ಇಬ್ಬನಿಯ ನಡುವೆ ಭಾರೀ ಯಶಸ್ಸು ಕಂಡ ದಿವ್ಯಶ್ರೀ ನಂದಿ ಹಿಲ್ಸ್ ಮಾನ್ಸೂನ್ ರನ್ ಓಟ
ನಂದಿಬೆಟ್ಟವನ್ನು ವಾಹನಗಳ ಮೂಲಕ ಕ್ರಮಿಸುವುದೇ ಕಠಿಣವಾಗಿರುವ ಸಂದರ್ಭದಲ್ಲಿ ಕಡಿದಾದ ದಾರಿ ಸವೆಸುತ್ತಾ,ಇಳಿಜಾರಿನಲ್ಲಿ ಇಳಿಯುತ್ತಾ ನೂರಾರು ತಿರುವುಗಳ ರಸ್ತೆಯಲ್ಲಿ ಓಡುವ ಮೂಲಕ ಸಾವಿರಾರು ಮಂದಿ ಓಟಗಾರರು ಬೆಟ್ಟದ ಜೈವಿಕ ಅನುಭವಕ್ಕೆ ದೇಹಕ್ಕೆ ಆವಾಹಿಸಿ ಕೊಂಡ ಪರಿ ವರ್ಣನಾತೀತವಾಗಿತ್ತು.


ನಂದಿಗಿರಿಯ ಮಡಿಲಿನಲ್ಲಿ ಭಾನುವಾರ ನಡೆದ ರನ್ ಓಟದಲ್ಲಿ 3 ಸಾವಿರ ಮಂದಿ ಓಟಗಾರರು ಭಾಗಿ
ಚಿಕ್ಕಬಳ್ಳಾಪುರ: ಚುಮು ಚಮು ಚಳಿ ಮತ್ತು ಇಬ್ಬನಿಯ ನಡುವೆ ಯುವಶಕ್ತಿ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ , ಹಾಗೂ ಕರ್ನಾಟಕ ಪ್ರವಾಸೋ ದ್ಯಮ ಇಲಾಖೆಯ ಸಹಯೋಗದಲ್ಲಿ ನಡೆದ ದಿವ್ಯಶ್ರೀ ನಂದಿ ಹಿಲ್ಸ್ ಮುಂಗಾರು ಓಟದ ಮೊದಲ ಆವೃತ್ತಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರರಾಜ್ಯಗಳ ಸುಮಾರು 3000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿ ಮಾನ್ಸೂನ್ ಓಟವನ್ನು ಸಾರ್ಥಕವಾಗಿಸಿದರು.
ಯುವಕ, ಯುವತಿ,ಪುರುಷ,ಮಹಿಳೆ ಎಂಬ ಬೇಧವಿಲ್ಲದೆ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ನಗರ ಸೇರಿ ದೇಶದ ನಾನಾ ಭಾಗ ಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಓಟಗಾರರು ನಂದಿ ಬೆಟ್ಟದ ತಪ್ಪಲಿನ ರಸ್ತೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಸಂಭ್ರಮದಿಂದ ಓಟದಲ್ಲಿ ಭಾಗವಹಿಸುವ ಮೂಲಕ ತಮ್ಮ ದೇಹದ ಫಿಟ್ನೆಸ್ ಅನ್ನು ತಾವೇ ಪರೀಕ್ಷಿಸಿಕೊಂಡರು. ಆ ಮೂಲಕ ಸಮುದಾಯ ಸ್ಪೂರ್ತಿಯ ಅನುಭವವನ್ನು ತಾವೂ ಪಡೆದು ಇತರರಿಗೂ ಹಂಚಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ನಂದಿಬೆಟ್ಟವನ್ನು ವಾಹನಗಳ ಮೂಲಕ ಕ್ರಮಿಸುವುದೇ ಕಠಿಣವಾಗಿರುವ ಸಂದರ್ಭದಲ್ಲಿ ಕಡಿದಾದ ದಾರಿ ಸವೆಸುತ್ತಾ,ಇಳಿಜಾರಿನಲ್ಲಿ ಇಳಿಯುತ್ತಾ ನೂರಾರು ತಿರುವುಗಳ ರಸ್ತೆಯಲ್ಲಿ ಓಡುವ ಮೂಲಕ ಸಾವಿರಾರು ಮಂದಿ ಓಟಗಾರರು ಬೆಟ್ಟದ ಜೈವಿಕ ಅನುಭವಕ್ಕೆ ದೇಹಕ್ಕೆ ಆವಾಹಿಸಿ ಕೊಂಡ ಪರಿ ವರ್ಣನಾತೀತವಾಗಿತ್ತು.
ಹೀಗೆ ನಂದಿ ಹಿಲ್ಸ್ ಮುಂಗಾರು ಓಟ ಪರಿಸರ ಸ್ನೇಹಿ ಕಾರ್ಯಚಟುವಟಿಕೆಗೆ ಬದ್ಧತೆಯ ಭಾಗವಾ ಗಿತ್ತು. ಹಸಿರು ಕಾರ್ಯಕ್ರಮವಾಗಿ ರೂಪಪಡೆದಿತ್ತು. ಮರುಬಳಕೆ ಮಾಡಬಹುದಾದ ವಸ್ತುಗಳ ಸದ್ಭಬಳಕೆಗೆ ಪ್ರೋತ್ಸಾಹ, ಓಟದಲ್ಲಿ ಭಾಗವಹಿಸುವವರು ತಮ್ಮ ಸ್ವಂತ ವಾಹನಗಳಲ್ಲಿ ಆಗಮಿಸುವ ಬದಲಿಗೆ ಸಮುದಾಯ ಸಾರಿಗೆಯಲ್ಲಿ ಆಗಮಿಸುವಂತೆ ಉತ್ತೇಜನ ನೀಡಲಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಓಟಗಾರರಿಗೆ ಕಿಂಚಿತ್ ತೊಂದರೆಯಾಗದಂತೆ ಕುಡಿಯುವ ನೀರು, ಆಂಬುಲೆನ್ಸ್, ಆರೋಗ್ಯ ತಪಾಸಣೆ,ತಿಂಡಿ ವ್ಯವಸ್ಥೆ ಸೇರಿ ಬೇಕಾದ ಎಲ್ಲಾ ಅಗತ್ಯವಾದ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ದಿವ್ಯಶ್ರೀ ನಂದಿ ಹಿಲ್ಸ್ ಮುಂಗಾರು ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಎಂ.ಸಿ. ಸುಧಾಕರ್ ನಂದಿಬೆಟ್ಟ ನಮ್ಮ ಜಿಲ್ಲೆಯ ಹೆಮ್ಮೆಯಷ್ಟೇ ಅಲ್ಲ, ಕರ್ನಾಟಕದ ಸುಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.ಇಲ್ಲಿನ ಜೈವಿಕ ಪರಿಸರಕ್ಕೆ ಮಹಾತ್ಮಾಗಾಂಧೀಜಿಯೇ ಮಾರುಹೋಗಿದ್ದರು. ಐತಿಹಾಸಿಕ ವಾಗಿ, ಸುಂದರ ಪ್ರಾಕೃತಿಕ ತಾಣವಾಗಿ ವಿಶ್ವಭೂಪಟದಲ್ಲಿ ಸ್ಥಾನ ಪಡೆದಿರುವ ನಂದಿಗಿರಿಧಾಮದ ತಪ್ಪಲಿನಲ್ಲಿ ಯುವಶಕ್ತಿ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆದ ದಿವ್ಯಶ್ರೀ ನಂದಿ ಹಿಲ್ಸ್ ಮುಂಗಾರು ಓಟದ ಮೊದಲ ಆವೃತ್ತಿಯನ್ನು ಪ್ರಾರಂಭಿಸಿರುವುದು ಸಂತೋಷ ತಂದಿದೆ.೨೦೨೭ರ ಆಗಸ್ಟ್ನಲ್ಲಿ ಕೂಡ ಎರಡನೇ ಆವೃತ್ತಿಯನ್ನು ಆರಂಭಿಸಲು ಯುವಜನ ಮತ್ತು ಕ್ರೀಡಾ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಯೋಜನೆ ರೂಪಿಸಿರುವುದನ್ನು ಕೇಳಿ ಓಟಗಾರರು ಹರ್ಷವ್ಯಕ್ತಪಡಿಸಿದ್ದಾರೆ. ನಮ್ಮ ಸರಕಾರವೂ ಕೂಡ ಮಾನ್ಸೂನ್ ಓಟದ ಈ ವಿಚಾರದಲ್ಲಿ ಬೇಕಾದ ಅಗತ್ಯ ನೆರವನ್ನು ನೀಡಲಿದೆ ಎಂದರು.
ನಂದಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣ ಸಂಬAಧ ಇದ್ದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕೊಂಡಿರುವ ನಮ್ಮ ಸರಕಾರ ಶೀಘ್ರವೇ ಈ ಕಾಮಗಾರಿ ಮುಗಿಯುವಂತೆ ನೋಡಿಕೊಳ್ಳಲಿದೆ. ಇದಾದಲ್ಲಿ ನಂದಿಬೆಟ್ಟದ ಹಿರಿಮೆ ಗರಿಮೆ ಜಗದಗಲ ಬೆಳಗಳಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಚಿವರು ಇಂದು ನಡೆದ ದಿವ್ಯಶ್ರೀ ಮಾನ್ಸನ್ ೨೧ಕೆ ಓಟದಲ್ಲಿ ೬೧ವರ್ಷದ ಸತೀಶ್ ಪಾಟ್ಕರ್ ಭಾಗವಹಿಸಿ ೩ನೇ ಸ್ಥಾನ ಪಡಯುವ ಮೂಲಕ ಯುವಕರು ನಾಚುವಂತೆ ಮಾಡಿದರು ಎಂದು ಹೇಳಿದರು.
ಯುವ ಜನತೆಯಲ್ಲಿ ಆರೋಗ್ಯದ ಕಾಳಜಿ ಬೆಳೆಸುವಲ್ಲಿ ಮ್ಯಾರಥಾನ್, ವಾಕಥಾನ್‌ಗಳು ನೆರವು ನೀಡಲಿವೆ. ನಂದಿಗಿರಿಯನ್ನು ಪಾರಂಪರಿಕ ತಾಣವಾಗಿ ಉಳಿಸಿಕೊಳ್ಳುವ ಜತೆಗೆ ಪ್ರವಾಸೋದ್ಯಮ ದಲ್ಲಿ ವಿಶ್ವಮಟ್ಟದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಮ್ಮ ಸರಕಾರ ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ ಎಂದರು.
ಈ ರೀತಿಯ ಕಾರ್ಯಕ್ರಮಗಳು ವಿಶೇಷವಾಗಿ ನಗರ ವೃತ್ತಿಪರರಲ್ಲಿ ಸಕ್ರಿಯ ಜೀವನಶೈಲಿಯನ್ನು ಪ್ರೇರೇಪಿಸುತ್ತವೆ ಹಾಗೂ ದಿವ್ಯಶ್ರೀ ನಂದಿ ಹಿಲ್ಸ್ ಮುಂಗಾರು ಓಟ ಭಾರತದ ಓಟಗಳ ಕ್ಯಾಲೆಂಡರ್ ಗಳಲ್ಲಿ ಪ್ರಮುಖ ಕಾರ್ಯಕ್ರಮವನ್ನಾಗಿ ಗುರುತಿಸಿಕೊಳ್ಳುವ ಅರ್ಹತೆ ಇದೆ ಎಂದು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಯುವಶಕ್ತಿ ಮತ್ತು ಕ್ರೀಡಾ ಇಲಾಖೆ , ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ , ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈ ಓಟವನ್ನು ಆಯೋಜಿ ಸಲಾಗಿತ್ತು. ಪ್ರವಾಸೋದ್ಯಮದ ಕೇಂದ್ರವಾಗಿ ಹಾಗೂ ಫಿಟ್ನೆಸ್‌ಗೆ ನಂದಿ ಬೆಟ್ಟ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನಂದಿ ಹಿಲ್ಸ್ ಮುಂಗಾರು ಓಟ ಯಶಸ್ಸು ಭಾರೀ ಕಂಡ ಹಿನ್ನೆಲೆಯಲ್ಲಿ ಆಯೋಜಕರು ಚಿಕ್ಕಬಳ್ಳಾ ಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಧನ್ಯವಾದ ಗಳನ್ನು ಅರ್ಪಿಸಿದರು.
ಮುಂದಿನ ದಿನಗಳಲ್ಲಿ ದಿವ್ಯಶ್ರೀ ಮಾನ್ಸೂನ್ ಓಟವನ್ನು, ಕ್ರೀಡೆ, ಪ್ರಕೃತಿ ಮತ್ತು ಆರೋಗ್ಯದ ವಾರ್ಷಿಕ ಹಬ್ಬವನ್ನಾಗಿ ರೂಪಿಸುವ ಉದ್ದೇಶ ಹೊಂದಿರುವುದಾಗಿ ಭಾರತದ ಅತಿದೊಡ್ಡ ಓಟ ತರಬೇತಿ ಅಕಾಡೆಮಿಯಾದ ಜೆ.ಜೆ ಆಕ್ಟೀವ್ ಸಂಸ್ಥೆಯ ಪದಾಧಿಕಾರಿಗಳು ಇದೇ ವೇಳೆ ಘೋಷಣೆ ಮಾಡಿದರು.
ಭಾನುವಾರ ನಡೆದ ದಿವ್ಯಶ್ರೀನಂದಿ ಹಿಲ್ಸ್ ಮುಂಗಾರು ಓಟದ ಈ ಕಾರ್ಯಕ್ರಮದಲ್ಲಿ ಎರಡು ಓಟದ ವಿಭಾಗಗಳನ್ನು ಹೊಂದಿತ್ತು. ಅದರಲ್ಲಿ ಒಂದು ಹಾಫ್ ಮ್ಯಾರಥಾನ್ (೨೧.೧ ಕಿ.ಮೀ.) ಎರಡನೆಯದು ೧೦ಕೆ - ಈ ಎರಡೂ ವಿಭಾಗದಲ್ಲಿ ಅನುಭವಿ ಕ್ರೀಡಾಪಟುಗಳು, ಹವ್ಯಾಸಿ ಓಟಗಾರರು ಹಾಗೂ ಇದೇ ಮೊದಲ ಬಾರಿಗೆ ಭಾಗವಹಿದವರು ಸೇರಿ ಈ ಓಟ ಹಳೆಬೇರು ೊಸಚಿಗುರು ಕೂಡಿರಲು ಮರ ಸೊಬಗು ಎಂಬತ್ತಿತ್ತು.
ಈ ವೇಳೆ ಯುವಜನ ಶಕ್ತಿ ಮತ್ತು ಕ್ರೀಡಾ ಇಲಾಖೆ ಮುಖ್ಯ ಕಾರ್ಯದರ್ಶಿ ಶ್ರೀ ನವೀನ್ ರಾಜ್ ಸಿಂಗ್ , ದಿವ್ಯಶ್ರೀ ಡೆವಲಪರ್ಸ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಪಿ. ಶ್ಯಾಮ ರಾಜು, ದಿವ್ಯಶ್ರೀ ಡೆವಲಪರ್ಸ್ ಅಧ್ಯಕ್ಷರು ಮತ್ತು ಸಿಇಒ ಶ್ರೀ ಭಾಸ್ಕರ್ ಎನ್ ರಾಜು, ಹಾಗೂ ಜೆಜೆ ಆಕ್ಟೀವ್ ಸಂಸ್ಥೆಯ ಮುಖ್ಯ ತರಬೇತುದಾರರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಮೊದ್ ದೇಶಪಾಂಡೆ, ಚಿಕ್ಕಬಳ್ಳಾ ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್‌ಭಟ್, ಉಪವಿಭಾಗಾಧಿಕಾರಿ ಆರ್.ಆಶ್ವಿನ್, ಡಿವೈಎಸ್ಪಿ ಶಿವಕುಮಾರ್, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಸೇರಿ ಬೆಂಗಳೂರು ಗ್ರಾಮಾಂತರ, ದೊಡ್ಡ ಬಳ್ಳಾಪುರ ಉಪವಿಭಾಗದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಬಹುಮಾನ ವಿಜೇತರು
ದಿವ್ಯಶ್ರೀ ವಿಸ್ಪರ್ ಆಫ್ ವಿಂಡ್ಸ್ ರೆಸಾರ್ಟ್ನಿಂದ ನಂದಿಬೆಟ್ಟದ ಗಿರಿಧಾಮದಲ್ಲಿನ ಮಿರ್ಜಾ ಇಸ್ಮಾಯಿಲ್ ಸರ್ಕಲ್ ವರೆಗಿನ ಗುರಿ ತಲುಪಿ ವಾಪಸ್ ಮತ್ತೆ ಆರಂಭದ ಸ್ಥಳಕ್ಕೆ ತಲುಪುವ ಹಾಫ್ ಮ್ಯಾರಥಾನ್ (೨೧.೧ ಕಿ.ಮೀ.) ಮಹಿಳೆಯರ ವಿಭಾಗದಲ್ಲಿ ರೀನಾ ಫಿರ್ದೋಸ್ ೧ ಗಂಟೆ ೪೫ ನಿಮಿಷ ೨೬ ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲಿಗರಾದರು.ವಿದ್ಯಾ ಸುಂದರೇಶ್ವರ ಮತ್ತು ರೀಟಾ ಸತೀಶ್ ಪಾಟ್ಕರ್ ಎರಡು ಮತ್ತು ಮೂರನೇ ಬಹುಮಾನ ಪಡೆದರು.
ಅದೇ ರೀತಿ ಪುರುಷರ ವಿಭಾಗದಲ್ಲಿ ಶೈಲೇಶ್ ಕುಶುವಾಹ ೧ಗಂಟೆ ೧೪ ನಿಮಿಷ ೨೮ ಸೆಕೆಂಡ್ ಅವಧಿಯಲ್ಲಿ ಗುರಿ ತಲುಪಿ ಪ್ರಥಮ ಬಹುಮಾನ ಪಡೆದರು.ಶಿವಾನಂದ ಚಿಗಾರಿ ಎರಡನೇ ಮತ್ತು ಮೊಹಮ್ಮದ್ ಸಾಹಿಲ್ ಅಣ್ಣಿಗೇರಿ ಮೂರನೇ ಬಹುಮಾನ ಪಡೆದರು.
೧೦ ಕಿಮೀ ಓಟದ ಸ್ಫರ್ಧೆಯ ಮಹಿಳೆಯರ ವಿಭಾಗದಲ್ಲಿ ಶರಣ್ಯವಿಜಯರಾಘವನ್ ಮೊದಲ ಬಹುಮಾನ, ಯುವರಾಣಿ ಎರಡನೇ ಬಹುಮಾನ , ಹರ್ಷಿತ ಎಚ್ ಎಂ ಮೂರನೇ ಬಹುಮಾನ ಪಡೆದರು.
ಪುರುಷರ ವಿಭಾಗದಲ್ಲಿ ಗೋಪಿಚಂದ್ ಚಂದ್ ಮೊದಲ ಬಹುಮಾನ ಪಡೆದರೆ,.ಅನುಭವ್ ಕರ್ಮಾಕರ್ ಎರಡನೇ ಬಹುಮಾನ, ಆಕಾಶ್ ಮೂರನೇ ಬಹುಮಾನ ಪಡೆದರು.