ಬಾಗೇಪಲ್ಲಿ: ಅಡುಗೆ ಕಾರ್ಮಿಕರ ಹಾಗೂ ಸಹಾಯಕ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸುವ ಅಗತ್ಯವಿದೆ ಎಂದು ಶ್ರೀ ಅನ್ನಪೂರ್ಣೇಶ್ವರಿ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕೋಲಾರ ಬಿ.ಎಸ್.ಸುರೇಶ್ ಬಾಬು ಹೇಳಿದರು.
ತಾಲ್ಲೂಕು ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರು, ಅಸಂಘಟಿ ಸಂಘದಿAದ ಪಟ್ಟಣದ ಹೊರವಲಯದ ದೇವರಗುಡಿಪಲ್ಲಿ ಗಿರಿಜಾ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ‘ಅಡುಗೆ ಕಾರ್ಮಿಕರ ಕರ್ನಾಟಕ ರಾಜ್ಯ ಆದೇಶ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕು ೭೬ ವರ್ಷಗಳು ಕಳೆದರೂ ಅಡುಗೆ ಕಾರ್ಮಿಕರ ಬದುಕು ಶೋಚ ನೀಯವಾಗಿದೆ. ಅಡುಗೆ ಕಾರ್ಮಿಕರ ಹಾಗೂ ಸಹಾಯಕ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಇದನ್ನೂ ಓದಿ: Bagepally Crime: ಅನ್ನಕ್ಕೆ ವಿಷವಿಕ್ಕಿದ ಒಂದು ಅಡಿ ಜಾಗದ ದ್ವೇಷ : 8 ಜನರ ಸ್ಥಿತಿ ಚಿಂತಾಜನಕ, ಸ್ಥಳಕ್ಕೆ ಎಸ್ಪಿ ಭೇಟಿ
ರಾಜ್ಯದಲ್ಲಿ ಹೋಟೆಲ್, ಕಲ್ಯಾಣ ಮಂಟಪ ಮತ್ತಿತರೆಡೆ ೧೦ ಲಕ್ಷಕ್ಕೂ ಹೆಚ್ಚು ಅಡುಗೆ ಕೆಲಸಗಾರರು, ಸಹಾಯಕರು ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದಿಂದ ಸೌಲಭ್ಯ ವಂಚಿತ ರಾಗಿದ್ದಾರೆ. ೧೫ ವರ್ಷದಿಂದ ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕರ ಕ್ಷೆ?ಮಾಭಿವೃದ್ಧಿ ಯೂನಿಯನ್ ನಡೆಸಿದ ಹೋರಾಟದ ಫಲವಾಗಿ ಈ ವರ್ಗದ ಕಾರ್ಮಿಕರಿಗೆ ಅಸಂಘಟಿತ ಕಾರ್ಮಿಕರ ಸ್ಥಾನಮಾನ ನೀಡಿ ಸರ್ಕಾರ ಜೂನ್ ೬ರಂದು ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಅಡುಗೆ ಕೆಲಸ ಮಾಡುವವರು ಒಗ್ಗಟ್ಟಾಗಿ ಸಂಘಟನೆಯ ಮೂಲಕ ತಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಪ್ರತಿಪಾದಿಸಿದರು.
ಅಡಿಗೆ ಕಾರ್ಮಿಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾದ, ಅಸಂಖ್ಯಾತ ಜನರಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಹಸಿವನ್ನು ನೀಗಿಸುವ ಅಡುಗೆ ಕೆಲಸದವರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸಾ ವೆಚ್ಚ, ಅಪಘಾತ ಪರಿಹಾರ ಮತ್ತು ಪಿಂಚಣಿ ಸೌಲಭ್ಯಗಳು ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದರು.
ಸಂಘಟನೆಯಿಂದ ಮಾತ್ರ ನಾವು ಹಕ್ಕುಗಳನ್ನು ಪಡೆಯಲು, ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಗಳು ಗಮನಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆ ಯನ್ನು ಬಲಗೊಳಿಸುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಸರ್ಕಾರ ಅಸಂಘಟಿತ ಕಾರ್ಮಿಕರ ಸ್ಥಾನಮಾನವನ್ನು ಅಡುಗೆ ಕೆಲಸಗಾರರಿಗೂ ಘೋಷಿಸಿದ್ದು, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಅಂಬೇ ಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ವತಿಯಿಂದ ಸರ್ಕಾರದ ಗುರುತಿನ ಚೀಟಿ ವಿತರಿಸಲಾಗುವುದು.
ಎಲ್ಲಾ ಅಡಿಗೆ ಕಾರ್ಮಿಕರು ಕಡ್ಡಾಯವಾಗಿ ಪಡೆಯಬೇಕು. ಸರ್ಕಾರದ ಗುರುತಿನ ಚೀಟಿ ಪಡೆಯುದರಿಂದ ರಾಜ್ಯ ಸರ್ಕಾರದಿಂದ ಅಪಘಾತ ಮರಣ ಹೊಂದಿದರೆ ೧ ಲಕ್ಷ, ಅಪಘಾತ ದಿಂದ ಶಾಶ್ವತ ದುರ್ಬಲತೆ ಹೊಂದಿದರೆ ೧ ಲಕ್ಷ, ಸಹಜವಾಗಿ ಮರಣ ಹೊಂದಿದರೆ ಅಂತ್ಯ ಕ್ರಿಯೆ ವೆಚ್ಚಕ್ಕಾಗಿ ೧೦,೦೦೦ ಸಾವಿರ ಸಹಾಯ ಧನ ನೀಡಲಾಗುತ್ತದೆ ಎಂದು ಹೇಳಿದರು.
ಮುಂದಿನ ವರ್ಷದಲ್ಲಿ ಕೋಲಾರದಲ್ಲಿ ಅಡಿಗೆ ಕಾರ್ಮಿಕರ ಹಾಗೂ ಸಹಾಯಕ ಕಾರ್ಮಿಕರ ರಾಜ್ಯ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಲು ಮನವಿ ಮಾಡಿದರು. ಅಂದು ಸರ್ಕಾರದ ವತಿಯಿಂದ ಅಡಿಗೆ ಕಾರ್ಮಿಕರ ಗುರ್ತಿನ ಚೀಟಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಬಾಗೇಪಲ್ಲಿ ತಾಲ್ಲೂಕು ಅಸಂಘಟಿತ ಅಡಿಗೆ ಕೆಲಸಗಾರರು ಹಾಗೂ ಸಹಾಯಕ ಕಾರ್ಮಿಕರ ಟ್ರಸ್ಟ್ ಸಂಸ್ಥಾಪಕರು ಹಾಗೂ ಅಧ್ಯಕ್ಷ ದೇವರೆಡ್ಡಿಪಲ್ಲಿ ಡಿ.ಎನ್.ಶಿವಾರೆಡ್ಡಿ,ಪ್ರಧಾನ ಕಾರ್ಯದರ್ಶಿ ಎಸ್.ಬಸವರಾಜ್, ಶಿವಪ್ಪ ಉಪಾಧ್ಯಕ್ಷ, ನರಸಿಂಹಪ್ಪ ಖಜಾಂಚಿ, ಬೂದಲಿಪಲ್ಲಿ ಚೌಡರೆಡ್ಡಿ, ನಾಗಪ್ಪ, ಮಂಜುನಾಥ್, ರವಿಚಂದ್ರರೆಡ್ಡಿ,ಶAಕರಪ್ಪ, ಆನಂದ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.