ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chithamani News: 60 ಅಡಿ ಆಳದ ಪಾಳುಬಾವಿಗೆ ಬಿದ್ದಿದ್ದ ಎರಡು ಜಿಂಕೆಗಳ ಪ್ರಾಣರಕ್ಷಣೆ:ಅರಣ್ಯ ಮತ್ತು ಅಗ್ನಿಶಾಮಕ ದಳದ ಯಶಸ್ವಿ ಕಾರ್ಯಾಚರಣೆ!

ಜಗತನಹಳ್ಳಿ ಗ್ರಾಮದ ನಿವಾಸಿ ಬೊಮ್ಮರೆಡ್ಡಿ ಎಂಬುವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಸುಮಾರು 60 ರಿಂದ 70 ಅಡಿ ಆಳದ ಕಲ್ಲು ಕಟ್ಟಡದ ಪಾಳುಬಾವಿ ಇದೆ. ಬೆಳಗಿನ ಜಾವ ಜಮೀನಿನ ಬಳಿ ಬಂದ ಮಾಲೀಕರಿಗೆ ಬಾವಿಯೊಳಗಿನಿಂದ ಶಬ್ದ ಕೇಳಿಬಂದಿದೆ. ಪರಿಶೀಲಿಸಿದಾಗ ಎರಡು ಜಿಂಕೆಗಳು ಬಾವಿ ಯೊಳಗೆ ಬಿದ್ದು ಚಡಪಡಿಸುತ್ತಿರುವುದು ಕಂಡುಬಂದಿದೆ.

ಚಿಂತಾಮಣಿ: ತಾಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಗತನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿದ್ದ ಪಾಳುಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಎರಡು ಜಿಂಕೆಗಳನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಜಗತನಹಳ್ಳಿ ಗ್ರಾಮದ ನಿವಾಸಿ ಬೊಮ್ಮರೆಡ್ಡಿ ಎಂಬುವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಸುಮಾರು 60 ರಿಂದ 70 ಅಡಿ ಆಳದ ಕಲ್ಲು ಕಟ್ಟಡದ ಪಾಳುಬಾವಿ ಇದೆ.ಬೆಳಗಿನ ಜಾವ ಜಮೀನಿನ ಬಳಿ ಬಂದ ಮಾಲೀಕರಿಗೆ ಬಾವಿಯೊಳಗಿನಿಂದ ಶಬ್ದ ಕೇಳಿಬಂದಿದೆ. ಪರಿಶೀಲಿಸಿದಾಗ ಎರಡು ಜಿಂಕೆಗಳು ಬಾವಿಯೊಳಗೆ ಬಿದ್ದು ಚಡಪಡಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: Chikkaballapur News: ಎಲ್ಲರನ್ನೂ ಒಳಗೊಂಡ ಸಂಘಟನೆ ಕಟ್ಟಿದಾಗಲೇ ಸಾಮಾಜಿಕ ಬದಲಾವಣೆ ಸಾಧ್ಯ: ಕೋಟಿಗಾನಹಳ್ಳಿ ರಾಮಯ್ಯ

ಬೊಮ್ಮರೆಡ್ಡಿ ಅವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಕ್ಕಾಗಿ ಅಗ್ನಿಶಾಮಕ ದಳಕ್ಕೆ ಸುದ್ದಿ ತಲುಪಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯಾದ ಜಯ ನಾಯಕ್, ಲೋಕೇಶ್, ಶಶಿಧರ್, ರಾಜು ಮತ್ತು ವಿವೇಕ್ ರಾವ್ ಅವರು ಹಗ್ಗಗಳ ನೆರವಿನಿಂದ ಅತ್ಯಂತ ಜಾಗರೂಕತೆಯಿಂದ ಬಾವಿಯಲ್ಲಿದ್ದ ಜಿಂಕೆಗಳನ್ನು ಮೇಲಕ್ಕೆತ್ತಿದ್ದಾರೆ.

ರಕ್ಷಿಸಲಾದ ಜಿಂಕೆಗಳ ಆರೋಗ್ಯವನ್ನು ಪರಿಶೀಲಿಸಿದ ಅರಣ್ಯ ಸಿಬ್ಬಂದಿ, ಅವುಗಳಿಗೆ ಯಾವುದೇ ತೀವ್ರ ಅಪಾಯವಾಗಿಲ್ಲದಿರುವುದನ್ನು ಖಚಿತಪಡಿಸಿಕೊಂಡು, ಸುರಕ್ಷಿತವಾಗಿ ಕಾಡಿಗೆ ತಲುಪಿಸಿ ದ್ದಾರೆ.

ಸಾಹಸಮಯವಾಗಿ ಜಿಂಕೆಗಳನ್ನು ರಕ್ಷಿಸಿದ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಕಾರ್ಯಾಚರಣೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ