ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾ ಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಜಿಲ್ಲಾಮಟ್ಟದ “ಫಲಪುಷ್ಪ ಪ್ರದರ್ಶನ” ಕಾರ್ಯಕ್ರಮವನ್ನು ಜ.26 ಮತ್ತು 27ರಂದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ: Chimul Election: ಚೀಮುಲ್ ಚುನಾವಣೆ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಚಟುವಟಿಕೆ ಗರಿಗೆದರಿಕೆ
ಪ್ರಮುಖ ಆಕರ್ಷಣೆಗಳು: ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವ ಕಪ್, ಕ್ರಿಕೆಟ್ ಬ್ಯಾಟ್ ಮತ್ತು ಬಾಲ್,ಸಾಲುಮರದ ತಿಮ್ಮಕ್ಕರವರ ಪ್ರತಿಮೆ, ಡಾ.ಎಂ.ಹೆಚ್.ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ, ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ, ಜಾನೂರ್ ಕಲಾಕೃತಿಗಳ ಪ್ರದರ್ಶನ, ಭೌಗೋಳಿಕ ಗುರುತಿಸುವಿಕೆ ಹೊಂದಿದ ಬೆಳೆಗಳ ಪ್ರದರ್ಶನ, ಔಷಧಿ ಸಸ್ಯಗಳ ಪ್ರದರ್ಶನ, ಜೇನು ಸಾಕಾಣಿಕೆ ಪ್ರದರ್ಶನ ಇರಲಿದೆ.
ಆಹಾರ ಇಲಾಖೆ ಶಿಫಾರಸ್ಸಿನನ್ವಯ ಸಮತೋಲನ ಆಹಾರ ವಿಂಗಡಣೆ ಕುರಿತ ಕಲಾಕೃತಿ, ಹೂವು ಕುಂಡಗಳ ಜೋಡಣೆ, ವಿವಿಧ ರೀತಿಯ ದೇಶೀಯ ಹಾಗೂ ವಿದೇಶೀಯ ಹೂ, ಹಣ್ಣು ಹಾಗೂ ತರಕಾರಿಗಳ ಪ್ರದರ್ಶನ, ಇಲಾಖಾ ಯೋಜನೆಗಳ ಮಾಹಿತಿ ಹಾಗೂ ಇತ್ಯಾದಿ, ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಿಸಲಾಗಿರುವ ಕಸಿ ಸಸಿಗಳ ಮಾರಾಟಕ್ಕಾಗಿ ಸಸ್ಯಸಂತೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕಿ ಗಾಯತ್ರಿ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.