ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಬಜಾರ್ ರಸ್ತೆ ಮತ್ತು ಗಂಗಮ್ಮಗುಡಿ ರಸ್ತೆ ಅಭಿವೃದ್ದಿಪಡಿಸಲು ಸಜ್ಜಾದ ಜಿಲ್ಲಾಡಳಿತ: ಜಿಲ್ಲಾಧಿಕಾರಿ ಜಿ.ಪ್ರಭು

ಗಂಗಮ್ಮಗುಡಿ ರಸ್ತೆ ಮತ್ತು ಬಜಾರ್ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಯು ದಶಕಗಳ ಕನಸಾಗಿದೆ.ಜಿಲ್ಲಾ ಕೇಂದ್ರದ ಪ್ರಮುಖ ವಾಣಿಜ್ಯ ಚಟವಟಿಕೆಗಳ ತಾಣವಾದ ಈ ರಸ್ತೆಗಳ ಜನರ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿವೆ. ಇದನ್ನು ಮನಗಂಡಿರುವ ಜಿಲ್ಲಾಡಳಿತ ಸರಕಾರಿ ನಿಯಮಗಳಿಗೆ ಅನುಸಾರವಾಗಿ ಕ್ರಮವಹಿಸಿದೆ.

ಗಂಗಮ್ಮಗುಡಿ ರಸ್ತೆ ಅಭಿವೃದ್ದಿಪಡಿಸಲು ಸಜ್ಜಾದ ಜಿಲ್ಲಾಡಳಿತ

ನಗರದ ಗಂಗಮ್ಮಗುಡಿ, ಬಜಾರ್‌ರಸ್ತೆ ಅಗಲೀಕರಣ ಸಂಬAಧ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿದರು.ನಂತರ ಜಿಲ್ಲಾಡಳಿತ ಭವನದಲ್ಲಿ ವರ್ತಕರ ಮಾಲಿಕರ ಸಭೆ ನಡೆಸಿ ಮಾಹಿತಿ ಪಡೆದರು. -

Profile
Ashok Nayak Apr 5, 2026 12:31 AM

ದಶಕಗಳ ಕನಸಿಗೆ ಮುಕ್ತಿಕಾಣಿಸಲು ಮುಂದಾದ ಸರಕಾರ : ಅನಧಿಕೃತ ಕಟ್ಟಡಗಳ ತೆರವಿಗೆ ಮೊದಲ ಆದ್ಯತೆ

ಚಿಕ್ಕಬಳ್ಳಾಪುರ: ಜನರ ಹಿತದೃಷ್ಠಿಯಿಂದ, ವ್ಯಾಪಾರ ವಹಿವಾಟು ಹಾಗೂ ತುರ್ತು ಆರೋಗ್ಯ ಪರಿಹಾರ ಕ್ರಮದ ದೃಷ್ಠಿಯಿಂದ ನಗರದ ಬಜಾರ್ ರಸ್ತೆ ಮತ್ತು ಗಂಗಮ್ಮ ಗುಡಿಯಲ್ಲಿರುವ ಅನಧಿಕೃತ ಕಟ್ಟಡಗಳ ತೆರವಿಗೆ ಮೊದಲ ಆಧ್ಯತೆ ನೀಡಲಾಗುವುದು, ವರ್ತಕರ ಸಹಕಾರದಿಂದ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರದ ಬಜಾರ್ ರಸ್ತೆ ಮತ್ತು ಗಂಗಮ್ಮಗುಡಿ ರಸ್ತೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ಅಲ್ಲಿನ ವ್ಯಾಪಾರಸ್ಥರು ಹಾಗೂ ನಿವಾಸಿಗಳ ಜತೆ ಬೆರೆತು ಅವರಿಂದ ಅಹವಾಲುಗಳನ್ನು ಸ್ವೀಕಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದಾಖಲೆ ರಹಿತ ನಿವಾಸಿಗಳ ಆಶಾಕಿರಣವಾದ ಕಂದಾಯ ಗ್ರಾಮ ಅಭಿಯಾನ

ಗಂಗಮ್ಮಗುಡಿ ರಸ್ತೆ ಮತ್ತು ಬಜಾರ್ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಯು ದಶಕ ಗಳ ಕನಸಾಗಿದೆ. ಜಿಲ್ಲಾ ಕೇಂದ್ರದ ಪ್ರಮುಖ ವಾಣಿಜ್ಯ ಚಟವಟಿಕೆಗಳ ತಾಣವಾದ ಈ ರಸ್ತೆಗಳ ಜನರ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿವೆ. ಇದನ್ನು ಮನಗಂಡಿರುವ ಜಿಲ್ಲಾಡಳಿತ ಸರಕಾರಿ ನಿಯಮಗಳಿಗೆ ಅನುಸಾರವಾಗಿ ಕ್ರಮವಹಿಸಿದೆ. ಈ ಸಂಬಂಧ ವರ್ತಕರ ಮಾಲಿಕರ ಸಭೆ ಕೂಡ ನಡೆಸಿದ್ದು ಎಲ್ಲರೂ ಕೂಡ ಉತ್ತಮ ಸಲಹೆ ಸೂಚನೆ ಸಹಕಾರ ನೀಡಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಮುತುವರ್ಜಿಯಿಂದ ಈ ರಸ್ತೆ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಅನುದಾನವನ್ನು ಸಹ ಬಿಡುಗಡೆ ಮಾಡಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಅನಧಿಕೃತವಾಗಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ನಿವಾಸಿಗಳು ಹಾಗೂ ವ್ಯಾಪಾರ ಸ್ಥರು ಸಹ ಒತ್ತುವರಿ ಜಾಗದ ತಮ್ಮ ಕಟ್ಟಡಗಳನ್ನು ಸ್ವಯಂ ಪ್ರೇರಿತರಾಗಿ ತೆರವು ಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿ ದೃಷ್ಠಿಯಿಂದ ಹಾಗೂ ಸುಗಮ ಸಂಚಾರದ ಹಿತದೃಷ್ಠಿಯಿಂದ ಈ ರಸ್ತೆಗಳ ಅಭಿವೃದ್ಧಿ ಕಾರ್ಯ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈ ರಸ್ತೆಯ ಇಕ್ಕೆಲಗಳಲ್ಲಿನ ಎಲ್ಲಾ ಅಂಗಡಿ ಮಳಿಗೆಗಳ ಮಾಲೀಕರು, ವ್ಯಾಪಾರ ಸ್ಥರು, ನಿವಾಸಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡದರು.

cbpm4dc

ಸಭೆಯಲ್ಲಿ ಭಾಗಿಯಾಗಿದ್ದ ವರ್ತಕರು ಮತ್ತು ಮಾಲಿಕರು ಮಧ್ಯ ರಸ್ತೆಯಿಂದ 30 ಅಡಿ ಎಡಕ್ಕೆ 30 ಅಡಿ ಬಲಕ್ಕೆ ತೆರವು ಮಾಡಬೇಕೆಂಬ ನಿಯಮವಿದ್ದರೂ ಇಷ್ಟು ತೆರವು ಮಾಡ ಲಾಗದು. ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರೆ. ಒಂದಿಷ್ಟು ಮಂದಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತಂದರೆ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು ಎಂದಿದ್ದಾರೆ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಸೌಹಾರ್ಧಯುತವಾಗಿ ಈ ಕೆಲಸ ಮಾಡಲಾಗು ವುದು ಎಂದರು.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಗೌರಿಬಿದನೂರು ಮತ್ತು ಚಿಂತಾಮಣಿ ತಾಲ್ಲೂಕು ಗಳನ್ನು ಸಂಪರ್ಕಿಸುವ ರಸ್ತೆಯನ್ನು ಈಗಾಗಲೇ ಅಗಲೀಕರಣ ಭರದಿಂದ ಸಾಗಿದ್ದು ಈ ಮೂಲಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಅದೇ ರೀತಿ ಬಜಾರ್ ರಸ್ತೆ ಮತ್ತು ಗಂಗಮ್ಮಗುಡಿ ರಸ್ತೆಗಳನ್ನು ಎಲ್ಲರ ಸಹಕಾರ ಪಡೆದು ನೂತನವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ನಗರಸಭೆ ಸದಸ್ಯರು, ಸ್ಥಳೀಯ ವ್ಯಾಪಾರಸ್ಥರು ಹಾಗೂ ನಿವಾಸಿಗಳು ಹಾಜರಿದ್ದರು.