ಶಿಡ್ಲಘಟ್ಟ: ಶಾಸಕ ಬಿ.ಎನ್. ರವಿಕುಮಾರ್(MLA B.N. Ravikumar) ಅವರು ದಿಬ್ಬೂರಹಳ್ಳಿ ಯಿಂದ ತಿಮ್ಮಸಂದ್ರಕ್ಕೆ ಸಂಪರ್ಕಿಸುವ ಸುಮಾರು 8 ಕಿಲೋಮೀಟರ್ ಉದ್ದದ ಹಾಗೂ ಅಂದಾಜು 10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್ ಗ್ರಾಮೀಣ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜನರು ವರ್ಷಗಳಿನಿಂದ ಉತ್ತಮ ರಸ್ತೆಗೆ ಕಾಯುತ್ತಿದ್ದಾರೆ. ಆದ್ದರಿಂದ ಈ ರಸ್ತೆ ಕಾಮಗಾರಿ ಯಾವುದೇ ರೀತಿಯ ತಡವಿಲ್ಲದೆ, ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರಿಗೆ ದೀರ್ಘಕಾಲ ಉಪಯೋಗವಾಗುವಂತೆ ಗುಣಮಟ್ಟದ ಕಾಮಗಾರಿ ನಡೆಸಬೇಕು. ಗುಣಮಟ್ಟ ದಲ್ಲಿ ಯಾವುದೇ ರೀತಿಯ ರಾಜಿ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ದಿಬ್ಬೂರಹಳ್ಳಿ–ತಿಮ್ಮಸಂದ್ರ ರಸ್ತೆ ನಿರ್ಮಾಣದಿಂದ ಈ ಭಾಗದ ಗ್ರಾಮಗಳಿಗೆ ಉತ್ತಮ ಸಂಚಾರ ಸೌಲಭ್ಯ ಸಿಗಲಿದ್ದು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದು ಶಾಸಕ ರವಿಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶಿವಾರೆಡ್ಡಿ, ಬೈರೆಡ್ಡಿ, ಕುಂದಲಗುರ್ಕಿ ಚಂದ್ರಣ್ಣ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಹಾಜರಿದ್ದರು