ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Metro to Chikkaballapur: ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ತರುವ ಕನಸು – 2033ರೊಳಗೆ ಯೋಜನೆ ಪೂರ್ಣ ಸಾಧ್ಯತೆ: ಶಾಸಕ ಪ್ರದೀಪ್ ಈಶ್ವರ್ ವಿಶ್ವಾಸ

ಇಲ್ಲಿನ ರಸ್ತೆ ವ್ಯವಸ್ಥೆ ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ಅಭಿವೃದ್ಧಿಯಾಗಿರಲಿಲ್ಲ. ಈಗ ಹಂತ ಹಂತವಾಗಿ ಎಲ್ಲಾ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪೆರೇಸಂದ್ರಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಯಿದ್ದು,ಅದನ್ನು ರಾಷ್ಟ್ರೀಯ ಹೆದ್ದಾರಿಯ ಸಮೀಪ ನಿರ್ಮಿಸಲು ಕ್ರಮ ವಹಿಸಲಾಗುವುದು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಯೋಜನೆ ತರುವ ಕನಸು ನನ್ನದಾಗಿದ್ದು,ಅದಕ್ಕಾಗಿ ಸರ್ಕಾರದ ಸಚಿವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇನೆ. 2033ರ ವೇಳೆಗೆ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಬರುವ ವಿಶ್ವಾಸವಿದೆ ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಹೇಳಿದರು.

ಸೋಮವಾರ ತಾಲ್ಲೂಕಿನ ಪೇರೇಸಂದ್ರದಲ್ಲಿ 5 ಕೋಟಿ ವೆಚ್ಚದಲ್ಲಿ ಪೆರೇಸಂದ್ರ–ಗೌರಿಬಿದನೂರು ಸರಪಳಿ ರಸ್ತೆ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಪೆರೇಸಂದ್ರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಜನಸಂಖ್ಯೆಯೂ ಹೆಚ್ಚುತ್ತಿದೆ.ಮುಂದಿನ ಹತ್ತು ವರ್ಷಗಳಲ್ಲಿ ಪೆರೇಸಂದ್ರವನ್ನು ತಾಲೂಕು ಕೇಂದ್ರವಾಗಿಸುವ ಗುರಿಯಿದೆ ಎಂದರು.

ಇದನ್ನೂ ಓದಿ: MLA Pradeep Eshwar: ಫಾರಂ-53, 57ರ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಕಾನೂನಿನಂತೆ ಇತ್ಯರ್ಥಪಡಿಸಲಾಗುವುದು : ಶಾಸಕ ಪ್ರದೀಪ್ ಈಶ್ವರ್

ಇಲ್ಲಿನ ರಸ್ತೆ ವ್ಯವಸ್ಥೆ ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ಅಭಿವೃದ್ಧಿಯಾಗಿರಲಿಲ್ಲ. ಈಗ ಹಂತ ಹಂತವಾಗಿ ಎಲ್ಲಾ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪೆರೇಸಂದ್ರಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಯಿದ್ದು,ಅದನ್ನು ರಾಷ್ಟ್ರೀಯ ಹೆದ್ದಾರಿಯ ಸಮೀಪ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪೆರೇಸಂದ್ರ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳ ದುರಸ್ತಿಗೆ ಪಣ ತೊಟ್ಟಿದ್ದು, ಈಗಾಗಲೇ ಹಲವು ರಸ್ತೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ. ನನ್ನ ವಿರುದ್ಧ ರಾಜಕೀಯ ಮಾಡಿರುವ ಗ್ರಾಮಗಳಲ್ಲಿಯೂ ರಸ್ತೆಗಳನ್ನು ಸರಿಪಡಿಸಿದ್ದೇನೆ. ನನಗೆ ರಾಜಕೀಯಕ್ಕಿಂತ ಜನಸೇವೆಯೇ ಮುಖ್ಯ. ನನ್ನ ಶಕ್ತಿಮೀರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.

ಎಸ್‌ಸಿ–ಎಸ್‌ಟಿ ಸಮುದಾಯದ ಜನರಿಗೆ ಶ್ಮಶಾನಕ್ಕೆ ಜಾಗದ ಕೊರತೆ ಇಪ್ಪತ್ತು ವರ್ಷಗಳಿಂದ ಇತ್ತು. ಪಂಚಾಯಿತಿಯಲ್ಲಿ ನಮ್ಮದು ವಿರೋಧ ಪಕ್ಷದ ಸ್ಥಾನವಿದ್ದರೂ ಸಹ ಈ ಸಮುದಾಯಕ್ಕೆ ಶ್ಮಶಾನ ಜಾಗವನ್ನು ಮಂಜೂರು ಮಾಡಿಸಿದ್ದೇನೆ. ಗುಂಡ್ಲು ಮಂಡಿಕಲ್‌ನ ಎಸ್‌ಸಿ–ಎಸ್‌ಟಿ ಸಮುದಾಯದ 40 ಮನೆಗಳಿಗೆ ಶೌಚಾಲಯ ಸಮಸ್ಯೆ ನಿವಾರಿಸಿದ್ದು ಇದನ್ನು ಶೀಘ್ರದಲ್ಲೇ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಷ್ಟೂರು ರಸ್ತೆ ಕಾಮಗಾರಿ ಕಳೆದ ಹತ್ತು ವರ್ಷಗಳಿಂದ ಸ್ಥಗಿತವಾಗಿತ್ತು. ಈಗ 10 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ.

ಕಂದವಾರ ರಸ್ತೆ ಅಭಿವೃದ್ಧಿಗೆ 8 ಕೋಟಿ ಮಂಜೂರು ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ವಿಳಂಬವಾಗಿದ್ದು,ಒAದು ತಿಂಗಳೊಳಗೆ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ನಂತರ ತಕ್ಷಣ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.

ಜಾತಿಗಳು ಬೇರೆ ಇರಬಹುದು,ಆದರೆ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು. ಈ ತತ್ವವನ್ನು ನಾನು ಸದಾ ಅನುಸರಿಸಿದ್ದೇನೆ. ಆದರೆ ಬಿಜೆಪಿ ನಾಯಕರು ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶಿವಾನಂದ್, ಅನುಸೂಯಮ್ಮ,ನಗರಸಭೆ ಮಾಜಿ ಸದಸ್ಯ ಎಸ್.ಎಂ. ರಫೀಕ್, ಮಂಡಿಕಲ್–ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ, ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್, ನಾಗೇಶ್ ರೆಡ್ಡಿ,ಡಾನ್ಸ್ ಶ್ರೀನಿವಾಸ್, ಕೆ.ಎಂ.ಮುನೇಗೌಡ, ಉಮೇಶ್ ಜಿ, ಪೇರೇಸಂದ್ರ ದಯಾನಂದ್, ಪುರಡ ಗಡ್ಡೆ ಮುನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆರೋಗ್ಯಕ್ಕೆ ಪ್ರಥಮ ಆದ್ಯತೆ

ಕ್ಷೇತ್ರದಲ್ಲಿ ಆರೋಗ್ಯ ಸೇವೆಗೆ ಪ್ರಥಮ ಆದ್ಯತೆ ನೀಡಿದ್ದೇನೆ. ನನ್ನ ತಂದೆ–ತಾಯಿ ಹೆಸರಿನಲ್ಲಿ ಹತ್ತು ‘ಅಮ್ಮ ಆಂಬ್ಯುಲೆನ್ಸ್’ಗಳನ್ನು ನೀಡಲಾಗಿದೆ.ತುರ್ತು ಪರಿಸ್ಥಿತಿಗಳಲ್ಲಿ ಈ ಆಂಬ್ಯುಲೆನ್ಸ್ಗಳು ಅನೇಕ ಜೀವಗಳನ್ನು ಉಳಿಸಿವೆ.ಜಿಲ್ಲೆಗೆ ಎಂಆರ್‌ಐ ಸೌಲಭ್ಯ ಅತ್ಯಗತ್ಯವಾಗಿದ್ದು, ಶೀಘ್ರದಲ್ಲೇ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ಮುನಿಸು ಮರೆತು ವೇದಿಕೆ ಹಂಚಿಕೊಂಡ ಮುಖಂಡರು
ಹಿರಿಯ ಮುಖಂಡ ಹಾಗೂ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜಿನಪ್ಪ ಅವರು ಈ ಹಿಂದೆ ಶಾಸಕ ರೊಂದಿಗೆ ಉಂಟಾಗಿದ್ದ ಅಸಮಾಧಾನವನ್ನು ಮರೆತು, ಪೆರೇಸಂದ್ರದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ವೇದಿಕೆ ಹಂಚಿಕೊAಡರು. ವೇದಿಕೆಯಲ್ಲಿ ಇಬ್ಬರೂ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ಇನ್ನು ಬಿಜೆಪಿಯಲ್ಲಿ ಇದ್ದ ಹಿರಿಯ ಮುಖಂಡ ಪುರಡಗಡ್ಡೆ ಮುನೇಗೌಡ ಕೂಡ ಇದೇ ವೇದಿಕೆಯಲ್ಲಿ ಹಾಜರಿದ್ದು ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್,ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಗಟ್ಟಿಯಾಗಿದ್ದು,ಮುಂದಿನ ಎಲ್ಲಾ ಚುನಾವಣೆಗಳನ್ನು ಪಕ್ಷದ ಹಿರಿಯ ನಾಯಕರು ಯಲುವಳ್ಳಿ ರಮೇಶ್,ನಂದಿ ಆಂಜಿನಪ್ಪ, ಮಾಜಿ ಶಾಸಕರು ಶಿವಾನಂದ್ ಹಾಗೂ ಅನುಸೂಯಮ್ಮ ಅವರ ನೇತೃತ್ವದಲ್ಲಿ ನಡೆಸಿ,ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಈ ವೇಳೆ ಜಿಲ್ಲಾಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ, ನಗರಸಭಾ ಹಿರಿಯ ಸದಸ್ಯ ರಫೀಕ್, ಯಲುವಹಳ್ಳಿ ರಮೇಶ್, ಪುರದಗಡ್ಡೆ ಮುನೇಗೌಡ, ನಾಗಭೂಷಣ್ ಮತ್ತಿತರರು ಇದ್ದರು.