ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Athletic sports: ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಜಿಲ್ಲಾ ತಂಡ ಆಯ್ಕೆ

14 ಮತ್ತು 16 ವರ್ಷದ ಬಾಲಕ–ಬಾಲಕಿಯರ ವಿಭಾಗದಲ್ಲಿ ವಿವಿಧ ಓಟ, ಜಿಗಿತ, ಗುಂಡು ಎಸೆತ, ಭರ್ಜಿ ಎಸೆತ ಸೇರಿದಂತೆ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಆಯ್ಕೆ ನಡೆಯಲಿದ್ದು, ಜಿಲ್ಲೆಯಿಂದ 13 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ. 14 ವರ್ಷದ ವಿಭಾಗಕ್ಕೆ 17-11-2012ರಿಂದ 16-11-2014ರೊಳಗೆ ಹಾಗೂ 16 ವರ್ಷದ ವಿಭಾಗಕ್ಕೆ 17-11-2010ರಿಂದ 16-11-2012ರೊಳಗೆ ಜನಿಸಿದ ಕ್ರೀಡಾಪಟುಗಳು ಅರ್ಹರಾಗಿರುತ್ತಾರೆ

ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಲ್ಲಿ ನ.14ರಂದು ನಡೆಯಲಿರುವ ಕಿರಿಯರ ಅಂತರ ಜಿಲ್ಲಾ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ತಂಡ ಆಯ್ಕೆ ಪ್ರಕ್ರಿಯೆ ಅ.5ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: World Para Athletics: ಚಿನ್ನದ ಪದಕ ಗೆದ್ದ ಸುಮಿತ್ ಅಂಟಿಲ್

14 ಮತ್ತು 16 ವರ್ಷದ ಬಾಲಕ–ಬಾಲಕಿಯರ ವಿಭಾಗದಲ್ಲಿ ವಿವಿಧ ಓಟ, ಜಿಗಿತ, ಗುಂಡು ಎಸೆತ, ಭರ್ಜಿ ಎಸೆತ ಸೇರಿದಂತೆ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಆಯ್ಕೆ ನಡೆಯಲಿದ್ದು, ಜಿಲ್ಲೆಯಿಂದ 13 ಕ್ರೀಡಾ ಪಟುಗಳನ್ನು ಆಯ್ಕೆ ಮಾಡಲಾಗುತ್ತದೆ.

14 ವರ್ಷದ ವಿಭಾಗಕ್ಕೆ 17-11-2012ರಿಂದ 16-11-2014ರೊಳಗೆ ಹಾಗೂ 16 ವರ್ಷದ ವಿಭಾಗಕ್ಕೆ 17-11-2010ರಿಂದ 16-11-2012ರೊಳಗೆ ಜನಿಸಿದ ಕ್ರೀಡಾಪಟುಗಳು ಅರ್ಹರಾಗಿರುತ್ತಾರೆ. ಭಾಗವಹಿಸು ವವರು ಎಎಫ್‌ಐನಲ್ಲಿ ಸದಸ್ಯತ್ವ ನೋಂದಾಯಿಸಿರಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಅವರನ್ನು 9740615534ಕ್ಕೆ ಸಂಪರ್ಕಿಸಬಹುದು.