ಚಿಕ್ಕಬಳ್ಳಾಪುರ : ಶೋಷಿತ ಸಮುದಾಯಗಳ ಪಾಲಿನ ಎರಡು ಕಣ್ಣುಗಳಾದ, ರಾಷ್ಟ್ರೀಯ ನಾಯಕರಾದ ಅಂಬೇಡ್ಕರ್, ಜಗಜೀವನ್‌ರಾಂ(Ambedkar, Jagjivan Ram) ನಡುವೆ ಸ್ವಾರ್ಥಕ್ಕಾಗಿ ತಾರತಮ್ಯ ಮಾಡ ಬೇಡಿ ಎಂದು ಬೆಂಗಳೂರು ಮಾತಂಗ ಫೌಂಡೇಷನ್ ಅಧ್ಯಕ್ಷ ಆರ್.ಲೋಕೇಶ್ ಮನವಿ ಮಾಡಿದರು.
ನಗರದ ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಡಾ.ಬಾಬು ಜಗಜೀವನ್‌ರಾಮ್ ಅವರ 119ನೇ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ದರು.
ಆಶಯ ಅರಿವಾಗಬೇಕು!!!
ಅದ್ದೂರಿಯಾಗಿ ಕಾರ್ಯಕ್ರಮ ಮಾಡಿದರೆ ಸಾಲದು ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಅವರಂತಹ ರಾಷ್ಟ್ರೀಯ ನಾಯಕರ ದೂರದೃಷ್ಟಿಯ ಚಿಂತನೆ ನಮ್ಮದಾಗಬೇಕಿದೆ. ಎಂದರು. ಜಿಲ್ಲಾಡಳಿತ ರಾಷ್ಟ್ರೀಯ ಗೌರವ ಸಲ್ಲಿಸಿದ್ದಾರೆ. ಕರ್ನಾಟಕದ ಕಾಯಕ ಸಂಸ್ಕೃತಿಗೆ ಹೆಸರಾದ ಭಕ್ತಿ ಭಂಡಾರಿ ಬಸವಣ್ಣ ಅವರ ಶರಣ ಸಂಸ್ಕೃತಿಯ ಜತೆ ಗುರುತಿಸಿಕೊಂಡ ಮಾದಾರಿ ಚನ್ನಯ್ಯ, ಡೋಹರ ಕಕ್ಕಯ್ಯರಂತೆ ಬಿಹಾರದಲ್ಲಿ 15ನೇ ಶತಮಾನದಲ್ಲಿ ಸಂತ ರವಿದಾಸ್ ಚಳವಳಿಯಿಂದ ಪ್ರಭಾವಿತರಾದವರು ಬಾಬು ಜಗಜೀವನ್ ರಾಮ್. ಚಮ್ಮಾರ ಸಮುದಾಯದ ಸಂತ ರವಿದಾಸ್ ಮೂಢನಂಬಿಕೆ ವಿರುದ್ಧ, ಅಸ್ಪೃಷ್ಯತೆ, ಕಂದಾಚಾರಗಳ ವಿರುದ್ದ ಭಕ್ತಿ ಚಳವಳಿ ಮೂಲಕ ಸಮರ ಸಾರಿದ್ದರು. ಈ ಪಂಥವನ್ನು ಶಿವನಾರಣಿ ಪಂಥ ಎನ್ನಲಾಗಿದ್ದು ಇದರ ಮುಖ್ಯ ಸಂಚಾಲಕರಾಗಿ ಬಾಬೂಜಿ ತಂದೆ ಶೋಭಿರಾಮ್ ಆಗಿದ್ದರು.
ಬಹುಭಾಷಾ ಚತುರ!!!
12ನೇ ವಯಸ್ಸಿನಲ್ಲಿ ತಮ್ಮ ವಾಕ್ಪಟುತ್ವದಿಂದಾಗಿ ಮದನಮೋಹನ ಮಾಳವಿಯವರ ಸಂಪರ್ಕ ದೊರೆಯುತ್ತಿದೆ. ಇದೇ ಕಾರಣವಾಗಿ ಬನಾರಸ್ ವಿಶ್ವವಿದ್ಯಾಲಯದ ಒಡನಾಟ ಬೆಳೆಯುತ್ತದೆ. ಶ್ರೇಷ್ಠ ಸಂಘಟನಾಕಾರರಾಗಿದ್ದಷ್ಟೆ ಅಲ್ಲ ಭೋಜ್‌ಪುರಿ, ಬಿಹಾರಿ, ಹಿಂದಿ, ಸಂಸ್ಕೃತ ಇಂಗ್ಲಿಷ್ ಬಲ್ಲಂತಹ ಬಹುಭಾಷಾ ಕೋವಿದರಾಗಿದ್ದರು. ಭಕ್ತಿ ಚಳವಳಿಯ ಬಹು ದೊಡ್ಡ ಸಂಘಟನಾ ಚತುರರಾಗಿದ್ದರು.ಇದೇ ಕಾರಣವಾಗಿ ಸುಭಾಷ್ ಚಂದ್ರ ಬೋಸ್ ಅವರಿಂದ ಹೊಗಳಿಕೆಗೂ ಪಾತ್ರವಾಗುತ್ತಾರೆ. ಈ ಸಂಘಟನಾ ಶಕ್ತಿ ಮುಂದೆ ರಾಜಕೀಯ ದಲ್ಲಿ ಎತ್ತರೆತ್ತರದ ಸ್ಥಾನಳಿಗೆ ಏರುವಂತೆ ಮಾಡುತ್ತದೆ. ಪರಿಣಾಮ 1930 ರಿಂದ 1980ರ ತನಕ ಸಂಸದರಾಗಿ ಇತಿಹಾಸ ಬರೆಯುತ್ತಾರೆ ಎಂದರು.
ಶಿಕ್ಷಣಕ್ಕೆ ಒತ್ತು ನೀಡಿ!!!
ಮಾತಂಗ ಸಮುದಾಯ ಉನ್ನತ ವ್ಯಾಸಂಗ ಮಾಡುವ ಮೂಲಕ ಶಿಕ್ಷಿತರಾದಾಗ ಮಾತ್ರವೇ ಸಂಘಟಿತರಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇನ ಅಂಬೇಡ್ಕರ್ ಹೇಳಿದಂತೆ ನಮ್ಮ ಹಕ್ಕು ಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಇದನ್ನು ಬಿಟ್ಟು ಹೋರಾಟ ಮೊದಲು ಮಾಡಿ ಸಂಘಟನೆ ಎರಡನೇ ಆಕೆಯಾಗಿಸಿಕೊಂಡು ಕೊನೆಯದಾಗಿ ಶಿಕ್ಷಣವನ್ನಿಟ್ಟುಕೊಂಡಿದ್ದೀರಿ. ಇದನ್ನು ಬದಲಾವಣೆ ಮಾಡಲೇಬೇಕಿದೆ ಎಂದರು.
ಜಾತಿ ತಲೆಗೇರಬಾರದು???
ಆಧುನಿಕ ಜಗತ್ತು ಬದಲಾವಣೆಯ ನಾಗಾಲೋಟದಲ್ಲಿ ಸಾಗುತ್ತಿದೆ. ಸಾಂಪ್ರದಾಯಿಕ ಶಿಕ್ಷಣದ ಬದಲಿಗೆ ಎಐ ತಂತ್ರಜ್ಞಾನ, ರೋಬೋಟಿಕ್ ತಂತ್ರಜ್ಞಾನ, ಕ್ವಾಂಟಮ್ ತಂತ್ರ ಜ್ಞಾನ ಜಗತ್ತನ್ನು ಆಳುತ್ತಾ ಉದ್ಯೋಗವನ್ನು ಕಸಿಯುತ್ತಿವೆ. ಮೊಬೈಲ್ ವೈದ್ಯನಾಗಿ, ಹಿತೈಷಿಯಾಗಿ, ಗ್ರಂಥಾಲಯವಾಗಿ, ಏನೆಲ್ಲಾ ಆಗಿ ಬದಲಾಗಿರುವಾಗ ಎಂಬಿಬಿಎಸ್ ಕೂಡ ಮಹತ್ವ ಕಳೆದುಕೊಳ್ಳುತ್ತಿದೆ. ಇದರ ಜತೆ ಈಜ ಬೇಕಾದರೆ ಬಾಬಾ ಸಾಹೇಬ್ ಅವರ ಚಿಂತನೆ ಗಳನ್ನು ಮೈಗೂಡಿಸಿಕೊಳ್ಳಿ ಅರಿತು ನಡೆಯಿರಿ.ಸೂಕ್ಷö್ಮಮತಿಗಳಾಗಬೇಕು. ಜಾತಿ ಯನ್ನು ತಲೆಗೇರಿಸಿಕೊಳ್ಳಬಾರದು. ಸಪ್ತಸ್ವರದ ಪಿತಾಮಹ ಮಾತಂಗ ಮುನಿಯ ಪರಂಪರೆ. ಸಪ್ತ ಮಹರ್ಷಿಗಳ ಸಾಲಿನಲ್ಲಿ ನಿಲ್ಲುವ ಅರುಂಧತಿ ಪರಂಪರೆಯ ಬಗ್ಗೆ ಅರಿತು ಮುನ್ನಡೆ ಯಿರಿ. ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ ಎಂಬುದನ್ನು ಮರೆಯದಿರಿ, ಹಿಂದೂ ಪರಂಪರೆಯ ಎಲ್ಲಾ ವಿಚಾರಗಳಲ್ಲಿ ಆದಿಮ ಸ್ಥಾನದಲ್ಲಿ ಮಾತಂಗ ಸಮುದಾಯವಿದೆ ಎಂದರು.
ಹಸಿರು ಕ್ರಾಂತಿ ಆಹಾರ ಭದ್ರತೆ !!!
70ರ ದಶಕದಲ್ಲಿ ಭಾರತವನ್ನು ಆವರಿಸಿದ್ದ ಕ್ಷಾಮಕ್ಕೆ ಮದ್ದರೆದ ಧೀಮಂತ ಕೃಷಿ ಮಂತ್ರಿ ಯಾಗಿದ್ದ ಬಾಬು ಜಗಜೀವನ್‌ರಾಮ್ ಆಗಿದ್ದಾರೆ. ಗ್ರೋ ಮೋರ್ ಫುಡ್ ಆಕ್ಟ್ ಮೂಲಕ ಬಡವರಿಗೆ ಕೃಷಿ ಭೂಮಿ ಹಂಚಿಕೆ ಮಾಡಿದರು. ಈ ಮೂಲಕ ಜಿ.ಎಂ.ಎಫ್ ಆಕ್ಟ್ ಮೂಲಕ ಭಾರತದಾದ್ಯಂತ ದಲಿತರಿಗೆ ಹಿಂದುಳಿದವರಿಗೆ ಭೂಮಿ ಕೊಟ್ಟಿದ್ದಾರೆ. ರಕ್ಷಣಾ ಸಚಿವ ರಾಗಿದ್ದ ಅವಧಿಯಲ್ಲಿ ಸಿಯಾಚಿನ್‌ನಂತಹ ಕಡಿದಾದ ಶಿಖರದಲ್ಲಿ ಸೈನಿಕರನ್ನು ಸಂಧಿಸಿ ಅವರಿಗೆ ಕಷ್ಟಗಳನ್ನು ಅರಿತು ದೈರ್ಯ ತುಂಬುವ ಕೆಲಸ ಮಾಡಿದರು. ಸಮರ್ಥ ಯುದ್ದ ನೀತಿಯನ್ನು ಜಾರಿಗೆ ತಂದು 93 ಸಾವಿರ ಪಾಕ್ ಸೈನಿಕರ ಕೈಗೆ ಕೋಳ ತೊಡಿಸಿ ಬಂಧಿ ಗಳಾಗಿಸುತ್ತಾರೆ. ಆಮೂಲಕ ಪಾಕ್‌ಗೆ ಬುದ್ದಿ ಕಲಿಸುತ್ತಾರೆ. ಹೀಗೆ ಕೃಷಿ ಮಂತ್ರಿಯಾಗಿ ಆಹಾರ ಭದ್ರತೆ ಮತ್ತು ರಕ್ಷಣಾ ಮಂತ್ರಿಯಾಗಿ ದೇಶಕ್ಕೆ ರಕ್ಷಣೆ ನೀಡಿದ ಧೀಮಂತ ಚೇತನ ನಮ್ಮ ಬಾಬೂಜಿ ಆಗಿದ್ದಾರೆ ಎಂದರು.
ತಾರತಮ್ಯ ತರಬೇಡಿ!!!
ಅಂಬೇಡ್ಕರ್ ಮತ್ತು ಬಾಬೂ ಜಗಜೀವನ್‌ರಾಮ್ ಈ ಇಬ್ಬರು ಮಹಾನ್ ನಾಯಕರ ಶಕ್ತಿ ಸಾಮರ್ಥ್ಯಗಳು ಬೇರೆ ಬೇರೆಯೇ ಆಗಿವೆ. ಇಬ್ಬರೂ ಕೂಡ ನಮ್ಮ ಸಮುದಾಯಗಳ ರಾಷ್ಟ್ರೀ ಯ ನಾಯಕರೇ ಆಗಿದ್ದಾರೆ. ಇವರ ನಡುವೆ 18 ವರ್ಷಗಳಷ್ಟು ವಯಸ್ಸಿನ ಅಂತರವಿದೆ. ಅಂಬೇಡ್ಕರ್ 32 ಪದವಿ ಪಡೆದಂತಹ ಬಹುದೊಡ್ಡ ಮೇಧಾವಿ.ದೊಡ್ಡ ಜ್ಞಾನಿ ಸಮ ಸಮಾಜದ ಆಶಯಗಳ ಹಿತ ಚಿಂತಕ ಯಾರಿದ್ದಾರೆ?.ಬಹುದೊಡ್ಡ ಸಮಾಜ ಸುಧಾರಕ ಅಂಬೇಡ್ಕರ್. ಅಂತೆಯೇ ಬಾಬೂಜಿ ನೂರಕ್ಕೆ ನೂರರಷ್ಟು ಪಕ್ಕಾ ರಾಜಕಾರಣಿ. ದೂರ ದೃಷ್ಟಿ ಇದ್ದಂತಹ ರಾಜಕೀಯ ನೇತಾರ. ಇಬ್ಬರ ಮೂಲಕ ಸ್ವತಂತ್ರ ಭಾರತ ಸಂವಿಧಾನದ ಅಡಿಯಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟಿದೆ. ಇವರಿಬ್ಬರ ನಡುವೆ ತಾರತಮ್ಯ ಮಾಡಬಾರದು. ನಡೆಗಳು ಬೇರೆಯಿದ್ದರೂ ಗುರಿಯೊಂದೇ ಆಗಿತ್ತು.ಇಂತಹ ಶಕ್ತಿಗಳ ನಡುವೆ ಭಿನ್ನತೆ ತರುವುದು ಬೇಡ ಎಂದು ಮನವಿ ಮಾಡಿದರು.
ಡಿಫ್ರೆಸ್ ಕ್ಲಾಸ್ ಲೀಗ್ ಸ್ಥಾಪನೆ!!!
ಬಾಬೂಜಿ ತಮ್ಮ 27ನೇ ವಯಸ್ಸಿನ ತರುಣ ಡಿಪ್ರೆಸ್ಡ್ ಕ್ಲಾಸಸ್ ಲೀಗ್ ಎಂಬ ರಾಜಕೀಯ ವೇದಿಕೆ ಸ್ಥಾಪನೆ ಮಾಡುತ್ತಾರೆ. ಬ್ರಿಟೀಷರು ಕೆಲವು ರಾಜ್ಯಗಳಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಮಾಡಲು ಮುಂದಾಗಿರುತ್ತಾರೆ. ಆಗ ಬಿಹಾರದಲ್ಲಿ ಚುನಾವಣೆ ಘೋಷಣೆ ಆಗುತ್ತದೆ. ಬ್ರಿಟೀಷ್ ಬೆಂಬಲಿತ ಅಭ್ಯರ್ಥಿಗಳು ಒಂದೆಡೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಒಂದು ಕಡೆ ನಿಲ್ಲುತ್ತಾರೆ. 1930ರ ಸಂದರ್ಭ ಬಾಬೂಜಿ ಅವರ ಡಿಪ್ರೆಸ್ಡ್ ಕ್ಲಾಸ್ ಲೀಗ್ ಅಭ್ಯರ್ಥಿಗಳು ಕಾಂಗ್ರೆಸ್ ವಿರುದ್ಧ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಾರೆ. ಆವೊತ್ತಿಗೇ 28 ವರ್ಷದ ತರುಣ ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣಕ್ಕೆ ಕಾರಣವಾಗುತ್ತಾರೆ. ಈ ವಿಚಾರ ತಿಳಿದ ಗಾಂಧಿ 1940ರಲ್ಲಿ ಬಾಬು ಜಗಜೀವನ್‌ರಾಮ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿ ಕೊಳ್ಳುತ್ತಾರೆ. ಕಾಂಗ್ರೆಸ್ ಸೇರುವ ಮೊದಲೇ ಅತ್ಯಂತ ಯಶಸ್ವೀ ಪ್ರಭಾವಿ ರಾಜಕಾರಣಿ ಆಗಿದ್ದರು ಎಂಬುದು ಮರೆಯಬಾರದು ಎಂಬುದನ್ನು ಸಮುದಾಯ ಅರಿಯಬೇಕಿದೆ ಎಂದರು.
ಸಂವಿಧಾನಕ್ಕೆ ಬಲ ತುಂಬಿದರು!!!
ಬಾಬೂ ಜಿ ಇಂದಿರಾಜಿಗೆ ತುರ್ತು ಪರಿಸ್ಥಿತಿ ಹೇರುವುದು ಬೇಡ, ಬಾಬಾ ಸಾಹೇಬರ ಸಂವಿಧಾನಕ್ಕೆ ಹಿನ್ನಡೆ ಆಗುತ್ತದೆ ಬೇಡ ಎನ್ನುತ್ತಾರೆ. ಆದರೂ ಆಕೆ ಮಾತು ಕೇಳುವುದಿಲ್ಲ. 1977ರ ವೇಳೆಗಾಗಲೇ ಜಯಪ್ರಕಾಶ್ ನಾರಾಯಣ್‌ರ ಸಮಾಜವಾದಿ ಕ್ರಾಂತಿ ದೇಶವನ್ನು ಸೆಳೆದಿರುತ್ತದೆ. ತುರ್ತುಪರಿಸ್ಥಿತಿ ಜಾರಿ ವಿರೋಧಿಸಿ ಮಾಡಿದಾಗ ಬಾಬೂಜಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದು ಕಾಂಗ್ರೆಸ್ ಫಾರ್ ಡೆಮಾಕ್ರಸಿ ಎಂಬ ಪಕ್ಷ ಸ್ಥಾಪಿಸಿ,ಜನತಾಪಕ್ಷಕ್ಕೆ ಬೆಂಬಲ ನೀಡುತ್ತಾರೆ. ಹರಿಯಾಣದ ಮುಖ್ಯಮಂತ್ರಿ ಬಹುಗುಣ ಒಡಂಬಡಿಕೆ ಮಾಡಿಕೊಂಡು ಚುನಾವನೆ ಎದುರಿಸುತ್ತಾರೆ. ಆ ಚುನಾವಣೆಯಲ್ಲಿ ಯುಪಿಐ- 87 ಸಿಎಫ್‌ಟಿ 64 ಸ್ಥಾನ ಪಡೆಯುತ್ತಾರೆ.ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲದಂತೆ ನೋಡಿ ಕೊಳ್ಳುತ್ತಾರೆ. ಯಾಕೆಂದರೆ ಅಂಬೇಡ್ಕರ್ ರಚಿತ ಸಂವಿಧಾನದ ಪ್ರಕಾರ ದೇಶ ನಡೆಯಬೇಕೇ ವಿನಃ ಸರ್ವಾಧಿಕಾರಿ ನಡೆಯಿಂದ ಅಲ್ಲ ಎಂದು ತೋರಿಸಿ ಕೊಡುತ್ತಾರೆ. ಇದು ಬಾಬೂಜಿ ಅವರ ರಾಜಕೀಯ ಚಾಣಾಕ್ಷತೆಗೆ ಸಾಕ್ಷಿ ಎಂದರು.
ಸಂಸದ ಡಾ.ಕೆ.ಸುಧಾಕರ್(MP Dr.K.Sudhakar) ಮಾತನಾಡಿ, ಬಾಬೂಜಿಯವರು ಒಬ್ಬ ಸಾಮಾನ್ಯ ವ್ಯಕ್ತಿಯಾಗದೆ ಬಲಹೀನ ವರ್ಗಗಳ ಶಕ್ತಿಯಾಗಿದ್ದರು. ಗೌತಮ ಬುದ್ಧರು ವಿಶ್ವಕ್ಕೆ ನೀಡಿದ ಸಾಮಾಜಿಕ ನ್ಯಾಯದ ಸಂದೇಶವನ್ನು ಇಡೀ ದೇಶಕ್ಕೆ ಪಸರಿಸಿದವರು ಜಗಜೀವನ್ ರಾಮ್.ಅವರು ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಿದ ನಿಯಮಗಳು ಈಗಲೂ ಚಾಲನೆ ಯಲ್ಲಿವೆ. ಆಹಾರ ಉತ್ಪನ್ನಗಳನ್ನು ದೇಶದ ರೈತರು ಇಂದು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಅದರಲ್ಲಿ ಬಾಬೂಜಿ ಅವರ ಕಾಣಿಕೆ ಅಪಾರ ಎಂದು ತಿಳಿಸಿದರು.
ಯಲುವಳ್ಳಿ ಎನ್ ರಮೇಶ್ ಮಾತನಾಡಿ, ಡಾ.ಬಾಬು ಜಗಜೀವನ ರಾಮ್. ಬಾಲ್ಯದಲ್ಲಿ ಬಡತನ, ಶೋಷಣೆ ಅನುಭವಿಸಿದ್ದ ಅವರು ಶೋಷಣೆ ವಿರುದ್ಧ ಹೋರಾಟ ನಡೆಸಿ ವಿದ್ಯಾ ಭ್ಯಾಸ ಪಡೆದ ಮಹಾನ್ ವ್ಯಕ್ತಿ. ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಹೊಂದಿರುವ ಅವರು ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮ ವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ ಪ್ರಭು ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಅವರು ನಮ್ಮ ದೇಶದ ಎರಡು ಕಣ್ಣುಗಳು. ಇವರ ಬದುಕು ಬರಹ ಸಮಾಜಕ್ಕೆ ಸದಾ ಮಾದರಿ. ಸ್ವಾತಂತ್ರ್ಯ ಹೋರಾಟಗಾರರಾಗಿ,ಕಾರ್ಮಿಕ,ಕೃಷಿ, ರಕ್ಷಣಾ, ರೈಲ್ವೆ ಸಚಿವ ರಾಗಿ ಸಾಧಿಸಿರುವ ಸಾಧನೆ ಅಪಾರ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ವಾಪಸಂದ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಿಂದ ಡಾ.ಬಾಬು ಜಗಜೀವನ ರಾಮ್ ರವರ ಭಾವಚಿತ್ರಗಳ ಪಲ್ಲಕ್ಕಿ, ಸ್ತಬ್ದ ಚಿತ್ರಗಳು ಹಾಗೂ ತಮಟೆ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ಕಾರ್ಯಕ್ರಮ ಆರಂಭವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಶಿಡ್ಲಘಟ್ಟ ಸರ್ಕಲ್) ಮುಖಾಂತರ ಕನ್ನಡ ಭವನದ ವರೆಗೆ ಸಾಗಿತು.
ಈ ವೇಳೆ 204-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಗಮದ ಅಧ್ಯಕ್ಷ ಬಿ ಜಿ ಗಣೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕುಶಲ್ ಚೌಕ್ಸೆ ಅಪರ ಜಿಲ್ಲಾಧಿಕಾರಿ ಡಾ. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯ ದರ್ಶಿ ಅತಿಕ್ ಪಾಷಾ, ಮಾಜಿ ಶಾಸಕರಾದ ಮುನಿಯಪ್ಪ, ಅನುಸೂಯಮ್ಮ, ತಹಸಿಲ್ದಾರ್ ರಶ್ಮಿ, ನಗರ ಸಭೆ ಸದಸ್ಯರು, ಸಮುದಾಯದ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ದಲಿತ ಸಂಘಟನೆಗಳ ಮುಖಂಡರು, ಪದಾಧಿ ಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.