ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀಲಾದ್ರಿ ಎಂಟರ್ ಪ್ರೈಸಸ್ ಮತ್ತು ಸಂತೋಷ್ ಎಂಟರ್ ಪ್ರೈಸಸ್ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ

ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಮನವಿ ನೀಡಿದ ಬಳಿಕೆ ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಬಳಿಕೆ ಮಾಧ್ಯಮದೊಂದಿಗೆ ಮಾತನಾಡಿದ ನಾಗಣ್ಣ ಗೌಡ ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡು ಅವರಿಗೆ ಕನಿಷ್ಟ ವೇತನ ನೀಡದೆ, ಪಿ.ಎಫ್ ಮತ್ತು ಇಎಸ್‌ಐ ಕೂಡ ಪಾವತಿಸದೆ ಅನ್ಯಾಯವೆಸಗಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪುರಸಭೆಯಲ್ಲಿ ವಾಹನ ಚಾಲನೆ ಮಾಡುತ್ತಿರುವ ಪುರಸಭೆ ಹೊರಗುತ್ತಿಗೆ ನೌಕರರಿಗೆ ಸರಕಾರದ ನಿಯಮಾವಳಿಯಂತೆ ಕನಿಷ್ಠ ವೇತನವಾಗಲಿ ಪಿ.ಎಫ್ ಮತ್ತು ಇಎಸ್‌ಐ ಪಾವತಿ ಮಾಡದ ನೀಲಾದ್ರಿ ಎಂಟರ್ʼಪ್ರೈಸಸ್ ಮತ್ತು ಸಂತೋಷ್ ಎಂಟರ್ ಪ್ರೆöÊಸಸ್ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಆಗ್ರಹಪಡಿಸಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಸೋಮವಾರ ಕರ್ನಾಟಕ ರಾಜ್ಯ ನಗರ ಪಾಲಿಕೆ ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಮನವಿ ಸಲ್ಲಿಕೆ ಮತ್ತು ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಪ್ರಯಾಣ, ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನ: ಡಿ.ಹೆಚ್. ಮುನಿಕೃಷ್ಣ ಕರೆ

ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಮನವಿ ನೀಡಿದ ಬಳಿಕೆ ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಬಳಿಕೆ ಮಾಧ್ಯಮದೊಂದಿಗೆ ಮಾತನಾಡಿದ ನಾಗಣ್ಣ ಗೌಡ ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡು ಅವರಿಗೆ ಕನಿಷ್ಟ ವೇತನ ನೀಡದೆ,ಪಿ.ಎಫ್ ಮತ್ತು ಇಎಸ್‌ಐ ಕೂಡ ಪಾವತಿಸದೆ ಅನ್ಯಾಯವೆಸಗಿದೆ. ಹೀಗಾಗಿ ಗುತ್ತಿಗೆ ಪಡೆದಿದ್ದ ನೀಲಾದ್ರಿ ಎಂಟರ್ ಪ್ರೈಸಸ್ ಮತ್ತು ಸಂತೋಷ್ ಎಂಟರ್ ಪ್ರೈಸಸ್ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾರ್ಮಿಕರಿಗೆ ಬರಬೇಕಾದ ಬಾಕಿಹಣವನ್ನು ಕೊಡಿಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯಲ್ಲಿ ಪೌರಕಾರ್ಮಿಕರ ಪ್ರತಿನಿಧಿಯಾಗಿ ಸುರೇಶ್‌ಬಾಬು ಅವರನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹ ಮಾಡುತ್ತೇವೆ. ಒಟ್ಟಾರೆ ಜಿಲ್ಲೆಯಲ್ಲಿರುವ ಸ್ಥಳಿಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಾದ ಡ್ರೈರ‍್ಸ್, ಲೋರ‍್ಸ್, ವಾಲ್‌ಮನ್ಸ್ ಸೇರಿ ಎಲ್ಲರನ್ನೂ ಸರಕಾರ ನೇರ ಪಾವತಿಗೆ ತರಬೇಕು. ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

5h

ಬದಲಾಗಿ ಕಸಗುಡಿಸುವ ಪೌರಕಾರ್ಮಿಕರನ್ನು ನೇರಪಾವತಿ ವ್ಯಾಪ್ತಿಗೆ ತಂದಿದ್ದೀರಿ, ಅದೇ ರೀತಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವ ಡ್ರೈರ‍್ಸ್, ಲೋರ‍್ಸ್, ವಾಲ್‌ಮನ್ಸ್ಗಳನ್ನು ಹೊರಗುತ್ತಿಗೆಯಲ್ಲೇ ಮುಂದುವರೆಸಲಾಗಿದೆ.ಈ ತಾರತಮ್ಯದ ನೀತಿಗೆ ಇತಿಶ್ರೀ ಹಾಡಬೇಕು. ಒಂದೇ ಕಡೆ ಕೆಲಸ ಮಾಡುವ ಕಾರ್ಮಿಕರನ್ನು ಬೇರೆ ಬೇರೆ ಹೆಸರಿನಲ್ಲಿ ಇಟ್ಟು ಶೋಷಣೆ ಮಾಡುವುದು ಸರಕಾರಿ ಜೀತಗಾರಿಕೆ ಯಾಗಿದೆ. ನಮ್ಮ ಸಂಘಟನೆ ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದರ ಫಲವಾಗಿ ಸರಕಾರದ ಮುಂದೆ ಈ ಪ್ರಸ್ತಾವನೆ ಇಡಲಾಗಿದೆ. ಆದಷ್ಟು ಬೇಗ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರೆಂದೇ ಪರಿಗಣಿಸಿ ನೇರವಾಗಿ ವೇತನ ಪಾವತಿ ಮಾಡುವ ಮೂಲಕ ಅವರಿಗೆ ಸೇವಾಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ನಗರಪಾಲಿಕೆ ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರಾಗಿ ಕನಿಷ್ಟ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವವರು ಒಟ್ಟು 16 ಸಾವಿರ ಕಾರ್ಮಿಕರಿದ್ದು, ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಕೂಡಲೇ ಗುತ್ತಿಗೆ ಪದ್ಧತಿಯಿಂದ ಕೈಬಿಟ್ಟು ಪೌರಕಾರ್ಮಿಕರ ರೀತಿ ನೇರವೇತನ ಪಾವತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು
ಕನಿಷ್ಟವೇತನಕ್ಕೆ ಕೆಲಸ ಮಾಡುತ್ತಿರುವ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಸೇವಾಭದ್ರತೆ ನೀಡಬೇಕು. ಸರಕಾರ ನಿಗದಿ ಮಾಡಿರುವಂತೆ ಕಡ್ಡಾಯವಾಗಿ ಕನಿಷ್ಟವೇತನ ಪಾವತಿ ಮಾಡುವ ಕಾಯ್ದೆ ಜಾರಿ ಯಾಗಬೇಕು. ಪಿಎಫ್, ಇಎಸ್‌ಐ ಕಡ್ಡಾಯವಾಗಿ ಕೊಡಬೇಕು ಇದನ್ನು ಮಾಡದ ಸಂಸ್ಥೆಗಳ ವಿರುದ್ಧ ದಾಕ್ಷಿಣ್ಯ ತೋರದೆ ನಿರ್ಧಾಕ್ಷಿಣ್ಯ ಕ್ರಮವಹಿಸಬೇಕು.ಕರ್ತವ್ಯದ ವೇಳೆಯಲ್ಲಿ ಧರಿಸಲು ಕಡ್ಡಾಯ ವಾಗಿ ಸಮವಸ್ತ್ರ ನೀಡಬೇಕು. ಕರ್ತವ್ಯದ ವೇಳೆಯಲ್ಲಿ ಅನಾಹುತವಾದರೆ ಕೂಡಲೇ ನೆರವಿಗೆ ಧಾವಿಸಬೇಕು. ವಾಹನ ಚಾಲಕರು ಕಸದ ಜತೆಗೆ ಅನೈರ್ಮಲ್ಯದ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಅವರ ಜೀವಕ್ಕೆ ಅಪಾಯವಾದರೆ ಕುಟುಂಬಕ್ಕೆ ಯಾವುದೇ ಸಹಾಯ ಇಲ್ಲ. ಏನಾದರೂ ಅವಘಡ ಆರೋಗ್ಯದ ಸಮಸ್ಯೆ ಆದರೆ ಕನಿಷ್ಟ 5 ಲಕ್ಷ ಪರಿಹಾರ ನೀಡಬೇಕು. ಆರೋಗ್ಯವಿಮೆ ಒದಗಿಸಲಿ. ಕರ್ತವ್ಯದ ವೇಳೆಯಲ್ಲಿ ಒಂದು ಚಾಲಕರು, ವಾಟರ್‌ಮನ್ ಮೃತ ರಾದರೆ 25 ಲಕ್ಷ ಪರಿಹಾರ ನೀಡಬೇಕು.ನಿವೃತ್ತರಾದರೆ ಬಿಬಿಎಂಪಿ ಮಾದರಿಯಲ್ಲಿ 10 ಲಕ್ಷ ಇಡಿಗಂಟು ನೀಡಬೇಕು. ಒಂದು ವೇಳೆ ಈ ಬೇಡಿಕೆಗಳನ್ನು ಸರಕಾರ ಈಡೇರಿಸಲಿಲ್ಲ ಎಂದರೆ 2023ರಲ್ಲಿ ಮಾಡಿದ ಹೋರಾಟದಂತೆ, ಹೋರಾಟ ಮುಂದುವರೆಸಿ ಬಿಜೆಪಿಗೆ ಕಲಿಸಿದ ತಕ್ಕ ಪಾಠದಂತೆ ಕಾಂಗ್ರೆಸ್ ಪಕ್ಷಕ್ಕೂ ಕಲಿಸುತ್ತೇವೆ ಎಂದು ನೇರ ಎಚ್ಚರಿಕೆಯನ್ನು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ನೀಡಿದರು.

ಈ ವೇಳೆ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘಟನೆ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಜಿಲ್ಲಾಧ್ಯಕ್ಷ ಎಸ್.ಸುರೇಶ್‌ ಬಾಬು, ಉಪಾ ಧ್ಯಕ್ಷ ಎಸ್.ಡಿ,ಲಕ್ಷ್ಮೀಪತಿ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಜಿ.ಆನಂದ್, ಉಪಾಧ್ಯಕ್ಷ ಗಂಗಯ್ಯ, ಗೌರವಾಧ್ಯಕ್ಷ ಆಲಿಸಾಬ್, ಕಾರ್ಯದರ್ಶಿ ಪಿ.ಆರ್.ಶ್ರೀನಿವಾಸ್, ಖಜಾಂಚಿ ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶೀ ಶಿವಕುಮಾರ್ ಬಿ.ಎನ್. ಸದಸ್ಯರಾದ ಡ್ರೈವರ್ ರಾಜಪ್ಪ, ಡ್ರೈವರ್ ನಾಗರಾಜ್, ಡ್ರೈವರ್ ಶಿವಕುಮಾರ್ ಎಂ.ಎನ್, ನರಸಿಂಹಮೂರ್ತಿ, ವೆಂಕಟೇಶಪ್ಪ, ಮಂಜುನಾಥ್, ರವಿಕುಮಾರ್ ಮತ್ತಿತರರು ಇದ್ದರು.