ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

UPI: ಯುಪಿಐ ಶುಲ್ಕದ ಚರ್ಚೆ: ಸಣ್ಣ ವ್ಯಾಪಾರಿಗಳಲ್ಲಿ ಆತಂಕ: ಕೆಲವು ವ್ಯಾಪಾರಿ ವಹಿವಾಟುಗಳಿಗೆ MDR ಜಾರಿ; ಲಾಭಾಂಶದ ಮೇಲೆ ಪರಿಣಾಮದ ಭೀತಿ

ದೊಡ್ಡ ಮೊತ್ತದ ವಹಿವಾಟುಗಳಿಗೆ MDR ಅನ್ವಯಿಸಿದರೆ ವೆಚ್ಚ ಹೆಚ್ಚಾಗಬಹುದು. ಈ ವೆಚ್ಚವನ್ನು ಗ್ರಾಹಕರಿಂದ ವಸೂಲು ಮಾಡಬಾರದು ಎಂಬ ನಿಯಮವಿದ್ದರೂ, ವ್ಯಾಪಾರಿಗಳ ಲಾಭಾಂಶದ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕ ಸಂತೋಷ್ ಅಭಿಪ್ರಾಯ ಪಟ್ಟರು. ಹಾಲು ಮತ್ತು ಇತರ ಅಗತ್ಯ ವಸ್ತುಗಳ ಖರೀದಿಯಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶುಲ್ಕವು ಸಣ್ಣ ಅಂಗಡಿಗಳ ಮೇಲೂ ಪರಿಣಾಮ ಬೀರಬಹುದು.

ಮುನಿರಾಜು ಎಂ ಅರಿಕೆರೆ 

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ಡಿಜಿಟಲ್ ಇಂಡಿಯಾ ಕಟ್ಟುವ ಕರೆಗೆ ಓಗೊಟ್ಟ ದೇಶದ ಜನತೆ ಡಿಜಿಟಲ್ ಪಾವತಿಗೆ ತುಂಬಾನೇ ಹೊಂದಿಕೊಂಡಿರುವ ಹೊತ್ತಿನಲ್ಲಿ ಯುಪಿಐ(UPI) ಪಾವತಿ ಮೇಲಿನ ಶುಲ್ಕ ನಾಗರೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹೌದು. 2048ರ ಒಳಗೆ ದೇಶವನ್ನು ವಿಕಸಿತ್ ಭಾರತವಾಗಿಸುವುದು ನಮ್ಮ ಸಂಕಲ್ಪವಾಗಿದೆ ಎನ್ನು ತ್ತಲೇ ಯುಪಿಐ ಶುಲ್ಕದ ವಿಚಾರ ಮುನ್ನೆಲೆಗೆ ಬಂದಿರುವುದು ಜನ ಸಾಮಾನ್ಯರೇ ಮೊದಲಾಗಿ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ತಂದಿರುವುದು ಸುಳ್ಳಲ್ಲ.

ನಗದು ಚಲಾವಣೆ ಮರೆತು ಹೋಗುವಷ್ಟು ಯುಪಿಐ ವಹಿವಾಟುಗಳಿಗೆ ಮುಂದಾಗಿರುವ ಸಂದರ್ಭ ದಲ್ಲಿ ಕೇಂದ್ರ ಸರ್ಕಾರ   ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ಅನ್ವಯಿಸುವ ಕುರಿತು  ಸಣ್ಣ ವ್ಯಾಪಾರಿಗಳು ಭಾರೀ ಆತಂಕ ವ್ಯಕ್ತಪಡಿಸಿದ್ದಾರೆ. 

ಟಿ.ಕಾಫಿ ಕ್ಲಬ್ , ಬೀದಿ ಬದಿ ವ್ಯಾಪಾರಿಗಳು ಹೋಟೆ ಲ್, ಮೆಸ್, ಹಾಲಿನ ಅಂಗಡಿ ಮತ್ತು ದಿನಸಿ ವ್ಯಾಪಾರಿಗಳು ಕಡಿಮೆ ಲಾಭಾಂಶದಲ್ಲಿ ಕಾರ್ಯನಿರ್ವಹಿಸುವುದರಿಂದ ಎಂ.ಡಿ.ಆರ್. ಜಾರಿಯಿಂದ ಹೆಚ್ಚುವರಿ ಪಾವತಿ ವೆಚ್ಚವು ತಮ್ಮ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: UPI Charges: ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ ಎಂದ ಕೇಂದ್ರ ಸರ್ಕಾರ; ಜನ ಸಾಮಾನ್ಯರಿಗೆ ಶುಲ್ಕ ಇಲ್ಲ ಎಂದು ಸ್ಪಷ್ಟನೆ

ಯುಪಿಐ ಪಾವತಿ ಗ್ರಾಹಕರ ದೈನಂದಿನ ವಹಿವಾಟಿನ ಭಾಗವಾಗಿರುವುದರಿಂದ, ಡಿಜಿಟಲ್ ಪಾವತಿ ಗೂ ಶುಲ್ಕ ವಿಧಿಸಿದರೆ ಆಹಾರ, ಕಾರ್ಮಿಕರು ಮತ್ತು ವಿದ್ಯುತ್ ವೆಚ್ಚಗಳ ನಡುವೆ ಸಣ್ಣ ವ್ಯಾಪಾರಿ ಗಳಿಗೆ ಹೆಚ್ಚುವರಿ ಹೊರೆ ಉಂಟಾಗಬಹುದು ಎಂದು ಮೂರ್ತಿ ಮೆಸ್ ಮಾಲೀಕ ನರಸಿಂಹಮೂರ್ತಿ ಹೇಳಿದರು.

ದೊಡ್ಡ ಮೊತ್ತದ ವಹಿವಾಟುಗಳಿಗೆ MDR ಅನ್ವಯಿಸಿದರೆ ವೆಚ್ಚ ಹೆಚ್ಚಾಗಬಹುದು. ಈ ವೆಚ್ಚವನ್ನು ಗ್ರಾಹಕರಿಂದ ವಸೂಲು ಮಾಡಬಾರದು ಎಂಬ ನಿಯಮವಿದ್ದರೂ, ವ್ಯಾಪಾರಿಗಳ ಲಾಭಾಂಶದ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕ ಸಂತೋಷ್ ಅಭಿಪ್ರಾಯಪಟ್ಟರು. ಹಾಲು ಮತ್ತು ಇತರ ಅಗತ್ಯ ವಸ್ತುಗಳ ಖರೀದಿಯಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶುಲ್ಕವು ಸಣ್ಣ ಅಂಗಡಿಗಳ ಮೇಲೂ ಪರಿಣಾಮ ಬೀರಬಹುದು ಎಂದು ಹಾಲಿನ ಅಂಗಡಿ ಮಾಲೀಕ ಮೋಲ್ಡ್ ವೆಂಕಟೇಶ್ ಹೇಳಿದರು.

MDR ಕುರಿತು ಸ್ಪಷ್ಟೀಕರಣ

ಕೇಂದ್ರ ಸರ್ಕಾರದ ಸೆ. 15ರ ಸ್ಪಷ್ಟೀಕರಣದಂತೆ, ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಯುಪಿಐ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿವೆ. 2,000ರವರೆಗಿನ ವ್ಯಾಪಾರಿ ಪಾವತಿಗಳಿಗೆ MDR ಅನ್ವಯಿಸುವುದಿಲ್ಲ. ಸಣ್ಣ ವ್ಯಾಪಾರಿಗಳಿಗೆ ಇರುವ ಶೂನ್ಯ-MDR ವ್ಯವಸ್ಥೆಯೂ ಮುಂದು ವರಿಯಲಿದ್ದು, ಸುಮಾರು 96% ವ್ಯಾಪಾರಿ ಯುಪಿಐ ವಹಿವಾಟುಗಳು ಇದರಿಂದ ಪರಿಣಾಮ ಕ್ಕೊಳಗಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2,000ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ವಹಿವಾಟುಗಳಿಗೆ 0.4% MDR ಅನ್ವಯಿಸಲಾಗುತ್ತದೆ. 75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ 300ರ ಮಿತಿ ನಿಗದಿಪಡಿಸಲಾಗಿದೆ. ಕೆಲವು ಅಗತ್ಯ ಸೇವಾ ಕ್ಷೇತ್ರಗಳಿಗೆ ಪ್ರತ್ಯೇಕ ದರಗಳಿವೆ.

ಯುಪಿಐ ವ್ಯವಸ್ಥೆಯ ನಿರ್ವಹಣೆ, ಸೈಬರ್ ಭದ್ರತೆ, ವಂಚನೆ ತಡೆ ಮತ್ತು ತಾಂತ್ರಿಕ ಮೂಲ ಸೌಕರ್ಯ ಅಭಿವೃದ್ಧಿಗೆ ಹಣಕಾಸು ಒದಗಿಸುವ ಉದ್ದೇಶದಿಂದ MDR ಜಾರಿಗೊಳಿಸಲಾಗಿದೆ ಎಂಬುದು ಸರ್ಕಾರದ ವಾದವಾಗಿದೆ. ಇದು ಗ್ರಾಹಕರ ಮೇಲಿನ ತೆರಿಗೆಯಲ್ಲ; ಪಾವತಿ ವ್ಯವಸ್ಥೆ ಯಲ್ಲಿರುವ ಬ್ಯಾಂಕ್‌ಗಳು, ಪಾವತಿ ಸೇವಾ ಸಂಸ್ಥೆಗಳು ಮತ್ತು ಆ್ಯಪ್ ಪೂರೈಕೆದಾರರ ನಡುವೆ ಹಂಚಿಕೆಯಾಗುವ ಶುಲ್ಕವಾಗಿದೆ.

ಆದಾಗ್ಯೂ, ಕಡಿಮೆ ಲಾಭಾಂಶದಲ್ಲಿ ಕಾರ್ಯನಿರ್ವಹಿಸುವ ಸಣ್ಣ ವ್ಯಾಪಾರಿಗಳಿಗೆ ಪ್ರತಿ ವಹಿವಾಟಿ ನ ವೆಚ್ಚವೂ ಮಹತ್ವದ್ದಾಗಿದೆ. ಗ್ರಾಹಕರಿಗೆ ಉಚಿತ ಡಿಜಿಟಲ್ ಪಾವತಿ ಮುಂದುವರಿಸುವು ದರೊಂದಿಗೆ ಸಣ್ಣ ವ್ಯಾಪಾರಿಗಳ ಮೇಲಿನ ವೆಚ್ಚದ ಪರಿಣಾಮವನ್ನು ನಿಯಂತ್ರಿಸುವುದು ಮುಂದಿನ ಪ್ರಮುಖ ಸವಾಲಾಗಿದೆ. 

ಒಟ್ಟಾರೆ“ಗ್ರಾಹಕರಿಗೆ ನೇರ ಹೊರೆ ಇಲ್ಲ; ಪರೋಕ್ಷ ಪರಿಣಾಮದ ಆತಂಕ”ವನ್ನು ಸುಲಭಕ್ಕೆ ತೆಗೆದು ಹಾಕುವಂತಿಲ್ಲ ಎನ್ನುವುದು ವಾಣಿಜ್ಯ ಲೋಕದ ಪಂಡಿತರ ಅಭಿಪ್ರಾಯವಾಗಿದೆ.