ಗೌರಿಬಿದನೂರು : ವಿಶ್ವ ಕರ್ಮ ಸಮುದಾಯದವರು ಮೊದಲಿನಿಂದಲೂ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಪೋಷಿಕೊಂಡು ಬರುತ್ತಿದ್ದಾರೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.
ನಗರದ ಗೃಹ ಕಚೇರಿಯಲ್ಲಿ ತಾಲ್ಲೂಕು ವಿಶ್ವಕರ್ಮ ಸಂಘದ ನಿವೇಶನಕ್ಕೆ ಇ-ಖಾತಾ ಪ್ರತಿ ವಿತರಿಸಿ ಮಾತನಾಡಿದರು.
ಇದನ್ನೂ ಓದಿ: MLA K H Puttaswamy Gowda: ಮರಿಗೆಮ್ಮದೇವಿಯ ಕೃಪೆ, ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ : ಕೆ.ಹೆಚ್.ಪುಟ್ಟಸ್ವಾಮಿಗೌಡ
ಚಿನ್ನ-ಬೆಳ್ಳಿ ವ್ಯಾಪಾರ ವಹಿವಾಟಿಗೆ ಮಾತ್ರ ವಿಶ್ವಕರ್ಮ ಸಮುದಾಯ ಸೀಮಿತರಾಗಿಲ್ಲ. ಕಲ್ಲು ವಿಗ್ರಹಗಳ ಕೆತ್ತನೆಯಿಂದ ಚಿನ್ನಕ್ಕೆ ರೂಪ ಕೊಡುವ ಕಲೆಯವರೆಗೂ ತಮ್ಮದೇ ಆದ ಛಾಪು ಮೂಡಿಸಿ ಸಮಾಜಕ್ಕೆ ತಮ್ಮ ಕಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ವಿಶ್ವಕರ್ಮ ಜನಾಂಗದ ಬಗ್ಗೆ ನಾನು ವಿಶೇಷ ಗೌರವ ಹೊಂದಿದ್ದು, ಸಮುದಾಯದವರ ಬೇಡಿಕೆಗಳಿಗೆ ಸ್ಪಂದಿಸುತ್ತೇನೆ ಎಂದ ಅವರು ಸಮುದಾಯದ ಕುಟುಂಬಗಳು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜದಲ್ಲಿ ಇನ್ನಷ್ಟು ಗೌರವ ಸಿಗಲು ಸಾಧ್ಯ ಎಂದರು.
ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್, ಸದಸ್ಯರಾದ ಡಿ.ಜೆ.ಚಂದ್ರಮೋಹನ್, ಎಂ. ಗಿರೀಶ್, ಮಂಜುಳಾರಾಜ್, ಪದ್ಮಾವತಮ್ಮ ಮುಖಂಡರಾದ ಸೊಸೈಟಿ ರಾಮಾಂಜನೇಯ, ವಿಶ್ವಕರ್ಮ ಸಂಘದ ಪದಾಧಿಕಾರಿಗಳಾದ ಕೆ.ವಿ.ರಮಣಾಚಾರಿ,ನಾರಾಯಣಚಾರಿ, ಶಿವಕುಮಾರಾಚಾರಿ, ರಘು, ಪ್ರವೀಣ್ ಮತ್ತಿತರರು ಹಾಜರಿದ್ದರು.