ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA K H Puttaswamy Gowda: ಮರಿಗೆಮ್ಮದೇವಿಯ ಕೃಪೆ, ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ : ಕೆ.ಹೆಚ್.ಪುಟ್ಟಸ್ವಾಮಿಗೌಡ

ವಿನಾಯಕ ಮಿತ್ರ ಮಂಡಳಿಯವರ ಮನವಿ ಮೇರೆಗೆ ಸುಮಾರು ಐದು ವರ್ಷಗಳ ಹಿಂದೆ ದೇವಸ್ಥಾನದ ಆವರಣದಲ್ಲಿ ಸಭಾಮಂಟಪವನ್ನು ಕಟ್ಟಿಸಿ ಕೊಡುವ ಮೂಲಕ ಈ ಊರಿನ ಗ್ರಾಮ ದೇವತೆಯ ಆಶೀರ್ವಾದ ಪಡೆದು ರಾಜಕೀಯ ರಂಗಕ್ಕೆ ಪ್ರವೇಶಿಸಿದೆ.ದೈವಬಲ ನಿಮ್ಮೆಲ್ಲರ ಆರ್ಶೀವಾದದಿಂದ ಶಾಸಕ ನಾಗಿದ್ದೇನೆ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು

ಮರಿಗೆಮ್ಮದೇವಿಯ ಕೃಪೆ,ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ

-

Ashok Nayak Ashok Nayak Sep 3, 2025 11:45 PM

ಗೌರಿಬಿದನೂರು: ಮರಿಗಮ್ಮ ದೇವಸ್ಥಾನದ ಶ್ರೀವಿನಾಯಕ ಮಿತ್ರ ಮಂಡಳಿಯವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸುಮಾರು ೩೬ ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವವನ್ನು ನೇರೆವೇರಿಸಿಕೊಂಡು ಬಂದಿರುವುದು ಸಂತೋಷದ ವಿಚಾರವಾಗಿದೆ.ಮರಿಗೆಮ್ಮದೇವಿಯ ಕೃಪೆ, ಮತದಾರರ ಆಶೀರ್ವಾದದಿಂದ ನಾನು ಶಾಸಕನಾಗಿ ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದು ಕೆ.ಹೆಚ್.ಪುಟ್ಟಸ್ವಾಮಿಗೌಡ ತಿಳಿಸಿದರು.

ನಗರದ ಮರಿಗಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿಯವರಿAದ ಆಯೋಜಿಸಲಾಗಿರುವ ಗಣೇಶೋತ್ಸವದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು.

ವಿನಾಯಕ ಮಿತ್ರ ಮಂಡಳಿಯವರ ಮನವಿ ಮೇರೆಗೆ ಸುಮಾರು ಐದು ವರ್ಷಗಳ ಹಿಂದೆ ದೇವಸ್ಥಾನದ ಆವರಣದಲ್ಲಿ ಸಭಾಮಂಟಪವನ್ನು ಕಟ್ಟಿಸಿ ಕೊಡುವ ಮೂಲಕ ಈ ಊರಿನ ಗ್ರಾಮ ದೇವತೆಯ ಆಶೀರ್ವಾದ ಪಡೆದು ರಾಜಕೀಯ ರಂಗಕ್ಕೆ ಪ್ರವೇಶಿಸಿದೆ.ದೈವಬಲ ನಿಮ್ಮೆಲ್ಲರ ಆರ್ಶೀವಾದದಿಂದ ಶಾಸಕನಾಗಿದ್ದೇನೆ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು.

ಇದನ್ನೂ ಓದಿ: MLA K H Puttaswamy Gowda: ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಿದ್ಧ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಶಾಸಕನಾಗಿ ಆಯ್ಕೆಯಾದ ನಂತರ ನಗರದ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ನಗರದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ,ವಿಶೇಷವಾಗಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸುಮಾರು ೬೨ ಕೋಟಿ ರೂಪಾಯಿಗಳ ಯೋಜನೆಯು ಅನುಷ್ಟಾನವಾಗಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಲು ಈಗಾಗಲೆ ಸರ್ಕಾರದ ಮಟ್ಟದಲ್ಲಿ ಪ್ರಗತಿ ಯಲ್ಲಿದೆ ಎಂದರು.

ಈ ಸಂಧರ್ಭದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಲಿ ವತಿಯಿಂದ ಶಾಸಕ ಕೆಎಚ್ ಪುಟ್ಟಸ್ವಾಮಿ ಗೌಡರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವೆಂಕಟರಮರೆಡ್ಡಿ ಮಾಜಿ ನಗರಸಭಾ ಸದಸ್ಯರಾದ ಕೆ ಎಸ್ ಅನಂತರಾಜು ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ  ಮಹೇಂದ್ರ ಎಸ್. ವೆಂಕ ಟೇಶ್, ರಾಮ್ ಬಾಬು ,ರಿಲಯನ್ಸ್ ವೆಂಕಟೇಶ್, ರಮೇಶ್ ನಾರಾಯಣಸ್ವಾಮಿ, ರಘು, ಚಂದ್ರ ಮೋಹನ್, ಪಿ ಎನ್.ವೆಂಕಟೇಶ್ ಹಾಗೂ ಇನ್ನೂ ಅನೇಕ ಮಂದಿ ಉಪಸ್ಥಿತರಿದ್ದರು.