಳೆ ವಿಮೆ ಕಡ್ಡಾಯ; ನಿರ್ಲಕ್ಷ್ಯ ಸಹಿಸುವುದಿಲ್ಲ": ಬರ ನಿರ್ವಹಣೆ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ

ರಾಜ್ಯದಲ್ಲಿ ಕಳೆದ 150 ವರ್ಷಗಳಲ್ಲೇ ಕಂಡು ಕೇಳರಿಯದ ಬರದ ಪರಿಸ್ಥಿತಿ  ಎದುರಾಗಿದ್ದು, ವಾಡಿಕೆ ಯಷ್ಟು ಮಳೆಯಾಗದ ಕಾರಣ ಬಿತ್ತನೆ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿ ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬುಧವಾರ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಬರ ನಿರ್ವಹಣೆ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರ: "ಬರ ಪರಿಸ್ಥಿತಿಯಲ್ಲಿ ರೈತರನ್ನು ರಕ್ಷಿಸುವ ಪ್ರಮುಖ ಅಸ್ತ್ರವೇ ಬೆಳೆ ವಿಮೆ. ರೈತ ರಿಗೆ ಬೆಳೆ ವಿಮೆ ಮಾಡಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ" ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ (Dr G Parameshwar)ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಗೆ 80 ಸಾವಿರ ಬೆಳೆ ವಿಮೆ ನೋಂದಣಿ ಗುರಿ  ನೀಡಲಾಗಿದ್ದರೂ ಇದುವರೆಗೆ ಕೇವಲ 24 ಸಾವಿರ ರೈತರು ಮಾತ್ರ ನೋಂದಣಿ  ಮಾಡಿರುವುದು ಸರಿಯಲ್ಲ ಎಂದು ತೀವ್ರ ಹೊರ ಹಾಕಿದರು.

ಇದನ್ನೂ ಓದಿ: Chinthamani News: ಗ್ರಾಮಗಳ ಅಭಿವೃದ್ಧಿಗಾಗಿ ನಿಲ್ಲದ ಹೋರಾಟ: ಮೂರನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ ಮಂಜುನಾಥ್

"ರೈತರಿಗೆ ನೆರವಾಗುವ ಅವಕಾಶ ನಿಮ್ಮ ಕೈಯಲ್ಲಿದೆ. ನಿಮ್ಮ ಸೋಮಾರಿತನದಿಂದ ರೈತರು ಸಂಕಷ್ಟ ಅನುಭವಿಸಬೇಕಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಗುರಿ ತಲುಪುವವರೆಗೆ ಅಧಿಕಾರಿಗಳಿಗೆ ವಿರಾಮ ವಿಲ್ಲ. ಗ್ರಾಮ ಮಟ್ಟದಲ್ಲಿ ಬೀಡುಬಿಟ್ಟು ಜಾಗೃತಿ  ಮೂಡಿಸಬೇಕು" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಜ್ಯದಲ್ಲಿ ಕಳೆದ 150 ವರ್ಷಗಳಲ್ಲೇ ಕಂಡು ಕೇಳರಿಯದ ಬರದ ಪರಿಸ್ಥಿತಿ  ಎದುರಾಗಿದ್ದು, ವಾಡಿಕೆ ಯಷ್ಟು ಮಳೆಯಾಗದ ಕಾರಣ ಬಿತ್ತನೆ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಅಗತ್ಯವಿರುವ ಕಡೆಗಳಲ್ಲಿ ತಕ್ಷಣ ಬೋರ್‌ವೆಲ್ ಕೊರೆಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದ ಡಿಸಿಎಂ, ಪಶುಗಳಿಗೆ ಮೇವು ಉತ್ಪಾದನೆ ಹೆಚ್ಚಿಸಲು ನೀರಿರುವ ರೈತರಿಗೆ ಮೇವಿನ ಬೀಜ ವಿತರಿಸುವಂತೆ ಹೇಳಿದರು.

22cbpm2l (1)

ಕಂದಾಯ ಇಲಾಖೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು ಇಲಾಖೆ ಯಲ್ಲಿ ಕೆಲಸ ಆಗದೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದ ನಂತರ ವಿಳಂಬ ನೀತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಅವರು ಜಿಲ್ಲೆಯಲ್ಲಿ ಬಾಕಿ ಉಳಿದಿರುವ ೩೫ ಸಾವಿರ ಬಾಕಿ ಹಕ್ಕುಪತ್ರ ಪ್ರಕರಣಗಳನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು.

ಜಿಲ್ಲೆಯಲ್ಲಿ ಶೀಘ್ರವೇ ಹಕ್ಕುಪತ್ರ ವಿತರಣೆಯ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಇದರಲ್ಲಿ ಸುಮಾರು ಒಂದು ಲಕ್ಷದಷ್ಟು  ಕಂದಾಯ ದಾಖಲೆಗಳನ್ನು ನೈಜ ಫಲಾನುಭವಿಗಳಿಗೆ ಹತ್ತಾಂತರಿಸಲಾಗುವುದು. ಸದರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದೂ ತಿಳಿಸಿದರು.

ಗೌರಿಬಿದನೂರು ತಾಲೂಕಿನಲ್ಲಿ ಎಂದಿನAತೆ ಸಾಮಾನ್ಯ ಮಳೆ ದಾಖಲಾಗಿದ್ದರೂ ಬಿತ್ತನೆ ಮಾತ್ರ ಕಡಿಮೆಯಾಗಿರುವ ಕುರಿತು ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸ್ಥಳ ಪರಿಶೀಲನೆ  ನಡೆಸಿ ವಾಸ್ತವ ಸಂಗತಿಯನ್ನು ವರದಿ ರೂಪದಲ್ಲಿ ಕೊಡಿ ಎಂದು ಸೂಚಿಸಿದರು.

29cbpm2s (1) ಒಕ

ಸಭೆಯಲ್ಲಿ ಶಾಸಕರಾದ ಪ್ರದೀಪ್ ಈಶ್ವರ್, ಬಿ.ಎನ್.ರವಿಕುಮಾರ್, ಕೆ.ಹೆಚ್.ಪುಟ್ಟಸ್ವಾಮಿಗೌಡ, ಜನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳ, ಜಿಲ್ಲಾಧಿಕಾರಿ ಜಿ.ಪ್ರಭು,ಸಿಇಒ ಡಾ.ವೈ.ನವೀನ್ ಭಟ್, ಎಸ್ಪಿ.ಕುಶಾಲ್ ಚೌಕ್ಸೆ,ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಡಿಸಿಎಂ ಸೂಚನೆಗಳ ಹೈಲೈಟ್ಸ್

*ಜಿಲ್ಲೆಯಲ್ಲಿ 80 ಸಾವಿರ ಬೆಳೆ ವಿಮೆ ನೋಂದಣಿ ಗುರಿ, ಇದುವರೆಗೆ ಕೇವಲ 24 ಸಾವಿರ ನೋಂದಣಿ.
*ಕುಡಿಯುವ ನೀರಿಗೆ ಕ್ಷೇತ್ರವಾರು 1 ಕೋಟಿ ಅನುದಾನ.
*ಅಗತ್ಯವಿದ್ದಲ್ಲಿ ತಕ್ಷಣ ಬೋರ್‌ವೆಲ್ ಕೊರೆಸಿ ವಿದ್ಯುತ್ ಸಂಪರ್ಕ.
*ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಮುನ್ನೆಚ್ಚರಿಕೆ.
*35 ಸಾವಿರ ಬಾಕಿ ಹಕ್ಕುಪತ್ರ ಪ್ರಕರಣಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ.
*ಆಗಸ್ಟ್ 15ರ ಬಳಿಕ ಬರ ಘೋಷಣೆ ಕುರಿತು ಸರ್ಕಾರ ನಿರ್ಧಾರ.
*ಸಾರ್ವಜನಿಕ ಸೇವೆಗಳಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ.

ಜಿಲ್ಲೆಯ ಬರದ ಚಿತ್ರಣದ ಬುಲೆಟ್ ಪಾಯಿಂಟ್ಸ್
ವಾಡಿಕೆಯಷ್ಟು ಮಳೆಯಿಲ್ಲ; ಬಿತ್ತನೆ ಪ್ರಮಾಣ ಶೇ.40ಕ್ಕಿಂತ ಕಡಿಮೆ.
*1.86 ಲಕ್ಷ ಜಾನುವಾರು, 10 ಲಕ್ಷಕ್ಕೂ ಅಧಿಕ ಕುರಿ–ಮೇಕೆಗಳ ಸಂರಕ್ಷಣೆಗೆ ಮೇವು ಸಿದ್ಧತೆ.
*165 ಮಳೆ ಮಾಪನ ಕೇಂದ್ರಗಳಲ್ಲಿ 105 ಮಾತ್ರ ಕಾರ್ಯನಿರ್ವಹಣೆ; ಉಳಿದವುಗಳ ದುರಸ್ತಿಗೆ ಸೂಚನೆ.
*ಕುಡಿಯುವ ನೀರು, ಆರೋಗ್ಯ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಮೇಲೆ ವಿಶೇಷ ನಿಗಾ.

image

"ರೈತರಿಗೆ ಸಹಾಯ ಮಾಡುವ ಅವಕಾಶ ನಿಮ್ಮ ಕೈಯಲ್ಲಿದೆ. ನಿಮ್ಮ ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಅನುಭವಿಸುವಂತಾದರೆ ಸಹಿಸುವುದಿಲ್ಲ. ಜನರ ಕೆಲಸವೇ ಸರ್ಕಾರದ ಮೊದಲ ಆದ್ಯತೆ.

– ಡಾ.ಜಿ. ಪರಮೇಶ್ವರ್, ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ