Bagepally News: ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠ ಕನಕದಾಸರು
15-16ನೇ ಶತಮಾನದ ಸಂತ ಕವಿ ಕನಕದಾಸರು, ತಮ್ಮ ಕೀರ್ತನೆ, ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೆಳವರ್ಗದಲ್ಲಿ ಜನಿಸಿದರೂ, ತಮ್ಮ ಭಕ್ತಿ ಜ್ಞಾನ ದಿಂದ ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠರಾಗಿದ್ದಾರೆ.
-
ಬಾಗೇಪಲ್ಲಿ: 15-16ನೇ ಶತಮಾನದ ಸಂತ ಕವಿ ಕನಕದಾಸರು, ತಮ್ಮ ಕೀರ್ತನೆ, ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೆಳವರ್ಗದಲ್ಲಿ ಜನಿಸಿದರೂ, ತಮ್ಮ ಭಕ್ತಿ ಜ್ಞಾನದಿಂದ ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠರಾಗಿದ್ದಾರೆ.
ಇದನ್ನೂ ಓದಿ: Bagepally News: ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿದ ವಿಶ್ವಮಾನ ಕನಕದಾಸರು: ರಾಮಸುಬ್ಬಮ್ಮ
ಬಾಗೇಪಲ್ಲಿ ತಾಲ್ಲೂಕು ಗೂಳೂರು ಗ್ರಾಮದ ನೇಹಾ ವಿದ್ಯಾಸಂಸ್ಥೆ ಶಾಲೆಯಲ್ಲಿ ಕನಕ ದಾಸರು ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆ ಮುಖ್ಯಸ್ಥೆ ನಾಗರತ್ನಮ್ಮ ಮಾತನಾಡಿ, ಕನಕದಾಸರು ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಭಕ್ತ ಕನಕದಾಸರ ವೇಷಭೂಷಣ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.