ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disabled Santosh Protest: ಹಗಲು ರಾತ್ರಿ ಧರಣಿ ಕುಳಿತ ವಿಕಲಾಂಗ ಸಂತೋಷ್

ಕುಂದಲಗುರ್ಕಿ ಗ್ರಾಮ ಪಂಚಾಯಿತಿಯು ಒಂದೇ ನಿವೇಶನವನ್ನು ಇಬ್ಬರಿಗೆ ನೀಡುವ ಮೂಲಕ ಇಬ್ಬರ ಮಧ್ಯೆ ಜಗಳ ತಂದಿಟ್ಟಿದೆ. ಅಲ್ಲದೆ, ಈ ನಿವೇಶನವು ಇದೀಗ ಇಬ್ಬರಿಗೂ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಿ ಅಂಗವಿಕಲ ಸಂತೋಷ್ ಕುಮಾರ್ ಅವರು ಗ್ರಾಮ ಪಂಚಾ ಯಿತಿ ಕಚೇರಿ ಆವರಣದಲ್ಲಿ ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದ್ದಾರೆ.

ಹಗಲು ರಾತ್ರಿ ಧರಣಿ ಕುಳಿತ ವಿಕಲಾಂಗ ಸಂತೋಷ್

-

Ashok Nayak
Ashok Nayak Dec 13, 2025 12:06 AM

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಹಾತ್ಮಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟುಕೊಂಡು ಒಬ್ಬಂಟಿಯಾಗಿ ಧರಣಿ ಆರಂಭಿಸಿದ್ದಾರೆ ಅಂಗವಿಕಲ ಸಂತೋಷ್.

ಕುಂದಲಗುರ್ಕಿ ಗ್ರಾಮ ಪಂಚಾಯಿತಿಯು ಒಂದೇ ನಿವೇಶನವನ್ನು ಇಬ್ಬರಿಗೆ ನೀಡುವ ಮೂಲಕ ಇಬ್ಬರ ಮಧ್ಯೆ ಜಗಳ ತಂದಿಟ್ಟಿದೆ. ಅಲ್ಲದೆ, ಈ ನಿವೇಶನವು ಇದೀಗ ಇಬ್ಬರಿಗೂ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಿ ಅಂಗವಿಕಲ ಸಂತೋಷ್ ಕುಮಾರ್ ಅವರು ಗ್ರಾಮ ಪಂಚಾ ಯಿತಿ ಕಚೇರಿ ಆವರಣದಲ್ಲಿ ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದ್ದಾರೆ. 

2013ರಲ್ಲಿ ಗ್ರಾಮ ಪಂಚಾಯಿತಿಯಿಂದ ಸಂತೋಷ್ ಕುಮಾರ್ ಅವರ ತಾಯಿ ಆಂಜಿನಮ್ಮ ಹೆಸರಿಗೆ ನಿವೇಶನ ಮಂಜೂರಾಗಿತ್ತು. ಇಂದಿರಾ ಆವಾಸ್ ವಸತಿ ಯೋಜನೆಯಡಿ ಮನೆ ಕೂಡ ಮಂಜೂರಾ ಗಿತ್ತು. ಆಂಜಿನಮ್ಮ ಅವರು ನಿವೇಶನದಲ್ಲಿ ಮನೆ ನಿರ್ಮಿಸಲು ಅಡಿಪಾಯ ಹಾಕಿ ಮೊದಲ ಬಿಲ್ ₹29,800 ಬಿಲ್ ಹಣ ಕೂಡ ಪಡೆದುಕೊಂಡಿದ್ದಾರೆ. ಆದರೆ, ಅದೇ ನಿವೇಶನ ತಮಗೆ ಮಂಜೂರು ಆಗಿದೆ ಎಂದು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಪಂಚಾಯಿತಿಗೆ ದಾಖಲೆ ಸಲ್ಲಿಸಿದ್ದಾರೆ. ಇದರಿಂದ ಇಬ್ಬರ ನಡುವೆ ವಾದ–ವಿವಾದ ನಡೆದಿದೆ ಎಂದರು. 

ಇದನ್ನೂ ಓದಿ: Shidlaghatta News: ರಥೋತ್ಸವದಂತಹ ಧಾರ್ಮಿಕ ಆಚರಣೆಗಳು ಗ್ರಾಮೀಣರಲ್ಲಿ ಒಗ್ಗಟ್ಟಿಗೆ ಕಾರಣವಾಗಲಿದೆ : ಕಾಂಗ್ರೆಸ್ ಮುಖಂಡ ರಾಜೀವ್ ಗೌಡ

ಅಂತಿಮವಾಗಿ ಸಂತೋಷ್ ಕುಮಾರ್ ನಿರ್ಮಿಸಿದ್ದ ಅಡಿಪಾಯ ಕಿತ್ತು ಹಾಕಲಾಗಿದೆ. ಮನೆ ಕಟ್ಟಲು ಬಿಡುತ್ತಿಲ್ಲ. ಅಂದಿನಿಂದ ಇಂದಿನವರೆಗೆ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದೆ. ಸಮಸ್ಯೆ ಬಗೆಹರಿಸಬೇಕಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸುಮ್ಮನಿದ್ದಾರೆ ಎಂದು ದೂರಿದರು.

ನನ್ನ ಕುಟುಂಬಕ್ಕೆ ನಿವೇಶನವನ್ನು ಪಕ್ಕಾ ಮಾಡಿಸಬೇಕು. ಇಲ್ಲವೇ ಬೇರೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಎದುರು ಧರಣಿ ಆರಂಭಿಸಿದ್ದಾಗಿ ಅಂಗವಿಕಲ ಸಂತೋಷ್ ಕುಮಾರ್ ತಿಳಿಸಿದರು. 

ಕುಂದಲಗುರ್ಕಿ ಗ್ರಾಮದಲ್ಲಿ ಹೊರಗಿನಿಂದ ಬಂದವರಿಗೆ ಮಣೆ ಹಾಕುತ್ತಿದ್ದಾರೆ. ಹಲವಾರು ವರ್ಷ ಗಳಿಂದ ಇಲ್ಲೇ ವಾಸಿಸುವವರಿಗೆ ವಸತಿ ಇಲ್ಲ, ಕನಿಷ್ಠ ಮೂಲ ಸೌಲಭ್ಯ ಇಲ್ಲ, ಇರುವ ನಿವೇಶನ ಸಹ ಕಿತ್ತುಕೊಂಡಿದ್ದಾರೆ.ಒಬ್ಬ ಅಂಗವಿಕಲ ಎರಡು ದಿನಗಳಿಂದಲೂ ಅನಿರ್ದಿಷ್ಟ ಸತ್ಯಾಗ್ರಹ ಸೌಜನ್ಯ ಕಾದರೂ ಆತನ ಸಮಸ್ಯೆಯನ್ನು ಕೇಳದ ಅಧಿಕಾರಿಗಳು ಹಾಗೂ ಜನಪ್ರತಿಗಳು ಬೇರೆ ಕಡೆಯಿಂದ ಬಂದಿರುವ ಒಬ್ಬರಿಗೆ 36 ಗುಂಟೆ ಇ- ಖಾತೆ ಮಾಡಿರುವ ಏಕೈಕ ಪಂಚಾಯತಿ ಎಂದರೆ ಅದು ಕೇವಲ ಕುಂದಲಗುರ್ಕಿ ಪಂಚಾಯತಿ ಆ ಅಧಿಕಾರಿಗಳಿಗೆ ಪ್ರಶಸ್ತಿ ಕೊಡಬೇಕು ಎಂದು ಮಾನವ ಹಕ್ಕುಗಳ ಸಂಸ್ಥಾಪಕ ಸಿ.ಎಂ.ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿನ ವಾಸಿಯ ಅನೇಕರಿಗೆ ನಿವೇಶನ ಇಲ್ಲ ಬೇರೆಡೆಯಿಂದ ಬಂದು ವಾಸಸ್ಥರಿಗೆ ಮಾತ್ರ ಎರಡು ಮೂರು ನಿವೇಶನಗಳನ್ನು ನೀಡುತಿದ್ದಾರೆ. ಸ್ಥಳೀಯರಿಗೆ ನಿವೇಶನಗಳು ಇಲ್ಲ ಕುರಿ ಶೆಡ್ ಇಲ್ಲದೆ ಒಂದು ವರ್ಷದಲ್ಲಿ ಮೂರು ಬಾರಿಗೆ ಅರ್ಜಿ ಹಾಕಿದರು ಕ್ಯಾರೆ ಅನ್ನುತ್ತಿಲ್ಲ, ಮನೆ ಇಲ್ಲದವ ರಿಗೆ ಮನೆ ಮಂಜೂರು ಇಲ್ಲ, ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲ, ಪಂಚಾಯತಿಯಲ್ಲಿ ಗ್ರಾಮಸ್ಥರ ಕಷ್ಟಕ್ಕೆ ಸ್ಪಂದಿಸುವರೇ ಇಲ್ಲವಾಗಿದೆ ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತ ಪಡಿಸಿದರು.