ಬಾಗೇಪಲ್ಲಿ: ಸರಕಾರ ನೀಡುವ ಸೌಲಭ್ಯಗಳ ಜತೆಗೆ ದಾನಿಗಳು ನೀಡುವ ಎಲ್ಲಾ ಸೌಲಭ್ಯ ಗಳನ್ನು ಪಡೆದು ಶೈಕ್ಷಣಿಕ ಪ್ರಗತಿ ಹೊಂದಬೇಕು, ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಿ ಸತ್ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಬಿಇಓ ವೆಂಕಟೇಶಪ್ಪ ಕರೆ ನೀಡಿದರು.
ಪಟ್ಟಣದ ಪಿ.ಎಂ.ಶ್ರೀ ಶಾಲೆಗೆ ಅಮೆರಿಕದ ಸಾಯಿ ಲೀಲಾ ಎಜುಕೇಷನ್ ಫೌಂಡೇಷನ್ ಮುಖ್ಯಸ್ಥ ಹಾಗೂ ಅಮೇರಿಕಾದ ನಿವೃತ್ತ ಅಂಚೆ ಅಧಿಕಾರಿಗಳಾದ ಡೇವಿಡ್ ಎಂ ಉಲ್ಪ್ ಎಂಬವರು ಶಾಲೆಯ ಎಲ್ಲಾ ಮಕ್ಕಳಿಗೆ ಬಿಸ್ಕತ್ತು, ಪರೀಕ್ಷೆ ಬೈಂಡ್, ಕಲರ್ ಸ್ಕಚ್ , ಕ್ರಯಾನ್ಸ್, ಪೆನ್ , ಪೆನ್ಸಿಲ್ ಮತ್ತಿತರೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ನೀವು ಉತ್ತಮವಾಗಿ ಕಲಿಯುವ ಮೂಲಕ ಸಮಾಜ, ಹೆತ್ತವರು ಹಾಗೂ ಗುರು ಹಿರಿಯರ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Bagepally News: ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠ ಕನಕದಾಸರು
ಸಾಯಿ ಲೀಲಾ ಎಜುಕೇಷನ್ ಫೌಂಡೇಷನ್ ಮುಖ್ಯಸ್ಥ ಹಾಗೂ ಅಮೇರಿಕಾದ ನಿವೃತ್ತ ಅಂಚೆ ಅಧಿಕಾರಿಗಳಾದ ಡೇವಿಡ್ ಎಂ ಉಲ್ಪ್ ಎಂಬ ಎನ್.ಜಿ.ಓ ಸಂಸ್ಥೆಯ ಮೂಲಕ ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿ ಆಧ್ಯಾತ್ಮಿಕ ದೇವಮಾನವ ಪುಟ್ಟಪರ್ತಿ ಸತ್ಯ ಸಾಯಿ ಬಾಬರವರು 100ನೇ ಜಯಂತಿ ಹಾಗೂ ಇಂದು ವೀರ ವನಿತೆ ಓಬವ್ವ,ಹಾಗೂ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಂ ಅವರ ಜಯಂತಿ ಪ್ರಯುಕ್ತ, ಶೈಕ್ಷಣಿಕ ಪ್ರಗತಿಗೆ ಬೇಕಾದ ಸಮವಸ್ತ್ರ, ಕಲಿಕಾ ಸಾಮಗ್ರಿಗಳನ್ನು ಸಂಸ್ಥೆಯಡಿ ಸರಕಾರಿ ಶಾಲೆಗಳ ಮಕ್ಕಳಿಗೆ ವಿತರಿಸುವ ಮೂಲಕ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು, ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಗೆ ದಾಖಲು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಆರ್ ವೆಂಕಟರಾಮ್, ಮುಖ್ಯ ಶಿಕ್ಷಕ ಆರ್. ಹನುಮಂತ ರೆಡ್ಡಿ, ಪ್ರಭಾತಿ,ಧರ್ಮಪುತ್ರಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.