ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ಗ್ರಾಮಗಳ ಅಭಿವೃದ್ಧಿಗಾಗಿ ನಿಲ್ಲದ ಹೋರಾಟ: ಮೂರನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ ಮಂಜುನಾಥ್

ಕಳೆದ 2014ರಲ್ಲೇ ಸಮಗ್ರ ಗ್ರಾಮಗಳ ಅಜೆಂಡಾ ಕಾರ್ಯಸೂಚಿ ಎಂಬ ಮಹತ್ವದ ಪುಸ್ತಕವನ್ನು ಸಿದ್ಧಪಡಿಸಿ, ಮುಖ್ಯಮಂತ್ರಿಗಳ ಕಚೇರಿ ಹಾಗೂ ರಾಜ್ಯಪಾಲರ ಕಚೇರಿಗೆ ತಲುಪಿಸಲಾಗಿತ್ತು.ಅಂದು ಗ್ರಾಮಸ್ಥರ ಸಮ್ಮುಖದಲ್ಲೇ ಈ ಮನವಿಯನ್ನು ಸಲ್ಲಿಸಲಾಗಿದ್ದರೂ, ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಡಿಸಿ ಬರದಿದ್ದರೆ ಉಪವಾಸ ಸತ್ಯಾಗ್ರಹ! ಹೋರಾಟಗಾರ ಮಂಜುನಾಥ್ ಖಡಕ್ ಎಚ್ಚರಿಕೆ

-

Profile
Ashok Nayak Jul 21, 2026 12:39 PM

ಚಿಂತಾಮಣಿ: ಗ್ರಾಮೀಣ ಪ್ರದೇಶಗಳ ಸಮಗ್ರ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಗಳು ಮತ್ತು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಸಾಮಾಜಿಕ ಹೋರಾಟಗಾರ ಮಂಜುನಾಥ್ ವೈ. ಎನ್.ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಹಳ್ಳಿಗಳ ಮೂಲಸೌಕರ್ಯ ಹಾಗೂ ಪ್ರವಾಸಿ ತಾಣಗಳಾಗಿ ಮಾರ್ಪಡಿಸುವ ತಮ್ಮ ಸುದೀರ್ಘ ಹೋರಾಟಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಕಳೆದ 2014ರಲ್ಲೇ ಸಮಗ್ರ ಗ್ರಾಮಗಳ ಅಜೆಂಡಾ ಕಾರ್ಯಸೂಚಿ ಎಂಬ ಮಹತ್ವದ ಪುಸ್ತಕವನ್ನು ಸಿದ್ಧಪಡಿಸಿ, ಮುಖ್ಯಮಂತ್ರಿಗಳ ಕಚೇರಿ ಹಾಗೂ ರಾಜ್ಯಪಾಲರ ಕಚೇರಿಗೆ ತಲುಪಿಸಲಾಗಿತ್ತು.ಅಂದು ಗ್ರಾಮಸ್ಥರ ಸಮ್ಮುಖದಲ್ಲೇ ಈ ಮನವಿಯನ್ನು ಸಲ್ಲಿಸಲಾಗಿದ್ದರೂ, ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Chinthamani News: ಕೀರ್ತನೆ ಹಾಡುವಾಗ ಶಾಸ್ತ್ರೀಯತೆಗಿಂತಲೂ ಭಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು : ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಮನವಿ

ಅಷ್ಟೇ ಅಲ್ಲದೆ,ಮುರುಗಮಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗಾಗಿ ಹಲವಾರು ಸಚಿವರಿಗೆ ಪತ್ರಗಳನ್ನು ಬರೆದು, ಮಾದರಿ ಗ್ರಾಮವನ್ನಾಗಿ ರೂಪಿಸಲು ಅವಕಾಶ ಕಲ್ಪಿಸುವಂತೆ ವಿನಂತಿಸಲಾಗಿತ್ತು. ಆದರೆ, ಈ ಮನವಿಗಳಿಗೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳಿಂದ ಯಾವುದೇ ತೃಪ್ತಿದಾಯಕ ಉತ್ತರ ಬಂದಿಲ್ಲ ಎಂದು ಮಂಜುನಾಥ್ ತಿಳಿಸಿದರು.

2025ರಲ್ಲೂ ಯರ್ರಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಪ್ರವಾಸಿ ತಾಣಗಳಾಗಿ ರೂಪಿಸಲು ಮತ್ತು ವಿಶೇಷ ಅನುದಾನ ಒದಗಿಸಲು ಒತ್ತಾಯಿಸಿ ನಮ್ಮ ಹೋರಾಟ ಮುಂದು ವರಿದಿದೆ. ಹಳ್ಳಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳ ಜಾರಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಮತ್ತು ಕಾಲ್ನಡಿಗೆ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ವಿವರಿಸಿದರು.

ಈಗಾಗಲೇ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ. ಸುಧಾಕರ್(Dr Sudhakar) ಅವರ ಕಚೇರಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಕಚೇರಿಗಳಿಗೂ ಖುದ್ದಾಗಿ ಭೇಟಿ ನೀಡಿ ಮನವಿ ಸಲ್ಲಿಸಲಾಗಿದೆ.ಇನ್ನಾದರೂ ಸರ್ಕಾರ ಎಚ್ಚೆತ್ತು ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಮಂಜುನಾಥ್ ವೈ. ಎನ್.ಅವರು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ಯರಕೋಟೆ ಚಿಂಗನಹಳ್ಳಿ ಗುಡ್ಡಕ್ಕೆ ಸಂಬಂಧಿಸಿದಂತೆ ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಂಬರುವ ಶುಕ್ರವಾರದಂದು ಶಾಂತಿ ಯುತ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು,ನಮ್ಮ ಹೋರಾಟ ಸಂಪೂರ್ಣವಾಗಿ ಶಾಂತಿಯುತ ವಾಗಿರಲಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಅಥವಾ ಸಂಚಾರಕ್ಕೆ ತೊಂದರೆ ಮಾಡುವುದಿಲ್ಲ. ಸರ್ಕಾರದ ಆಸ್ತಿಪಾಸ್ತಿಗಳಿಗೆ ಧಕ್ಕೆ ತರುವುದಿಲ್ಲ.ಕೇವಲ ರೈತರ ಹಕ್ಕುಗಳಿಗಾಗಿ ಮತ್ತು ಹಳ್ಳಿಗಳ ಅಭಿವೃದ್ಧಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಕೆಲವರು ನನ್ನ ಹೋರಾಟದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಜನ ಬರಲಿ ಅಥವಾ ಬಾರದಿರಲಿ, ನಾನು ನನ್ನ ಸ್ವಂತ ಲಾಭಕ್ಕಾಗಿ ಹೋರಾಟ ಮಾಡುತ್ತಿಲ್ಲ. ಗ್ರಾಮಗಳ ಅಭಿವೃದ್ಧಿ ಮತ್ತು ಮಾದರಿ ಗ್ರಾಮಗಳ ನಿರ್ಮಾಣವೇ ನನ್ನ ಅಂತರಾಳದ ಉದ್ದೇಶವಾಗಿದೆ ಎಂದು ಮಂಜುನಾಥ್ ವೈ.ಎನ್. ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಂದೆವರೆದು ಮಾತನಾಡಿದವರು ಯರಕೋಟೆ ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗಿಲ್ಲ,ಇದು ಸಾವಿರಾರು ಭಕ್ತಾದಿಗಳು ಬರುವ ಪವಿತ್ರ ಕ್ಷೇತ್ರವಾಗಿದೆ.ಇಲ್ಲಿಗೆ ಬರುವ ಭಕ್ತರಿಗಾಗಿ ಶೌಚಾಲಯ ಗಳು, ವಿಶ್ರಾಂತಿ ಗೃಹಗಳು ಹಾಗೂ ಆಸ್ಪತ್ರೆಯಂತಹ ತುರ್ತು ಮೂಲಸೌಕರ್ಯಗಳನ್ನು ಒದಗಿಸಬೇಕು ಎನ್ನುವುದು ಪ್ರಮುಖ ಆಗ್ರಹವಾಗಿದೆ.

2008 ರಲ್ಲಿ ಭೂಮಿಯಲ್ಲಿದ್ದ 80 ವರ್ಷಗಳ ಹಳೆಯ ರಥದ ಚಕ್ರಗಳನ್ನು ಹೊರತೆಗೆದು,ಸ್ಥಳೀಯ ಶಾಸಕ ಹಾಗೂ ಮಾಜಿಸಚಿವ ಡಾ.ಎಂ.ಸಿ.ಸುಧಾಕರ್ ಅವರ ಕೈಯಿಂದಲೇ ಪೂಜೆ ಮಾಡಿಸಲಾಗಿತ್ತು. ಹಾಗೆಯೇ 2010 ರಲ್ಲಿ ದೀಪೋತ್ಸವ ಹಾಗೂ ದನಗಳ ಜಾತ್ರೆಯನ್ನು ಇವರ ನೇತೃತ್ವದಲ್ಲೇ ಉದ್ಘಾಟಿಸಲಾಗಿತ್ತು ಎಂಬುದನ್ನು ನೆನಪಿಸಿದ ಮಂಜುನಾಥ್, ಈ ಕ್ಷೇತ್ರದ ಅಭಿವೃದ್ಧಿಗೆ ಈಗ ಹೆಚ್ಚಿನ ಗಮನ ನೀಡಬೇಕಿದೆ ಎಂದಿದ್ದಾರೆ.