ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಪ್ರಯಾಣ, ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನ: ಡಿ.ಹೆಚ್. ಮುನಿಕೃಷ್ಣ ಕರೆ

ವಾಹನ ಚಾಲನೆ ಎಂಬುದು ಕೇವಲ ಉದ್ಯೋಗವಲ್ಲ, ಅದು ಜನರ ಜೀವದ ಭದ್ರತೆಯ ಜವಾ ಬ್ದಾರಿಯೂ ಹೌದು. ಆದ್ದರಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತ ಚಾಲನೆಗೆ ಆದ್ಯತೆ ನೀಡಿ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ದೂರವಿಟ್ಟು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಘದ ಗೌರವ ಹೆಚ್ಚಿಸಬೇಕು

ನಿಯಮ ಪಾಲನೆ ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನ

ವಾಹನ ಚಾಲಕರು ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಪ್ರಯಾಣ, ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನವಾಗಲಿದೆ ಎಂದು ಗುಡಿಬಂಡೆ ವೃತ್ತನಿರೀಕ್ಷಕ ಮುನಿಕೃಷ್ಣಪ್ಪ ಕರೆ ನೀಡಿದರು. -

Profile
Ashok Nayak May 14, 2026 11:38 PM

ಚಿಕ್ಕಬಳ್ಳಾಪುರ : ವಾಹನ ಚಾಲಕರು ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಪ್ರಯಾಣ, ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನವಾಗಲಿದೆ ಎಂದು ಗುಡಿಬಂಡೆ ವೃತ್ತ ನಿರೀಕ್ಷಕ ಡಿ.ಹೆಚ್.ಮುನಿಕೃಷ್ಣ ಕರೆ ನೀಡಿದರು.

ತಾಲೂಕಿನ ಪೆರೇಸಂದ್ರದ  ಗುಡಿಬಂಡೆ ವೃತ್ತದಲ್ಲಿ ಗುರುವಾರ ನೂತನ ಜೈಅಂಬೇಡ್ಕರ್ ಸಂಘಟನೆ ನಾಮಫಲಕ ಅನಾವರಣ ಮಾಡಿ ಮಾತನಾಡಿದರು.

ವಾಹನ ಚಾಲನೆ ಎಂಬುದು ಕೇವಲ ಉದ್ಯೋಗವಲ್ಲ, ಅದು ಜನರ ಜೀವದ ಭದ್ರತೆಯ ಜವಾಬ್ದಾರಿಯೂ ಹೌದು. ಆದ್ದರಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತ ಚಾಲನೆಗೆ ಆದ್ಯತೆ ನೀಡಿ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ದೂರವಿಟ್ಟು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಘದ ಗೌರವ ಹೆಚ್ಚಿಸಬೇಕು ಎಂದು ಹೇಳಿದರು.

ಅಂಬೇಡ್ಕರ್ ಅವರ “ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ಸಂದೇಶ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ. ಜೈ ಅಂಬೇಡ್ಕರ್ ವಾಹನ ಚಾಲಕರ ಸಂಘದ ಸದಸ್ಯ ರಾಗಿರುವ ನೀವು ಸಮಾಜದ ಸೇವೆಯಲ್ಲಿ ದಿನನಿತ್ಯ ಶ್ರಮಿಸುತ್ತಿರುವ ನಿಜವಾದ ಕರ್ತವ್ಯ ನಿಷ್ಠರು ಎಂದರು.

ಇದನ್ನೂ ಓದಿ: Chikkaballapur News: ನಗರಸಭೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ : ಅಧಿಕಾರಿಗಳ ಕಾರ್ಯವೈಖರಿಗೆ ಕೆಂಡಾಮಂಡಲ

ಅತಿ ವೇಗ, ಮೊಬೈಲ್ ಬಳಕೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ನಿಮ್ಮ ಜೀವನಕ್ಕೂ, ಇತರರ ಸುರಕ್ಷತೆಗೂ ಅಪಾಯಕಾರಿಯಾಗಿದೆ. ಸೀಟ್ ಬೆಲ್ಟ್ ಬಳಕೆ ನಿಮ್ಮ ರಕ್ಷಾಕವಚವಾಗಿವೆ ಎಂಬುದನ್ನು ಮರೆಯಬೇಡಿ. ರಸ್ತೆಯಲ್ಲಿ ಸಹನೆ, ಸಂಯಮ ಮತ್ತು ಮಾನವೀಯತೆ ಇರಲಿ. ಪಾದಚಾರಿಗಳು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿ ಕರ ಸುರಕ್ಷತೆಗೆ ಆದ್ಯತೆ ನೀಡಿ. ವಾಹನದ ದಾಖಲೆಗಳು ಹಾಗೂ ಚಾಲನಾ ಪರವಾನಗಿ ಯನ್ನು ಸದಾ ನವೀಕರಿಸಿಕೊಂಡಿರಿ.ಇಷ್ಟಾದಲ್ಲಿ ಯಾರೂ ಕೂಡ ನಿಮಗೆ ತೊಂದರೆ ಕೊಡುವುದಿಲ್ಲ ಎಂದು ಭರವಸೆ ನೀಡಿದರು.

ಜೈ ಅಂಬೇಡ್ಕರ್ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ್ ಮಾತನಾಡಿ, ಅಸಂಘ ಟಿತ ಕಾರ್ಮಿಕರಾದ ಚಾಲಕರ ಹಿತರಕ್ಷಣೆಯ ಉದ್ದೇಶವಿಟ್ಟುಕೊಂಡು ಜನ್ಮತಾಳಿರುವ ಸಂಘ ನಮ್ಮದಾಗಿದ್ದು, ಸಂವಿಧಾನ ಶಿಲ್ಪಿ, ಮಾನವ ಹಕ್ಕುಗಳ ಹೋರಾಟಗಾರ, ಮಹಾ ಮಾನವತಾವಾದಿ ಅಂಬೇಡ್ಕರ್ ಹೆಸರಿನಲ್ಲಿ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಎಂದ ಅವರು ಸಂಘದ ಸದಸ್ಯರು ಪರಸ್ಪರ ಸಹಕಾರ, ಐಕ್ಯತೆ ಮತ್ತು ಶಿಸ್ತು ಕಾಪಾಡಿ ಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಸಂಕಷ್ಟದಲ್ಲಿರುವ ಚಾಲಕರಿಗೆ ನೆರವಾಗು ವುದು, ಹೊಸ ತಲೆಮಾರಿಗೆ ಸಂವಿಧಾನದ ಮೌಲ್ಯಗಳು ಹಾಗೂ ಮಾನವೀಯತೆಯ ಸಂದೇಶ ಸಾರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

cbpm2am

ಎಲ್ಲಾ ಸದಸ್ಯರಿಗೂ ಉತ್ತಮ ಆರೋಗ್ಯ, ಸುರಕ್ಷಿತ ಪ್ರಯಾಣ ಮತ್ತು ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ದೊರಕಲಿ ಎಂದು ಹಾರೈಸುತ್ತೇನೆ. ನಿಮ್ಮ ಕೈಯಲ್ಲಿರುವ ಸ್ಟೀರಿಂಗ್ ಕೇವಲ ವಾಹನವನ್ನೇ ಅಲ್ಲ, ಅನೇಕ ಕುಟುಂಬಗಳ ಜೀವಿತವನ್ನೂ ಸಾಗಿಸುತ್ತದೆ. ಆದ್ದರಿಂದ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಚಾಲಕರ ಮೊದಲ ಕರ್ತವ್ಯ ವಾಗಲಿ ಎಂದರು.

ಇತ್ತೀಚಿನ ದಿನಗಳಲ್ಲಿ ಚಾಲಕರ ಮೇಲೆ ದಾಳಿ ಮಾಡುವ ಪೊಲೀಸರು, ಆರ್‌ಟಿಒ ಅಧಿಕಾರಿ ಗಳು, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಸಂವಿಧಾನ ಬದ್ದವಾದ ಪರಿಭಾಷೆಯಲ್ಲಿ ಮಾತನಾಡುವ ಬದಲಿಗೆ ಅಸಂಸದೀಯ ಪದಗಳನ್ನು ಬಳಸುವುದು, ಅವಾಚ್ಯವಾಗಿ ನಿಂದಿಸುವುದು,ಕಾನೂನಿಗೆ ವಿರುದ್ಧವಾಗಿ ಹಣಕೀಳುವುದು ಮಾಡುವುದು ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಈ ಸಂಘಟನೆ ಸ್ಥಾಪಿಸಿದ್ದು, ನಮ್ಮ ಸಂಘದ ಸದಸ್ಯರಾದವರಿಗೆ ಕಾನೂನಿನ ನೆರವು ನೀಡಲಾಗುವುದು ಎಂದರು.

ಸAಘದ ಸಾಮಾಜಿಕ ಜಾಲತಾಣ ವಿಭಾಗದ ಆರ್ಮಿ ಶ್ರೀನಿವಾಸ್ ಮಾತನಾಡಿ, ಸಂಘದ ಪ್ರತಿಯೊಬ್ಬ ಸದಸ್ಯರೂ ಶಿಸ್ತು, ಸೌಹಾರ್ದತೆ ಮತ್ತು ಸೇವಾಭಾವದಿಂದ ನಡೆದುಕೊಳ್ಳ ಬೇಕು. ಸಮಾಜದಲ್ಲಿ ಜಾತಿ ಭೇದ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸಿ, ಯುವ ಪೀಳಿಗೆಗೆ ಶಿಕ್ಷಣದ ಮಹತ್ವವನ್ನು ತಿಳಿಸಬೇಕು.

ನಮ್ಮ ನಡೆ-ನುಡಿಗಳು ಸಂಘದ ಗೌರವವನ್ನು ಹೆಚ್ಚಿಸುವಂತಿರಲಿ. ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಬಾಬಾ ಸಾಹೇಬರ ಕನಸಿನ ಸಮಾನತೆಯ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ ಎಂಬುದು ನನ್ನ ಕಿವಿಮಾತು ಹೇಳಿದರು.

ದಸಂಸ ತಾಲೂಕು ಸಂಚಾಲಕ ಎನ್. ಪರಮೇಶ್ ಮಾತನಾಡಿ ಕಾರ್ಮಿಕರು ಮತ್ತು ಸಂಘಟನೆಗಳ ಬಗ್ಗೆ ಅಪಾರ ಪ್ರೀತಿ ಕಾಳಜಿ ಹೊಂದಿದ್ದ ಬಾಬಾ ಸಾಹೇಬರ ಹೆಸರಿನಲ್ಲಿ ಜೈ ಅಂಬೇಡ್ಕರ್" ಸಂಘ ಸ್ಥಾಪಿಸಿದ್ದಿರಿ. ಈ ಸಂಘದ ಎಲ್ಲಾ ಸದಸ್ಯರು ಬಾಬಾ ಸಾಹೇಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅವರ ತತ್ವಗಳನ್ನು ಸದಾ ನೆನಪಿನಲ್ಲಿ ಇಟ್ಟು ಸಮಾಜದ ಏಳಿಗೆಗಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಈ ವೇಳೆ ಪರೇಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಗುಣವತಿ ಚಾಲಕರಿಗೆ ಕಿವಿಮಾತು ಹೇಳಿದರು.

ಇದೇ ವೇಳೆ, ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಿ.ಎಸ್.ಐ ಮುನಿಕೃಷ್ಣ .ಡಿ.ಹೆಚ್. ವೃತ್ತ ನಿರೀಕ್ಷಕರು (ಗುಡಿಬಂಡೆ ವೃತ್ತ ) ಗುಣವತಿ, ದಸಂಸ ತಾಲ್ಲೂಕು ಸಂಚಾಲಕ ಎನ್ ಪರಮೇಶ್, ಜೈ ಅಂಬೇಡ್ಕರ್ ಚಾಲಕರ ಸಂಘದ ಜಿಲ್ಲಾಧ್ಯಕ್ಷರು ಕಲ್ಯಾಣ್ ಕುಮಾರ್, ಗೌರವಧ್ಯಕ್ಷರು ಗೌಸ್ ಫಿರ್,ಉಪಾಧ್ಯಕ್ಷರು ವಿಜಯ್, ಸಾಮಾಜಿಕ ಜಾಲತಾಣ ಸಂಯೋಜಕರು ಆರ್ಮಿ ಶ್ರೀನಿವಾಸ್, ಆಂಧ್ರದ ಡ್ರೆöÊವರ್ ಯೂನಿನ್ ಅಧ್ಯಕ್ಷ ಬಾಬು ಫಕೃದ್ದಿನ್, ಸಾದಿಕ್ ತೆಲಂಗಾಣ ಯೂನಿಯನ್ ಅಧ್ಯಕ್ಷರು ಹಾಗೂ ಕಮಿಟಿ ಸದಸ್ಯರು ಹಾಜರಿದ್ದರು.